Advertisement

ಕಾಮಗಾರಿ ಕಳಪೆಯಾದ್ರೆ  ಗುತ್ತಿಗೆದಾರ ಕಪ್ಪುಪಟ್ಟಿಗೆ

01:41 PM Mar 05, 2022 | Team Udayavani |

ಕೆ.ಆರ್‌.ನಗರ: ದೇವಸ್ಥಾನದ ಕಾಮಗಾರಿಯಲ್ಲಿಗುಣಮಟ್ಟವನ್ನು ಕಾಪಾಡಿಕೊಳ್ಳದಿದ್ದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವುದರ ಜತೆಗೆ  ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಪಟ್ಟಣದ ಹೊರವಲಯದಲ್ಲಿರುವ ಹಳೆಎಡ ತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಜೀರ್ಣೋದ್ಧಾರ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ಮಹಾಶಿವರಾತ್ರಿ ಹಬ್ಬದ ದಿವಸ ಪೂಜೆ ಸಲ್ಲಿಸಲು ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿ ವೀಕ್ಷಣೆಗಾಗಿ ಶುಕ್ರವಾರ ಭೇಟಿ ನೀಡಿದ್ದೇನೆ. ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಗುತ್ತಿಗೆದಾರನ ಬೇಜವಾಬ್ದಾರಿ ತನದಿಂದಕಾಮಗಾರಿ ಸರಿಯಿಲ್ಲದ ಕಾರಣ ಅದನ್ನು ಕೆಡವಿಹಾಕಿಸಿ ಹೊಸದಾಗಿ ನಿರ್ಮಿಸಲಾಗಿದೆ. ಆದರೂ ನನ್ನಮನಸ್ಸಿಗೆ ಈ ಕಾಮಗಾರಿಯು ಸಮಾಧಾನನೀಡುತ್ತಿಲ್ಲ. ಕಾಮಗಾರಿಗೆ ಬಳಸಿರುವ ಇಟ್ಟಿಗೆಮತ್ತಿತರ ಕಟ್ಟಡ ನಿರ್ಮಾಣ ಪರಿಕರಗಳನ್ನುಬಳಸುವಾಗ ಗುಣಮಟ್ಟದಿಂದ ಕುಡಿವುದನ್ನೇಉಪಯೋಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈಗ ನೀಡಿರುವ ಅನುದಾನದ ಜತೆಗೆ ಮತ್ತೆ 1.80ಕೋಟಿ ರೂ.ಗಳ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದ್ದು,ಶೀಘ್ರದಲ್ಲಿಯೇ ಅನುದಾನ ಮಂಜೂರಾಗುವ ಭರವಸೆ ಇದೆ ಎಂದ ಶಾಸಕರು, ದೇವಾಲಯದಮುಂಭಾಗದಲ್ಲಿ ಅಗತ್ಯವಿರುವ ಕಾಮಗಾರಿಯನ್ನು ಮಾಡಿಸಲಾಗುವುದು. ಭಕ್ತರಿಗೆ ಇದರ ಬಗ್ಗೆಯಾವುದೇ ರೀತಿಯ ಅನುಮಾನ ಬೇಡ ಎಂದು ತಿಳಿಸಿದರು.

Advertisement

ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್‌.ಕೆ.ಸತೀಶ್‌, ಮುಂಜನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷಅನೀಫ್ಗೌಡ, ಯುವ ಜೆಡಿಎಸ್‌ ನಗರಾಧ್ಯಕ್ಷ ಹರ್ಷಿತ್‌ಕುಮಾರ್‌, ಸಾ.ರಾ.ಯುವಸೇನೆ ತಾಲೂಕುಅಧ್ಯಕ್ಷ ಬಂಡೆಕುಮಾರ್‌, ಪಾರುಪತ್ತೆಗಾರರಾದಆರತಿ, ಮುಖಂಡರಾದ ಮಂಜುನಾಥ್‌, ಸತೀಶ್‌,ರವಿ, ಗುತ್ತಿಗೆದಾರ ಕಿಶೋರ್‌ ನತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next