Advertisement

ಲಂಚ ಸ್ವೀಕಾರ ಆರೋಪ : BBMP ಸಹಾಯಕ ಎಂಜಿನಿಯರ್ ದೇವೇಂದ್ರಪ್ಪ ವಿಚಾರಣೆಗೆ ಆಯುಕ್ತರ ಅನುಮತಿ

07:00 PM Mar 23, 2021 | Team Udayavani |

ಬೆಂಗಳೂರು: ನಿರಾಕ್ಷೇಪಣ ಪತ್ರ ನೀಡುವುದಕ್ಕೆೆ 20 ಲಕ್ಷ ರೂ. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಬಿಬಿಎಂಪಿ ಸಹಾಯಕ ಎಂಜಿನಿಯರ್ ಎನ್.ಎಸ್ ದೇವೇಂದ್ರಪ್ಪ ಅವರನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಲು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅನುಮತಿ ನೀಡಿದ್ದಾರೆ.

Advertisement

ಸಹಾಯಕ ಎಂಜಿನಿಯರ್ (ಬೊಮ್ಮನಹಳ್ಳಿ ವಲಯದ ನಗರ ಯೋಜನೆ ಪ್ರಭಾರ ಸಹಾಯಕ ನಿರ್ದೇಶಕ) ಎನ್.ಎಸ್ ದೇವೇಂದ್ರಪ್ಪ ಅವರ ಮೇಲೆ ದಾಖಲಾದ ಭ್ರಷ್ಟಾಚಾರ ಪ್ರಕರಣದ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಲು ಅನುಮತಿ ಕೋರಲಾಗಿತ್ತು. ಇದರಂತೆ ಪಿ.ಸಿ. ಕಾಯದೆ 7(ಎ) ಪ್ರಕಾರ ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ ದೇವೇಂದ್ರಪ್ಪ ಅವರನ್ನು ನ್ಯಾಯಾಲಯಕ್ಕೆೆ ಹಾಜರುಪಡಿಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ :ನಿಜವಾದ ‘ಚಾಯ್ ವಾಲಾ’ ನಮ್ಮೊಂದಿಗಿದ್ದಾರೆ : ಪ್ರಿಯಾಂಕಗೆ ರಾಜನಾಥ್ ಸಿಂಗ್ ಚಾಟಿ ಏಟು

ಪ್ರಕರಣದ ಹಿನ್ನೆೆಲೆ ಏನು: ನಗರದ ಸಿಗ್ಮೀಸ್ ಬ್ರಿವರೀಸ್ ಘಟಕವನ್ನು ಪ್ರಾರಂಭಿಸಲು ಕಟ್ಟಡಕ್ಕೆೆ ನಿರಾಕ್ಷೇಪಣಾ ಪತ್ರ (ಒಸಿ) ನೀಡಲು ಅರ್ಜಿದಾರರಲ್ಲಿ ದೇವೇಂದ್ರಪ್ಪ 20 ಲಕ್ಷ ರೂ. ಲಂಚ ಕೇಳಿದ್ದರು. ಫೆ.5ಕ್ಕೆೆ ದೂರುದಾರರಿಂದ 20 ಲಕ್ಷ ರೂ. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದರು. ಫೆ.8ಕ್ಕೆೆ ಎರಡನೇ ಬಾರಿ ದೇವೇಂದ್ರಪ್ಪ ಅವರ ಮನೆಗೆ ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿ ಹಾಗೂ 480ಕ್ಕೂ ಹೆಚ್ಚು ಬಿಬಿಎಂಪಿ ಕಡತಗಳು, ಮೇಲಧಿಕಾರಿಗಳ ಹೆಸರಿನ ಸೀಲುಗಳು, 7.40 ಲಕ್ಷ ರೂ. ನಗದು ಸೇರಿ ಹಲವು ವಸ್ತುಗಳನ್ನು ವಶಕ್ಕೆೆ ಪಡೆದುಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next