ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದೆ.
Advertisement
ಇಲ್ಲಿ ಪಿಡಿಒ ಆಗಿದ್ದ ಯು.ಡಿ. ಶೇಖರ್ ಅವರನ್ನು 4 ತಿಂಗಳ ಹಿಂದೆ ಸುಬ್ರಹ್ಮಣ್ಯ ಗ್ರಾ.ಪಂ.ಗೆ ಪೂರ್ಣಕಾಲಿಕವಾಗಿ ನಿಯೋಜನೆ ಮಾಡಲಾಗಿದೆ. ಈ ಹಿಂದೆ ಅವರನ್ನು ಅಲ್ಲಿಗೆ ಪ್ರಭಾರ ನೆಲೆಯಲ್ಲಿ ವಾರದಲ್ಲಿ ಮೂರು ದಿವಸ ನಿಯೋಜಿಸಲಾಗಿತ್ತು. ಐವರ್ನಾಡು ಗ್ರಾ.ಪಂ.ಗೆ ಸೆಕೆಂಡ್ ಗ್ರೇಡ್ ಕಾರ್ಯದರ್ಶಿಯಾಗಿರುವ ಮರಳೀಧರ ಅವರನ್ನು ನಾಲ್ಕು ತಿಂಗಳ ಹಿಂದೆ ಪ್ರಭಾರ ಪಿ.ಡಿ.ಒ. ಆಗಿ ನೇಮಿಸಲಾಗಿದೆ.
ಐವರ್ನಾಡಿನ ಪೂರ್ಣಕಾಲಿಕ ಪಿ.ಡಿ.ಒ. ಆಗಿರುವ ಯು.ಡಿ. ಶೇಖರ್ ಅವರನ್ನು ರಾಜಕೀಯ ಉದ್ದೇಶದಿಂದ ಸುಬ್ರಹ್ಮಣ್ಯಕ್ಕೆ ನಿಯೋಜನೆ ಮಾಡಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಶೇಖರ್ ಅವರು ಉತ್ತಮ ಅಧಿಕಾರಿ. ಅವರನ್ನು ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಪ್ರತಿಭಟಿಸಿತ್ತು.
Related Articles
Advertisement
ಗ್ರಾಮಸಭೆ ರದ್ದುಫೆ. 6ರಂದು ಐವರ್ನಾಡು ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಸಭೆ ಕರೆಯಲಾಗಿತ್ತು. ಐವರ್ನಾಡಿಗೆ ಪೂರ್ಣಕಾಲಿಕ ಪಿಡಿಒ ನೇಮಕ ಆಗುವ ತನಕ ಗ್ರಾಮಸಭೆ ನಡೆಸಬಾರದು ಎಂದು ಒತ್ತಾಯಿಸಿದ ಗ್ರಾಮಸ್ಥರು, ಗ್ರಾಮಸಭೆಯನ್ನೇ ರದ್ದುಗೊಳಿಸಿದ್ದಾರೆ. ‘ಐವರ್ನಾಡಿಗೆ ರೆಗ್ಯುಲರ್ ಪಿಡಿಒ ಇಲ್ಲದಿರುವ ಕಾರಣ ಗ್ರಾಮಸಭೆ ನಡೆಸಲು ಗ್ರಾಮಸ್ಥರು ಬಿಟ್ಟಿಲ್ಲ. ಮುಂದಿನ ದಿನದಲ್ಲಿ ಹೋರಾಟದ ಬಗ್ಗೆ ಗ್ರಾಮಸ್ಥರೇ ನಿರ್ಣಯ ತೆಗೆದುಕೊಳ್ಳುತ್ತಾರೆ’ ಎಂದು ಗ್ರಾ.ಪಂ. ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ ಹೇಳಿದ್ದಾರೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಮಸ್ಥರು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಸ್ಥಳೀಯರಾದ ಜನಾರ್ದನ್ ಎಚ್ಚರಿಸಿದ್ದಾರೆ. ಅಭಿವೃದ್ಧಿ ಕುಂಠಿತ
ಐವರ್ನಾಡು ಗ್ರಾ.ಪಂ. ಗ್ರಾಮ ವಿಕಾಸ ಯೋಜನೆಗೆ ಆಯ್ಕೆಗೊಂಡಿದ್ದು, ಗುದ್ದಲಿ ಪೂಜೆ ನಡೆದು, ಕಾಮಗಾರಿ ಪ್ರಾರಂಭಿ ಸಲಾಗಿತ್ತು. ಯು.ಡಿ. ಶೇಖರ್ ವರ್ಗಾವಣೆ ಬಳಿಕ ಅದು ನಿಧಾನಗತಿ ಕಂಡಿದೆ. ಯಾವ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಸಭಾ ಭವನ, ಶ್ಮಶಾನ, ತ್ಯಾಜ್ಯ ಘಟಕ ಕಾಮಗಾರಿ ನನೆಗುದಿಗೆ ಬಿದ್ದಿದೆ. ಉದ್ಯೋಗ ಖಾತರಿ ಯೋಜನೆ ಫಲಾ ನುಭವಿಗಳಿಗೆ ಸಕಾಲಕ್ಕೆ ತಮ್ಮ ಕೂಲಿ ಹಣ ದೊರೆಯುತ್ತಿಲ್ಲ. ನಾಟ್ ರೀಚೆಬಲ್
ನೊಂದ ಗ್ರಾಮಸ್ಥರು ತಮ್ಮ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರಭಾರ ಪಿಡಿಒಗೆ ಕರೆ ಮಾಡಿದರೆ, ಬಹುತೇಕ ಸಮಯ ಅವರ ಫೋನ್ ನಾಟ್ ರೀಚೆಬಲ್ ಇರುತ್ತದೆ. ಒಮ್ಮೊಮ್ಮೆ ರಿಂಗಣಿಸಿದರೂ ಅವರು ರಿಸೀವ್ ಮಾಡುವುದಿಲ್ಲ ಎಂಬ ಆರೋಪ ಗ್ರಾಮಸ್ಥರದು. ಐವರ್ನಾಡಿಗೆ ಪೂರ್ಣಕಾಲಿಕ ಪಿಡಿಒ ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಭಿವೃದ್ಧಿಗೆ ತೊಡಕು
ಯು.ಡಿ. ಶೇಖರ್ ಅವರು ಉತ್ತಮ ಅಧಿಕಾರಿ. ಅವರ ಮೂಲ ಹುದ್ದೆ ಇರುವುದು ಐವರ್ನಾಡಿನಲ್ಲಿ. ಕಾನೂನು ನಿಯಮ ಮೀರಿ ದ.ಕ. ಜಿ.ಪಂ. ಸಿಇಒ ಶೇಖರ್ ಅವರನ್ನು ಸುಬ್ರಹ್ಮಣ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಇದರಿಂದ ನನ್ನ ತಾ.ಪಂ. ಕ್ಷೇತ್ರದ ಗ್ರಾಮವಾದ ಐವರ್ನಾಡಿನಲ್ಲಿ ಅಭಿವೃದ್ಧಿಗೆ ತೊಡಕಾಗುತ್ತಿದೆ.
– ರಾಧಾಕೃಷ್ಣ ಬೊಳ್ಳೂರು,
ಸ್ಥಾಯಿ ಸಮಿತಿ ಅಧ್ಯಕ್ಷ, ತಾ.ಪಂ., ಸುಳ್ಯ ಪೂರ್ಣಕಾಲಿಕ ಹುದ್ದೆ ಬೇಕು
ಐವರ್ನಾಡು ಗ್ರಾ.ಪಂ. ಅಭಿವೃದ್ಧಿ ಕೆಲಸದಲ್ಲಿ ಸಂಪೂರ್ಣ ಹಿಂದಿದೆ. ಈಗಿನ ಪಿ.ಡಿ.ಒ. ವಾರಕ್ಕೆ ಒಂದು ದಿವಸ ಬರುತ್ತಾರೆ. ಅವರು ಬರುವುದು, ಹೋಗುವುದು ನಮಗೆ ಗೊತ್ತಾಗುವುದಿಲ್ಲ.ನಮಗೆ ಪೂರ್ಣಕಾಲಿಕ ಪಿ.ಡಿ.ಒ. ಬೇಕು.
– ರಾಜೀವಿ ಪರ್ಲಿಕಜ
ಐವರ್ನಾಡು ಗ್ರಾ.ಪಂ. ಅಧ್ಯಕ್ಷರು ತೇಜೇಶ್ವರ್ ಕುಂದಲ್ಪಾಡಿ