Advertisement

ವೀರಾಪುರ, ಬಾನಂದೂರು ಅಭಿವೃದ್ಧಿಗೆ ಚಿಂತನೆ

11:34 AM Jan 27, 2019 | |

ರಾಮನಗರ: ಸಿದ್ಧಗಂಗಾಶ್ರೀ ಹುಟ್ಟೂರು ವೀರಾಪುರ, ಚುಂಚಶ್ರೀ ಹುಟ್ಟೂರು ಬಾನಂದೂರು ಗ್ರಾಮಗಳನ್ನು ಸರ್ಕಾರವೇ ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಸಿಎಂ ಕುಮಾರಸ್ವಾಮಿ ಅವರ ಜೊತೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದ್ರಲ್ಲಿ ಧ್ವಜಾರೋಹಣ ನೆರೆವೇರಿಸಿ, ಧ್ವಜ ವಂದನೆ ಸ್ವೀಕರಿಸಿದ ಅವರು ಮಾತನಾಡಿ, ಇಬ್ಬರು ಧಾರ್ಮಿಕರ ಪುರುಷರಿಗೆ ಜನ್ಮ ನೀಡಿದ ಈ ಜಿಲ್ಲೆ ಶ್ರೇಷ್ಠವಾಗಿದೆ ಎಂದರು.

ರಾಜೀವ್‌ ಗಾಂಧಿ ವಿವಿ ವಿಳಂಬ: ರಾಮನಗರದಲ್ಲಿ ಬಹು ನಿರೀಕ್ಷೆಯ ರಾಜೀವ್‌ ಗಾಂಧಿ ವಿವಿ ಕಟ್ಟಡ ನಿರ್ಮಾಣ ವಿಳಂಬಕ್ಕೆ ಬಿಜೆಪಿ ಕಾರಣವಾಗಿದೆ. ಆ ಪಕ್ಷಕ್ಕೆ ರಾಮನಗರದಲ್ಲಿ ವಿವಿ ಕಟ್ಟಡ ನಿರ್ಮಿಸುವುದು ಇಷ್ಟವಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ. ಅಲ್ಲದೆ, 5 ಮಂದಿ ಮತ್ತೆ ನ್ಯಾಯಾಲಯದ ಮಟ್ಟಿಲೇರಿದ್ದಾರೆ. ಎಲ್ಲವೂ ಇತ್ಯರ್ಥವಾಗುವ ಮತ್ತು ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ ಎಂದರು.

ವರ್ಷದಲ್ಲಿ ಜಿಲ್ಲಾಸ್ಪತ್ರೆ ಕಾರ್ಯಾರಂಭ: ನಗರದಲ್ಲಿ ನಿರ್ಮಾಣವಾಗುತ್ತಿರುವ 63.55 ಕೋಟಿ ರೂ. ವೆಚ್ಚದ ಜಿಲ್ಲಾಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 6 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನೊಂದು ವರ್ಷದಲ್ಲಿ ಜಿಲ್ಲಾಸ್ಪತ್ರೆ ನೂತನ ಕಟ್ಟಡದಲ್ಲಿ ಆರಂಭವಾಗಲಿದೆ. ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ 25 ಎಕರೆ ಭೂಮಿ ಗುರುತಿಸಲಾಗಿದೆ. 600 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ ಎಂದು ಹೇಳಿದರು.

ನಾಲೆಗಳ ಆಧುನೀಕರಣ: ಜಿಲ್ಲೆಯಲ್ಲಿರುವ ಜಲಾಶಯಗಳ ನಾಲೆಗಳ ಅಧುನೀಕರಣಕ್ಕೆ ಆದ್ಯತೆ ನೀಡುವ ಉದ್ದೇಶವಿದೆ. ಕಣ್ವ ಜಲಾಶಯದ ಎಡ ಹಾಗೂ ಬಲದಂಡೆ ನಾಲೆಗಳ ಆಧುನೀಕರಣವನ್ನು 38.50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮಂಚನಬೆಲೆ ಮತ್ತು ಇಗ್ಗಲೂರು ಬ್ಯಾರೇಜ್‌ ನಾಲೆಗಳ ಆಧುನೀಕರಣಕ್ಕೂ ಯೋಜನೆ ಸಿದ್ಧವಾಗುತ್ತಿದೆ ಎಂದು ಜಿಲ್ಲೆಯಲ್ಲಿ ಜಾರಿಯಲ್ಲಿರುವ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಪೋಡಿ ಮುಕ್ತ ಜಿಲ್ಲೆ: ಪೋಡಿ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ರಾಜ್ಯವ್ಯಾಪ್ತಿ ಪೋಡಿ ಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಆಯ್ಕೆಯಾದ 344 ಗ್ರಾಮಗಳ ಪೈಕಿ 264 ಗ್ರಾಮಗಳಲ್ಲಿ ಅಳತೆ ಪೂರ್ಣಗೊಳಿಸಿ, ಒಟ್ಟು 53798 ಆರ್‌.ಟಿ.ಸಿಗಳನ್ನು ಸೃಜಿಸಲಾಗಿದೆ. ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಮಕ್ಕಳ ಪ್ರಪಂಚ ಯೋಜನೆಗೆ ಅನುದಾನ: ಕಣ್ವ ಜಲಾಶಯದ ಬಳಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಕ್ಕಳ ಪ್ರಪಂಚ ಯೋಜನೆಗೆ ಈಗಾಗಲೇ 176 ಲಕ್ಷ ರೂ. ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಚನ್ನಪಟ್ಟಣದಲ್ಲಿ ಬೊಂಬ ಉದ್ಯಮಕ್ಕೆ ಜೀವ ತುಂಬುವ 14.38 ಕೋಟಿ ರೂ. ಅಂದಾಜು ವೆಚ್ಚದ ಆರ್ಟ್‌ ಮತ್ತು ಕ್ರಾಫ್ಟ್ ವಿಲೇಜ್‌ ಕೂಡ ಪ್ರಾರಂಭವಾಗಲಿದೆ ಎಂದರು.

ಸಂವಿಧಾನ ಜಾರಿಯಾದ ಪುಣ್ಯದಿನ: 1950 ಜ.26 ನಮ್ಮ ರಾಷ್ಟ್ರ ನಿರ್ಮಾಣದ 2ನೇ ಮಹತ್ತರವಾದ ಮೈಲಿಗಲ್ಲು. ಸ್ವಾತಂತ್ರ್ಯದ ಬೆಳಕಲ್ಲಿ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಗಣತಂತ್ರ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಜಾರಿಗೊಳಿಸಿದ ಪುಣ್ಯ ದಿನವಿದು. ಜ.26ರಂದು ಸಂವಿಧಾನ ಜಾರಿಯಾಯಿತು. ಅಂಬೇಡ್ಕರ್‌ ಅವರ ಆಳ ಅಧ್ಯಯನದಿಂದ ಹೊರಹೊಮ್ಮಿದ, ದೂರದೃಷ್ಟಿಯ ಚಿಂತನೆಗಳು ಮತ್ತು ಆಡಳಿತ ವ್ಯವಸ್ಥೆಯ ಸಮಗ್ರ ಕಲ್ಪನೆಯಿಂದ ಜನ್ಮ ತಳೆದ ಸಂವಿಧಾನ ಭಾರತವನ್ನು ವಿಶ್ವಮಟ್ಟದಲ್ಲಿ ಒಂದು ಬೃಹತ್‌ ಶಕ್ತಿಯನ್ನಾಗಿ ರೂಪಿಸಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ರಾಮನಗರ ಶಾಸಕಿ ಅನಿತಾ ವಹಿಸಿದ್ದರು. ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ಜಿಪಂ ಅಧ್ಯಕ್ಷ ಎಂ.ಎನ್‌.ನಾಗರಾಜು, ಉಪಾಧ್ಯಕ್ಷೆ ವೀಣಾ, ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌, ಉಪಾಧ್ಯಕ್ಷೆ ರಮಾಮಣಿ, ನಗರಸಭೆ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಂಗಳಾ, ಡೀಸಿ ಡಾ.ಕೆ.ರಾಜೇಂದ್ರ, ಜಿಪಂ ಸಿಇಒ ಎಂ.ಪಿ.ಮುಲ್ಲೆ„ ಮುಹಿಲಾನ್‌, ಜಿಲ್ಲಾ ಎಸ್‌ಪಿ ಬಿ.ರಮೇಶ್‌, ಎಸಿ ಕೃಷ್ಣಮೂರ್ತಿ ಹಾಜರಿದ್ದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ ಗಣರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನೆರೆವೇರಿಸಿ, ಧ್ವಜ ವಂದನೆಯನ್ನು ಸ್ವೀಕರಿಸಿದರು. ನಂತರ ಗಣರಾಜ್ಯೋತ್ಸವದ ಸಂದೇಶ ನೀಡಿದರು.

ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿ ಸುತ್ತಿರುವ 6 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕ ಬಿ.ಜಿ.ಉಮೇಶ್‌, ರೇಷ್ಮೆ ಇಲಾಖೆ ಉಪನಿರ್ದೆಶಕ ಮಹೇಂದ್ರ ಕುಮಾರ್‌, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ, ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯ ರೇಷ್ಮೆ ನಿರೀಕ್ಷಕ ಡಿ.ಪುಟ್ಟಸ್ವಾಮಿ, ಹಿರಿಯ ಆರೋಗ್ಯ ಸಹಾಯಕ ಟಿ.ಕೃಷ್ಣೇಗೌಡ, ಡೀಸಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ವೈ.ಎಸ್‌. ದೇವಲಿಂಗು ಸರ್ವೋತ್ತಮ ಪ್ರಶಸ್ತಿ ಸ್ವೀಕರಿಸಿದರು. ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಾಲೆಗಳ ತಂಡಗಳ ಪೈಕಿ ನೇತಾಜಿ ಪಾಪ್ಯುಲರ್‌ ಶಾಲೆಗೆ ಪ್ರಥಮ ಬಹುಮಾನ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡಕ್ಕೆ ಎರಡನೇ ಬಹುಮಾನ ಮತ್ತು ಹೋಲಿ ಕ್ರಸೆಂಟ್ ಶಾಲೆಗೆ ತೃತೀಯ ಬಹುಮಾನ ಲಭಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಶಾಲೆಗಳ ಪೈಕಿ ಮಾಯಗಾನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ, ಮರಿಯಂ ಶಾಲೆಗೆ ದ್ವಿತೀಯ ಬಹುಮಾನ ಮತ್ತು ಬಿಡದಿಯ ಜೆ.ವಿ.ಎಸ್‌. ಶಾಲೆಗೆ ತೃತೀಯ ಬಹುಮಾನ ಲಭಿಸಿದೆ.

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘಗಳ ಸಹಯೋಗದಲ್ಲಿ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಫ‌ಲಪುಷ್ಪ ಪ್ರದರ್ಶನ ಮತ್ತು ಸುಗ್ಗಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು. ಈ ವೇಳೆ ರಾಮನಗರ ಶಾಸಕಿ ಅನಿತಾ ಹಾಜರಿದ್ದರು.

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿರುವ ಮಳಿಗೆಗಳು, ವಿವಿಧ ಹೂಗಳಿಂದ ರಚನೆಯಾಗಿರುವ ಕಲಾಕೃತಿಗಳನ್ನು ಸಚಿವರು ಮತ್ತು ಗಣ್ಯರು ವೀಕ್ಷಿಸಿದರು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಥಾಪಿಸಿರುವ ಛಾಯಾಚಿತ್ರ ಪ್ರದರ್ಶನದ ಮಳಿಗೆಯನ್ನು ಸಚಿವರು ಉದ್ಘಾಟಿಸಿದರು.

ಫ‌ಲಪುಷ್ಪ ಪ್ರದರ್ಶನ, ಸುಗ್ಗಿ ಉತ್ಸವಕ್ಕೆ ಚಾಲನೆ

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘಗಳ ಸಹಯೋಗದಲ್ಲಿ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಫ‌ಲಪುಷ್ಪ ಪ್ರದರ್ಶನ ಮತ್ತು ಸುಗ್ಗಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು. ಈ ವೇಳೆ ರಾಮನಗರ ಶಾಸಕಿ ಅನಿತಾ ಹಾಜರಿದ್ದರು. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿರುವ ಮಳಿಗೆಗಳು, ವಿವಿಧ ಹೂಗಳಿಂದ ರಚನೆಯಾಗಿರುವ ಕಲಾಕೃತಿಗಳನ್ನು ಸಚಿವರು ಮತ್ತು ಗಣ್ಯರು ವೀಕ್ಷಿಸಿದರು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಥಾಪಿಸಿರುವ ಛಾಯಾಚಿತ್ರ ಪ್ರದರ್ಶನದ ಮಳಿಗೆಯನ್ನು ಸಚಿವರು ಉದ್ಘಾಟಿಸಿದರು.

6 ಮಂದಿ ಅಧಿಕಾರಿಗಳಿಗೆ ಸೇವಾ ಪ್ರಶಸ್ತಿ ಪ್ರದಾನ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ ಗಣರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನೆರೆವೇರಿಸಿ, ಧ್ವಜ ವಂದನೆಯನ್ನು ಸ್ವೀಕರಿಸಿದರು. ನಂತರ ಗಣರಾಜ್ಯೋತ್ಸವದ ಸಂದೇಶ ನೀಡಿದರು. ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿ ಸುತ್ತಿರುವ 6 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕ ಬಿ.ಜಿ.ಉಮೇಶ್‌, ರೇಷ್ಮೆ ಇಲಾಖೆ ಉಪನಿರ್ದೆಶಕ ಮಹೇಂದ್ರ ಕುಮಾರ್‌, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ, ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯ ರೇಷ್ಮೆ ನಿರೀಕ್ಷಕ ಡಿ.ಪುಟ್ಟಸ್ವಾಮಿ, ಹಿರಿಯ ಆರೋಗ್ಯ ಸಹಾಯಕ ಟಿ.ಕೃಷ್ಣೇಗೌಡ, ಡೀಸಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ವೈ.ಎಸ್‌. ದೇವಲಿಂಗು ಸರ್ವೋತ್ತಮ ಪ್ರಶಸ್ತಿ ಸ್ವೀಕರಿಸಿದರು. ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಾಲೆಗಳ ತಂಡಗಳ ಪೈಕಿ ನೇತಾಜಿ ಪಾಪ್ಯುಲರ್‌ ಶಾಲೆಗೆ ಪ್ರಥಮ ಬಹುಮಾನ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡಕ್ಕೆ ಎರಡನೇ ಬಹುಮಾನ ಮತ್ತು ಹೋಲಿ ಕ್ರಸೆಂಟ್ ಶಾಲೆಗೆ ತೃತೀಯ ಬಹುಮಾನ ಲಭಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಶಾಲೆಗಳ ಪೈಕಿ ಮಾಯಗಾನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ, ಮರಿಯಂ ಶಾಲೆಗೆ ದ್ವಿತೀಯ ಬಹುಮಾನ ಮತ್ತು ಬಿಡದಿಯ ಜೆ.ವಿ.ಎಸ್‌. ಶಾಲೆಗೆ ತೃತೀಯ ಬಹುಮಾನ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next