Advertisement

ಮೋದಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿ

04:52 PM Jun 01, 2022 | Niyatha Bhat |

ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿವಿಧ ಜನ ಕಲ್ಯಾಣ ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುತ್ತಿದ್ದು, ಅವರ ನೇತೃತ್ವದ ಪ್ರತಿಫಲವಾಗಿ ದೇಶದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಆಜಾದಿ ಕಾ ಅಮೃತ್‌ ಮಹೋತ್ಸವ ಅಂಗವಾಗಿ ಮಂಗಳವಾರ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಕೇಂದ್ರ ಸರ್ಕಾರದ ಒಂಭತ್ತು ಸಚಿವಾಲಯದ ಸುಮಾರು 16 ಯೋಜನೆ-ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ವರ್ಚುವಲ್‌ ಮೂಲಕ ಪ್ರಧಾನಿ ಮೋದಿಯವರ ಸಂವಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಪರಿಶ್ರಮದಿಂದ ಸಾಮಾನ್ಯ ಮತ್ತು ಬಡ ಜನರಿಗೆ ಅನೇಕ ಜನ ಕಲ್ಯಾಣ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿಯವರ ಸರ್ಕಾರಕ್ಕೆ ಎರಡು ಅವಧಿ ಸೇರಿ ಇದೀಗ 8 ವರ್ಷ ಪೂರ್ಣಗೊಂಡಿದೆ. ಅವರ ನೇತೃತ್ವದಲ್ಲಿ ದೇಶ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದೆ. ಅಕ್ಕಪಕ್ಕದ ದೇಶದಲ್ಲಿ ಅಕ್ಕಿ, ವಿದ್ಯುತ್‌ ಎಲ್ಲ ದುಬಾರಿಯಾಗಿದ್ದು, ಜನ ಕತ್ತಲಲ್ಲಿದ್ದಾರೆ. ಆದರೆ ನಮ್ಮ ಪ್ರಧಾನಿಯವರು ಇಂತಹ ಸಂದರ್ಭದಲ್ಲೂ ಆರ್ಥಿಕವಾಗಿ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್‌ ಶಾಸಕ ಡಿ.ಎಸ್. ಅರುಣ್‌, ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ 12 ಜನ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂಸದರು ಮತ್ತು ಶಾಸಕರು ಸಂವಾದ ನಡೆಸಿದರು. ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಜಿಲ್ಲಾಧಿಕಾರಿ ಡಾ| ಆರ್‌.ಸೆಲ್ವಮಣಿ, ಇತರೆ ಅಧಿಕಾರಿಗಳು ಇದ್ದರು.

ನಮ್ಮ ಊರಿನಲ್ಲಿ ನನಗೆ ವೈಯಕ್ತಿಕ ಶೌಚಾಲಯವಿಲ್ಲದ ಕಾರಣ ಬಯಲಿಗೆ ಹೋಗುವುದು ಅನಿವಾರ್ಯ ವಾಗಿತ್ತು. ಸ್ವಚ್ಛ ಭಾರತ್‌ ಮಿಷನ್‌ನಡಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ರೂ.15 ಧನಸಹಾಯದಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಈಗ ಗೌರವಯುತವಾಗಿ ಉಪಯೋಗಿಸು ತ್ತಿದ್ದೇನೆ. ಸರ್ಕಾರಕ್ಕೆ ಧನ್ಯವಾದಗಳು. -ರುದ್ರಮ್ಮ, ಫಲಾನುಭವಿ

Advertisement

ಮಾತೃ ವಂದನೆ ಯೋಜನೆಯಡಿ ನೀಡಲಾಗುತ್ತಿರುವ ಹಣದಿಂದ ನನ್ನ ವೈದ್ಯಕೀಯ, ಪೋಷಣೆಗೆ ಸಂಬಂಧಿಸಿದ ಖರ್ಚಿಗೆ ಬಹಳ ಅನುಕೂಲವಾಗಿದೆ. -ನೂರುನ್ನೀಸಾ ಇರ್ಫಾನ್‌, ಫಲಾನುಭವಿ

Advertisement

Udayavani is now on Telegram. Click here to join our channel and stay updated with the latest news.

Next