Advertisement

ಅರ್ಹರಿಗೆ ಯೋಜನೆ ತಲುಪಿದಾಗ ಗ್ರಾಮಗಳ ಅಭಿವೃದ್ಧಿ

12:16 PM Jul 29, 2017 | |

ಮೈಸೂರು: ಗ್ರಾಮೀಣ ಅಭಿವೃದ್ಧಿಗಾಗಿ ಸರ್ಕಾರಗಳು ಜಾರಿಗೊಳಿಸುವ ಯೋಜನೆ ಹಾಗೂ ನೀಡುವ ಸವಲತ್ತುಗಳು ಅರ್ಹ ಫ‌ಲಾನುಭವಿಗಳಿಗೆ ತಲುಪಿದಾಗ ಮಾತ್ರ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಗಾಂಧಿ ಗ್ರಾಮೀಣ ಸಂಸ್ಥೆ ಡೀನ್‌ ಪೊ›.ಎನ್‌.ಡಿ.ಮಣಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಿಂದ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರದ ಕಾರ್ಯಕ್ರಮಗಳ ಮೂಲಕ ಸುಸ್ಥಿರ ಗ್ರಾಮೀಣ ಅಭಿವೃದ್ಧಿ-ದೂರದೃಷ್ಟಿ ಮತ್ತು ಕಾರ್ಯ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಂಚವಾರ್ಷಿಕ ಯೋಜನೆ ಮಾತ್ರವಲ್ಲದೆ ಇನ್ನಿತರ ವಿಶೇಷ ಯೋಜನೆಗಳನ್ನು ನೀಡುವ ಮೂಲಕ ಇನ್ನಷ್ಟು ಅನುದಾನ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಯತ್ತ ಗಮನಹರಿಸುತ್ತಿವೆ. ಅದರಂತೆ ಇತ್ತೀಚೆಗೆ ಸ್ವತ್ಛಬಾರತ, ಕೌಶಲ್ಯಭಾರತ, ಡಿಜಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಮೊದಲಾದ ಹೊಸ ಯೋಜನೆಗಳನ್ನು ಕೈಗೆತ್ತುಕೊಂಡಿದೆ.

ಆದರೆ, ಈ ಯೋಜನೆ ಅಥವಾ ಕಾರ್ಯ ಕ್ರಮಗಳಿಂದ ಗ್ರಾಮೀಣಾಭಿವೃದ್ಧಿಯಲ್ಲಿ ಸ್ಥಿರತೆ ಕಾಣಲು ಸಾಧ್ಯವೇ ಎಂಬುದನ್ನು ಯೋಚಿಸಬೇಕಿದ್ದು, ಸರ್ಕಾರದ ಯೋಜನೆಗಳ ಜತೆಗೆ ಆರ್ಥಿಕ, ಸಾಮಾಜಿಕ ಹಾಗೂ ಪರಿಸರದ ಸಮತೋಲನದಿಂದ ಗ್ರಾಮೀಣಾಭಿವೃದ್ಧಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರಗಳು ಜಾರಿಗೊಳಿಸಿರುವ 125 ಅಭಿವೃದ್ಧಿ ಕಾರ್ಯಕ್ರಮಗಳು ಪರಿಪೂರ್ಣವಾಗಿ ಜಾರಿಯಾದಲ್ಲಿ ಮಾತ್ರ ಗ್ರಾಮಗಳು ಸುಸ್ಥಿರ ಅಭಿವೃದ್ಧಿ ಕಾಣಲಿವೆ ಎಂದರು.

ಈ ಹಿಂದೆ ಯಾವುದೇ ಹಳ್ಳಿಗಳಲ್ಲಿ ಬರ ಅಥವಾ ಅತಿವೃಷ್ಟಿ ಸಂಭವಿಸಿದಾಗ ಸರ್ಕಾರಗಳು ಯಾವುದೇ ಪರೀಕ್ಷೆ ನಡೆಸದೆ ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಉಪಗ್ರಹಗಳ ಸಹಾಯದಿಂದ ಬರ ಅಥವಾ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಸ್ಥಿತಿ ಏನೆಂಬುದನ್ನು ಕುಳಿತಲ್ಲಿಯೇ ತಿಳಿಯಬಹುದಾಗಿದೆ.

Advertisement

ಅತಿವೃಷ್ಟಿ ಎದುರಾದ ಸಂದರ್ಭದಲ್ಲಿ ಅದನ್ನು ಅಳೆಯಲು ರ್ಯಾಡಾರ್‌, ಲೀಡಾರ್‌ ಹಾಗೂ ಡ್ರೋಣ್‌ಗಳನ್ನು ಬಳಸಲಾಗುತ್ತಿದ್ದು, ಇದರ ಜತೆಗೆ ಅನಿಮೇಷನ್‌ ತಂತ್ರಜಾnನದ ಮೂಲಕ ಅಣೆಕಟ್ಟಿನ ಸಂರಕ್ಷಣೆ ಸಹ  ಮಾಡಬಹುದಾಗಿದೆ ಎಂದ ಅವರು, ಸರ್ಕಾರ ಪ್ರತಿ ಹಳ್ಳಿಗಳಲ್ಲಿ 100 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುತ್ತಿದ್ದರೂ, ಈ ವಿದ್ಯುತ್‌ ಯಾವುದಕ್ಕೆ ಉಪಯೋಗವಾಗುತ್ತಿದೆ ಎಂಬುದನ್ನು ಪರೀಕ್ಷಿಸಬೇಕಿದೆ ಎಂದು ಹೇಳಿದರು.

ಮುಕ್ತ ವಿವಿ ಕುಲಸಚಿವ ಪೊ›.ಕೆ.ಜಿ.ಚಂದ್ರಶೇಖರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬಹುತೇಕ ಯುವಕರು ಗ್ರಾಮೀಣ ಪ್ರದೇಶಗಳಿಂದ ಹೊರಬಂದು ಪಟ್ಟಣಗಳನ್ನು ಸೇರುತ್ತಿದ್ದಾರೆ. ಹೀಗಾಗಿ ಇಂದು ಅನೇಕ ಹಳ್ಳಿಗಳಲ್ಲಿ ವಯಸ್ಸಾದವರೂ ಹಾಗೂ ಮಕ್ಕಳಿದ್ದಾರೆ, ಈ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರತಿಯೊಂದು ಆಹಾರ ಪದಾರ್ಥಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಈ ಹಿನ್ನೆಲೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಬೇಕಿದೆ ಎಂದರು. ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಮಹಾದೇವಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್‌. ರಮಾನಂದ, ವಿಭಾಗದ ಸಂಘಟನಾ ಕಾರ್ಯದರ್ಶಿ ಡಾ.ಆರ್‌.ಎಚ್‌.ಪವಿತ್ರ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next