Advertisement

ವೀರನಾಗಮ್ಮ ದೇವಾಲಯದ ಅಭಿವೃದ್ದಿಗೆ ಬದ್ಧ: ಶಾಸಕ ಡಾ.ಜಿ.ಪರಮೇಶ್ವರ್

06:48 PM Apr 03, 2022 | Team Udayavani |

ಕೊರಟಗೆರೆ: ವೀರನಾಗಮ್ಮ ದೇವತೆಯ ಕೃಪೆಯಿಂದ ಮುಂಬರುವ ದಿನಗಳಲ್ಲಿ ಸಮಾಜವು ಸಂಪೂರ್ಣ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲಿ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಅವರು ತಾಲೂಕಿನ ಕಸಬಾ ಹೋಬಳಿಯ ಇತಿಹಾಸ ಪ್ರಸಿದ್ದ ವಡ್ಡಗೆರೆ ವೀರನಾಗಮ್ಮ ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಬೇಟಿ ನೀಡಿ ಮಾತನಾಡಿ ಈ ಭಾಗದ ಆರಾಧ್ಯ ದೇವತೆ ವೀರನಾಗಮ್ಮ ದೇವಿಯ ಜಾತ್ರೆಯನ್ನು ಜನರು ಭಕ್ತಿ ಶ್ರದ್ದೆಯಿಂದ ಆಚರಿಸುತ್ತಿದ್ದಾರೆ, ಕಳೆದ ಎರಡು ವರ್ಷದಿಂದ ಕರೋನಾ ಕಾರಣ ಜಾತ್ರೆ ನಡೆಯಲಿಲ್ಲ ಆದರೆ ಮತ್ತೆ ಅದರ ಪೂರ್ವ ವೈಭವ ಮರುಕಳಿಸಿದ್ದು ಆ ದೇವಿಯ ಆಶೀರ್ವಾದದಿಂದ ದೇಶದಲ್ಲಿ ಸಾಂಕ್ರಾಮಿಕ ರೋಗವು ಸಂಪೂರ್ಣವಾಗಿ ನಶಿಸಿ ಹೋಗಲಿ ಎಂದರು.

ವೀರನಾಗಮ್ಮ ದೇವಾಲಯದ ಅಭಿವೃದ್ದಿಗೆ ಸಂಪೂರ್ಣವಾಗಿ ಶ್ರಮಿಸಲಾಗುವುದು ದೇವಸ್ಥಾನ ಭಕ್ತ ಮಂಡಲಿಯ ಮನವಿ ಮೇರೆಗೆ ಅಪೂರ್ಣಗೊಂಡಿರುವ ದಾಸೋಹ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು ಮತ್ತು ದೇವಸ್ಥಾನದ ಸುತ್ತಲೂ ಸುಭದ್ರವಾದ ಕಾಂಪೌಂಡ್ ನಿರ್ಮಾಣವನ್ನು ಮಾಡಲಾಗುವುದು, ಈ ಕಾರ್ಯಗಳನ್ನು ಹಂತಹಅತವಾಗಿ ಪೂರೈಸಲಾಗುವುದು ಎಂದರು, ದೇಶಕ್ಕೆ ಕೋವಿಡ್ ಬಂದಾಗಿಲಿನಿಅದ ಸಣ್ಣ ಉದ್ಯಮದವರು ಮತ್ತು ಜಾತ್ರೆ ಸೇರಿದಂತೆ ಇತರ ಕಡೆ ಸಣ್ಣ ವ್ಯಾಪಾರ ಮಾಡುವ ಕುಟುಂಭದವರು ಸಂಪೂರ್ಣವಾಗಿ ಕುಸಿದ್ದಿದ್ದರು, ಈಗ ಮತ್ತೆ ಜಾತ್ರೆಗಳು ಪ್ರಾರಂಭವಾಗಿ ಅವರ ಆರ್ಥಿಕ ಬದುಕು ಚೇತರಿಕೆ ಯಾಗುತ್ತಿದೆ, ಅದೇ ರೀತಿಯಾಗಿ ರೈತರು ಬೆಳೆದಂತಹ ಫಸಿಲಿಗೆ ಮಾರುಕಟ್ಟೆ ಇಲ್ಲದಾಗಿತ್ತು ಈಗ ದೇವರ ಆಶೀರ್ವಾದದಿಂದ ಎಲ್ಲಾವು ಮಾಮೂಲಿ ಜೀವನಕ್ಕೆ ಬರುತ್ತಿದೆ, ಆದರೆ ಜನರ ಸಹಕಾರವು ಸಹ ಸಮಾಜಿಕ ಪಿಡುಗು ಓಡಿಸಲು ಅಗತ್ಯ ಎಂದರು.

ಮಾಜಿ ಕೌಶಲ್ಯ ಅಭಿವೃದ್ದಿ ನಿಗಮ ಮಂಡಲಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಹಲವು ವರ್ಷಗಳಿಂದ ವೀರನಾಗಮ್ಮ ಜಾತ್ರೆಯು ನಡೆದುಕೊಂಡು ಬರುತ್ತಿದೆ, ಭಕ್ತಮಂಡಲಿಯು ಭಕ್ತರ ಸಹಕಾರ ದೊಂದಿಗೆ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತಿದೆ, ಜಾತ್ರೆಯ ದಿನದಂದು ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಲಿದ್ದಾರೆ, ದೇವಸ್ಥಾನಕ್ಕೆ ಮೂಲಭೂತ ಸೌಕರ್ಯದ ಅಗತದ್ಯವಿದೆ ಎಂದರು,

ಈ ಸಂದರ್ಭಧಲ್ಲಿ ಸ್ಥಳೀಯ ರೈತರು ವಿದ್ಯುತ್ ಅಭಾವದ ಬಗ್ಗೆ ಶಾಸಕರ ಗಮನಕ್ಕೆ ತಂದರು ಕೂಡಲೆ ಶಾಸಕರು ಬೆಸ್ಕಾಂ ಇಲಾಖೆಯ ಎಇಇ ಮಲ್ಲಯ್ಯನವರಿಗೆ ಕರೆ ಮಾಡಿ ಸ್ಥಳ ಪರೀಶಿಲನೆ ಮಾಡಿ ವಿದ್ಯುತ್ ಅಭಾವವನ್ನು ತಪ್ಪಿಸುವಂತೆ ಸೂಚಿಸಿದರು.

Advertisement

ಕಾರ್ಯಕ್ರಮದಲ್ಲಿ ದೇವಾಲಯದ ಟ್ರಸ್ಟ್ ನ ಕಾರ್ಯಾಧ್ಯಕ್ಷ ವೀರಕ್ಯಾತರಾಯ, ಕಾರ್ಯದರ್ಶಿ ನಾಗೇಶ್, ದಿನೇಶಕರುಗಳಾದ ರಾಮಚಂದ್ರಯ್ಯ, ಶಿವಕುಮಾರ್, ಮಾರುತಿ, ರಾಮಯ್ಯ, ಕ್ಯಾತಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಯುವ ಅಧ್ಯಕ್ಷ ವಿನಯ್‌ಕುಮಾರ್, ಗ್ರಾ.ಪಂ.ಅಧ್ಯಕ್ಷ ವಸಂತಕುಮಾರ್, ಸದಸ್ಯರುಗಳಾದ ಗೌರಿಶಂಕರ್, ನರೇಂದ್ರ, ಕ್ಯಾತಪ್ಪ, ತುಮುಲ್ ನಿದೇರ್ಶಕ ಈಶ್ವರಯ್ಯ, ಮುಖಂಡರುಗಳಾದ ಹುಲಿಕುಂಟೆ ಪ್ರಸಾದ್, ಭಕ್ತರಹಳ್ಳಿ ಸಿದ್ದಲಿಂಗಪ್ಪ, ರಂಗಪ್ಪ, ಮಂಜುನಾಥ್, ಪುಟ್ಟಹರಿಯಪ್ಪ, ಎಂಎನ್‌ಜೆ ಮಂಜುನಾಥ್, ಶ್ರೀರಂಗಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next