Advertisement

ಫಡ್ನವೀಸ್- ಯಡಿಯೂರಪ್ಪ ಭೇಟಿಯಿಂದ ಅಭಿವೃದ್ಧಿ ಸಾಧ್ಯ : ಸಚಿವ ಸುರೇಶ್ ಅಂಗಡಿ

03:23 PM Sep 03, 2019 | Suhan S |

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿಯಿಂದ ಎರಡು ರಾಜ್ಯಗಳ ಸಂಬಂಧ ಗಟ್ಟಿಯಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಂಗಳವಾರ ಉದಯವಾಣಿ ಜೊತೆ ಮಾತಾನಾಡುವ ಸಂದರ್ಭದಲ್ಲಿ ಹೇಳಿದರು.

Advertisement

ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಭೇಟಿ ಯಿಂದ ನೀರಾವರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಷಯಗಳಿಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು. ದೇಶದ ರೈಲ್ವೆ ನಿಲ್ದಾಣ ಹಾಗೂ ರೈಲುಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಉದ್ದೇಶಿಸಲಾಗಿದ್ದು ಬರುವ ದಿನಗಳಲ್ಲಿ  ರೈಲು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆ ಗಳಲ್ಲಿ ಚಹಾ ಹಾಗೂ ಮೊಸರು ದೊರೆಯುವಂತೆ ಮಾಡಲಾಗುವದು ಎಂದರು. ಮಣ್ಣಿನ ಕುಡಿಕೆಗಳ ಬಳಕೆಯಿಂದ ಪರಿಸರ ನಾಶ ಆಗುವುದನ್ನು ತಪ್ಪಿಸಬಹುದು‌‌‌. ಸಾರ್ವಜನಿಕರು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಸಚಿವ ಸುರೇಶ ಅಂಗಡಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next