Advertisement

9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ: ತಿಪ್ಪಾರೆಡ್ಡಿ

07:19 PM Dec 16, 2020 | Suhan S |

ಚಿತ್ರದುರ್ಗ: ನಗರಸಭೆಯ 14 ಮತ್ತು 15ನೇ ಹಣಕಾಸು ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 9 ಕೋಟಿ ರೂ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಆರಂಭವಾಗಲಿವೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ವಿ.ಪಿ ಬಡಾವಣೆ ಒಂದನೇ ಕ್ರಾಸ್‌ನಲ್ಲಿ 34 ಲಕ್ಷ ರೂ. ವೆಚ್ಚದ ರಾಜಕಾಲುವೆಸೇತುವೆ ಕಾಮಗಾರಿಗೆ ಚಾಲನೆ ನೀಡಿಅವರು ಮಾತನಾಡಿದರು. ಇಲ್ಲಿರುವಸೇತುವೆ ಸಾಕಷ್ಟು ಹಳೆಯದಾಗಿದ್ದು, ವಾಹನಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಬದಲಾಯಿಸಿ ಹೊಸ ಸೇತುವೆ ನಿರ್ಮಾಣಕ್ಕೆಜನರು ಒತ್ತಾಯಿಸಿದ್ದರು. ನಗರಸಭೆಯ 14ನೇಹಣಕಾಸು ಯೋಜನೆಯಡಿ ಕಾಮಗಾರಿನಡೆಸಲು ಕಳೆದ 4 ತಿಂಗಳ ಹಿಂದೆಯೇಅನುಮತಿ ಪಡೆದಿದ್ದು ಟೆಂಡರ್‌ ಕೂಡ ಆಗಿದೆ.ಈಗ ಕಾಮಗಾರಿ ಆರಂಭವಾಗಲಿದೆ ಎಂದರು.

14 ಮತ್ತು 15 ನೇ ಹಣಕಾಸುಯೋಜನೆಯಡಿ ನಗರದಲ್ಲಿ ಕಲ್ವರ್ಟ್‌, ಚರಂಡಿರಿಪೇರಿ, ನಲ್ಲಿ ಸಂಪರ್ಕ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 9 ಕೋಟಿ ರೂ.ಗಳನ್ನುಮೀಸಲಿಡಲಾಗಿದೆ. ಚಿತ್ರದುರ್ಗ ನಗರದಲ್ಲಿಸುಮಾರು 400 ಕೋಟಿ ರೂ. ಮೊತ್ತದಕಾಮಗಾರಿಗಳು ನಡೆಯುತ್ತಿವೆ. ಸಿಸಿ ರಸ್ತೆಗಳ ನಿರ್ಮಾಣ ತ್ವರಿತವಾಗಿ ನಡೆಯುತ್ತಿದ್ದು, ಕೋಟೆ ರಸ್ತೆಯ ದೊಡ್ಡಪೇಟೆ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಿಂದ ಮದಕರಿ ವೃತ್ತ ಹಾಗೂ ಒನಕೆ ಓಬವ್ವ ವೃತ್ತದವರೆಗೆ ನಡೆಯುತ್ತಿವೆ. ನಂತರ ರಾಷ್ಟ್ರನಾಯಕ ಎಸ್‌. ನಿಜಲಿಂಗಪ್ಪಅವರ ಮನೆ ಮುಂದಿನ ರಸ್ತೆ ನಿರ್ಮಾಣವನ್ನೂಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ವೇತಾ ವೀರೇಶ್‌, ಸದಸ್ಯ ವೆಂಕಟೇಶ್‌, ಪೌರಾಯುಕ್ತಹನುಮಂತರಾಜು, ಇಂಜಿನಿಯರ್‌ಗಳಾದ ಮನೋಹರ್‌, ಕಿರಣ್‌, ಉದ್ಯಮಿಅರುಣ್‌ಕುಮಾರ್‌, ಮಹಡಿ ಶಿವಮೂರ್ತಿ, ರವಿಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next