Advertisement
ಪಟ್ಟಣ ಹತ್ತಿರದ ನೆಂಟನಾಗಿರುವುದರಿಂದ ಈ ಗ್ರಾಮದ ಹಲವರು ಪಟ್ಟಣದ ಕೈಗಾರಿಕೆ ಹಾಗೂ ಇತರ ಉದ್ಯೋಗಕ್ಕೆ ತೆರಳುತ್ತಾರೆ. ಮುಡಾ ಬಡಾವಣೆ, ಖಾಸಗಿ ಬಡಾವಣೆ ಇಲ್ಲಿ ನಿರ್ಮಾಣವಾಗುತ್ತಿದ್ದು ನಗರದಂತೆ ಬೆಳೆಯುವ ಮುನ್ಸೂಚನೆ ಗೋಚರಿಸುತ್ತಿದೆ.
Related Articles
Advertisement
ಮಾಲಿನ್ಯ ತಡೆ ಇಲ್ಲಿಯೂ ನಂದಿನಿ ನದಿಯೇ ಜೀವಾಳ. ಆದರೆ ಅದರಲ್ಲಿ ಹೂಳು ತುಂಬಿದ ಪರಿಣಾಮ ಕೃಷಿಗೆ ಸಮಸ್ಯೆಯಾಗುತ್ತಿದೆ. ಹೂಳು ತೆಗೆದು ಕೃಷಿಗೆ ಅನುಕೂಲ ಮಾಡಿಕೊಟ್ಟರೆ ಗ್ರಾಮದ ಆರ್ಥಿಕತೆಯೂ ಬೆಳೆಯಬಹುದು. ಕೃಷಿಗೆ ಪೂರಕವಾಗಿ ನಂದಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿದಲ್ಲಿ ಗ್ರಾಮದ ನೀರಿನ ಬೇಡಿಕೆಯೂ ಈಡೇರಲಿದೆ. ಕೃಷಿಗೂ ಉತ್ತೇಜನ ದೊರಕಲಿದೆ. ಇದರೊಂದಿಗೆ ನದಿ ಮಾಲಿನ್ಯ ವಾಗದಂತೆ ತಡೆದರೆ ಮೀನುಗಾರಿಕೆ ವೃತ್ತಿಗೂ ಅನುಕೂಲವಾಗಲಿದೆ. ಅಕ್ರಮವಾಗಿ ಒಳಚರಂಡಿ ನೀರು ನಂದಿನಿ ನದಿಗೆ ಸೇರದಂತೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನದಿಯ ಹೂಳು ತೆಗೆಯಲು ಅಂದಾಜು 5 ಕೋ. ರೂ ಅಗತ್ಯವಿದ್ದು, ಸರಕಾರ ಅನು ಮೋದಿಸಬೇಕಿದೆ. ಹಾಗಾಗಿ ಮಾಲಿನ್ಯ ಮುಕ್ತ ಮಾಡುವ ಕೆಲಸ ಆಗ ಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ.
ಘನ ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿದ್ದರೂ ಹಸಿ,ಒಣ ಕಸ ವಿಂಗಡನೆ ವ್ಯವಸ್ಥೆ ಆರಂಭವಾಗಿಲ್ಲ. ಹೀಗಾಗಿ ಕಸವನ್ನು ರಸ್ತೆ ಬದಿ ಬಿಸಾಡುವ ಪ್ರವೃತ್ತಿ ಇದೆ. ಇದಕ್ಕೂ ಪರಿಹಾರ ಹುಡುಕಬೇಕಿದೆ. ದಾರಿ ದೀಪದ ವ್ಯವಸ್ಥೆ ಸುಧಾರಿಸಬೇಕಿದೆ.
ಸೀಮಿತ ಸಂಖ್ಯೆಯಲ್ಲಿ ಖಾಸಗಿ ಬಸ್ ಗಳ ಸಂಚಾರವಿದೆ. ಒಂದು ನರ್ಮ್ ಬಸ್ ಮದ್ಯ ಗ್ರಾಮದಲ್ಲಿ ಸಂಚರಿಸುತ್ತಿದ್ದು, ಚೇಳಾçರಿಗೂ ಸೇರಿ ಎರಡಾದರೂ ನರ್ಮ್ ಬಸ್ ಅಗತ್ಯವಿದೆ ಎಂಬುದು ಜನರ ಬೇಡಿಕೆ.
ಅಗೋಳಿ ಮಂಜಣ್ಣ ನೆನಪು ತುಳುನಾಡಿನ ವೀರ ಪುರುಷ ಅಗೋಳಿ ಮಂಜಣ್ಣ ಸುರತ್ಕಲ್ ಕಟ್ಲದಲ್ಲಿ ಜನಿಸಿದರೂ, ಚೇಳಾçರುಗುತ್ತು ಅವರ ಅಜ್ಜಿ ಮನೆ ಚೇಳಾçರಿನಲ್ಲಿದ್ದು 300-400 ವರ್ಷಗಳ ಇತಿಹಾಸವಿದೆ. ವಿವಿಧ ಕಾರ್ಯಕ್ರಮ ಇವರ ಹೆಸರಿನಲ್ಲಿ ಜರಗುತ್ತದೆ.
ಮೂಲ ಸೌಕರ್ಯ ಒದಗಿಸಿ ಚೇಳ್ಯಾರುವಿನಲ್ಲಿ ಶಾಲೆ, ಪದವಿಪೂರ್ವ ಕಾಲೇಜಿದೆ. ಬೇರೆ ಆರಂಭಿಸುವ ಬದಲು ಇದನ್ನೇ ಸುಸಜ್ಜಿತಗೊಳಿಸಿದರೆ ಉತ್ತಮ. ನಗರ ಸಮೀಪ ಇದ್ದು, ಇನ್ನಷ್ಟು ಮೂಲ ಸೌಕರ್ಯ ಒದಗಿಸಬೇಕು. –ವೇಣುವಿನೋದ್ ಶೆಟ್ಟಿ, ಚೇಳ್ಯಾರು
ಲಕ್ಷ್ಮೀ ನಾರಾಯಣ ರಾವ್