Advertisement

8.5 ಕೋಟಿ ರೂ. ಅನುದಾನ ಸಮಾನ ಹಂಚಿಕೆ: ಪುಟ್ಟರಾಜು

02:02 PM Feb 28, 2022 | Team Udayavani |

ಪಾಂಡವಪುರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಪುರಸಭೆಗೆ ಸರ್ಕಾರದಿಂದ ಹಂಚಿಕೆಯಾಗಿರುವ 8.5 ಕೋಟಿರೂ. ಅನುದಾನವನ್ನು ಪಟ್ಟಣದ ಎಲ್ಲಾ 23 ವಾರ್ಡ್ಗಳಿಗೂ ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು ಸೂಚಿಸಿದರು.

Advertisement

ಪುರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ತುರ್ತುಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಬಿಡುಗಡೆಯಾಗಿರುವ 10 ಕೋಟಿ ರೂ. ಅನುದಾನದಲ್ಲಿ 8.5 ಕೋಟಿ ರೂ.ಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದು,ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳಿಗೆ 145.78 ಲಕ್ಷ ರೂ, ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ 59.08 ಲಕ್ಷ ರೂ., ಬಡವರ ಕಲ್ಯಾಣಕ್ಕಾಗಿ 61.63 ಲಕ್ಷ ರೂ. ಅಂಗವಿಕಲರಕಲ್ಯಾಣಕ್ಕಾಗಿ 42.50 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.

ಕ್ರಿಯಾ ಯೋಜನೆ: ಪುರಸಭೆ ವ್ಯಾಪ್ತಿಯಲ್ಲಿ ಕೆ.ಬೆಟ್ಟಹಳ್ಳಿ ರಸ್ತೆಯಲ್ಲಿ ಹೊಸದಾಗಿ ಕರ್ನಾಟಕನಗರ ನೀರು ಸರಬರಾಜು ಮಂಡಳಿಯಿಂದನಿರ್ಮಿಸುತ್ತಿರುವ ಓವರ್‌ಹೆಡ್‌ ಟ್ಯಾಂಕ್‌ನಿಂದ ಪ್ರವಾಸಿ ಮಂದಿರವರೆಗೆ 200 ಮಿ.ಮೀ ಎಚ್‌ಡಿಪಿಇ ವಿತರಣಾ ಪೈಪ್‌ ಅಳವಡಿಸುವಕಾಮಗಾರಿಗೆ 11.82 ಲಕ್ಷ ರೂ.ಗಳನ್ನು ಅಮೃತನಗರೋತ್ಥಾನ ಯೋಜನೆಯಡಿ ಬರಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ.

ಫಿಲ್ಟರ್‌ಬೆಡ್‌ ಬದಲಾವಣೆ: ಹಾರೋಹಳ್ಳಿ ಪಂಪ್‌ಹೌಸ್‌ನ ಕಾಂಪೌಂಡ್‌ ವೆಲ್‌ಗೆ ನೀರುಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಗೈಡ್‌ವಾಲ್‌ನಿರ್ಮಾಣ ಮತ್ತು ಪಂಪ್‌ಹೌಸ್‌ ಸುತ್ತಕಾಂಪೌಂಡ್‌ ನಿರ್ಮಾಣ ಹಾಗೂ ದರಸಗುಪ್ಪೆ ಮತ್ತುಕೃಷ್ಣಾನಗರ ನೀರು ಶುದ್ಧೀಕರಣ ಘಟಕಗಳ ಫಿಲ್ಟರ್‌ ಬೆಡ್‌ ಬದಲಾವಣೆ ಕಾಮಗಾರಿಗೆ 50 ಲಕ್ಷ ರೂ, ಸ್ವಚ್ಛಭಾರತ್‌ ಮಿಷನ್‌ ಯೋಜನೆಯಡಿ ಸಮಗ್ರ ಘನತಾಜ್ಯ ನಿರ್ವಹಣೆಗಾಗಿ ವಿಸ್ಕೃತ ಯೋಜನೆಗೆ ಒಟ್ಟು ಮೊತ್ತು 500.19ಲಕ್ಷ ರೂ.ಗಳಿಗೆ.

243.46 ಲಕ್ಷ ರೂ.ಮೀರುವಂತಿಲ್ಲ: ಸ್ಥಳೀಯಸಂಸ್ಥೆ ವಂತಿಕೆ ಮೊತ್ತ 208.43 ಲಕ್ಷ ಬರಿಸಬೇಕಿದ್ದು, ಈಗಾಗಲೇ ಎಸ್‌ಎಫ್‌ಸಿ ಮತ್ತು 14ನೇ ಹಣಕಾಸುವಿವಿಧ ಸಾಲಿನ ಅನುದಾನಗಳಡಿಯಲ್ಲಿ ಈವರೆಗೆ77.02ಲಕ್ಷ ರೂ.ಗಳನ್ನು ಪಾವತಿಸಿದ್ದು, ಉಳಿಕೆಮೊತ್ತ 131.41 ಲಕ್ಷ ರೂ. ಪುರಸಭೆ ವಂತಿಕೆ ಪಾವತಿಸಲು, ರಸ್ತೆ ಅಭಿವೃದ್ಧಿ, ರಸ್ತೆ ಬದಿ ಚರಂಡಿನಿರ್ಮಾಣ ಕಾಮಗಾರಿ, ಪುಟ್‌ಪಾತ್‌ ಟ್ರಾಫಿಕ್‌ ಮ್ಯಾನೆಜ್‌ಮೆಂಟ್‌ ಅಂದರೆ, ರಸ್ತೆ ಸೂಚನಾ ಫಲಕ, ಮಾಹಿತಿ ಫಲಕ ಹಾಗೂ ಇತರೆ ಟ್ರಾಫಿಕ್‌ಗೆ ಸಂಬಂಧಪಟ್ಟ ಅಭಿವೃದ್ಧಿ ಕಾಮಗಾರಿಗಳಿಗೆ ಉಳಿದ ಮೊತ್ತ 347.80 ಲಕ್ಷ ರೂ.ಗಳಲ್ಲಿ ಶೇ.70 ಅಂದರೆ 243.46 ಲಕ್ಷಗಳನ್ನು ಮೀರುವಂತಿಲ್ಲ.

Advertisement

ಸರ್ವಾನುಮತದಿಂದ ಒಪ್ಪಿಗೆ: 228.45ಲಕ್ಷ ಬಳಕೆ ಮಾಡುವುದು, ಮಳೆ ನೀರು, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ 52 ಲಕ್ಷ ರೂ., ಇತರೆಅಭಿವೃದ್ಧಿ ಕಾಮಗಾರಿಗಳಾದ ಕಚೇರಿ ಕಟ್ಟಡ ನಿರ್ಮಾಣ, ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ, ಆಧುನಿಕ ಬಸ್‌ ನಿಲ್ದಾಣ ನಿರ್ಮಾಣ, ಮಾರುಕಟ್ಟೆ ಸಂಕೀರ್ಣ ನಿರ್ಮಾಣ,ಬೀದಿ ದೀಪ ಕಾಮಗಾರಿಗಳು, ಗ್ರಂಥಾಲಯ ಕಟ್ಟಡ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ ಉದ್ಯಾನವನ ಮತ್ತು ಆಟದ ಮೈದಾನದ ಕಾಮಗಾರಿಗಳನ್ನು ಕೈಗೊಳ್ಳಲು 67.34 ಲಕ್ಷ ರೂ.ಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಮಧ್ಯವರ್ತಿಗಳನ್ನು ಅವಲಂಬಿಸಬೇಡಿ: ಸದಸ್ಯ ಪಾರ್ಥಸಾರಥಿ ಮಾತನಾಡಿ, ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು,ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆಮಧ್ಯವರ್ತಿಗಳನ್ನೇ ಅವಲಂಬಿಸಬೇಕಾದ ಪರಿಸ್ಥತಿಇದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.ಪಟ್ಟಣದ ಡಾ.ರಾಜ್‌ಕುಮಾರ್‌ ವೃತ್ತದಲ್ಲಿ ರಾಜ್‌ಕುಮಾರ್‌ ಹಾಗೂ ಕಾಮನ ಚೌಕದಲ್ಲಿ ಪುನೀತ್‌ರಾಜಕುಮಾರ್‌ ಪುತ್ಥಳಿ ಸ್ಥಾಪಿಸಬೇಕು. ಎಲ್ಲಾವಾರ್ಡ್‌ಗಳಿಗೂ ನಾಮಫಲಕ ಮತ್ತು ಸೂಚನಾ ಫಲಕ ಅಳವಡಿಸಬೇಕು. ಚರಂಡಿಗಳಿಗಳಿಗೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಿ ಸ್ವತ್ಛತೆಗೆ ಆದ್ಯತೆನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಈ ವೇಳೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು,ಉಪಾಧ್ಯಕ್ಷೆ ಶ್ವೇತಾ ಉಮೇಶ್‌, ಮುಖ್ಯಾ ಕಾರಿವೀಣಾ, ಸದಸ್ಯರದ ಶಿವಕುಮಾರ್‌, ಆರ್‌.ಸೋಮಶೇಖರ್‌, ಗೀತಾ ಅರು¾ಗಂ, ಬಿ.ವೈ.ಬಾಬು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next