ಚನ್ನರಾಯಪಟ್ಟಣ: ಕಾರ್ಮಿಕ ವಲಯ ಶ್ರಮ ಪಡುತ್ತಿರುವುದರಿಂದ ದೇಶವು ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾ. ಕಂಚಿಮಾಯಣ್ಣ ಗೌತಮ್ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಾರ್ಮಿ ಕರ ದಿನದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಉತ್ತಮ ರಸ್ತೆ, ಗಗನ ಚುಂಬಿ ಕಟ್ಟಡ, ಅಣೆಕಟ್ಟೆ ನಿರ್ಮಾಣ ಮಾಡುವಲ್ಲಿ ಕಾರ್ಮಿಕರ ಪಾತ್ರ ಮುಖ್ಯವಾಗಿ ದ್ದು, ನಿತ್ಯವೂ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಮಿಕರು ಸಂಘಟಿತರಾಗಿ: ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪದಾರ್ಥ ಸೇವನೆಯಿಂದ ಕಾರ್ಮಿಕರು ದೂರ ವಿರಬೇಕು, ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಬಲಿಷ್ಠ ಸಮಾಜ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕೆಂದು ತಿಳಿಸಿದರು.
ಯೋಜನೆ ಕಾರ್ಮಿಕರಿಗೆ ತಲುಪಿಲ್ಲ: ವಕೀಲ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್.ಉಮೇಶ್ ಮಾತನಾಡಿ, ಸರ್ಕಾರ ಕಾರ್ಮಿಕರಿಗಾಗಿ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಹಲವು ಯೋಜನೆ ಜಾರಿಗೆ ತಂದಿದೆ. ಇದು ಸಮ ರ್ಪಕವಾಗಿ ಕಾರ್ಮಿ ಕರಿಗೆ ತಲುಪುತ್ತಿಲ್ಲ, ನಗರದ ಒಡನಾಟ ಇಟ್ಟುಕೊಂಡಿರುವವರು ಹಾಗೂ ಕಚೇರಿಗೆ ಬರುವವರಿಗೆ ಮಾತ್ರ ಸರ್ಕಾರಿ ಯೋಜನೆ ತಲುಪುತ್ತಿದೆ ಎಂದು ನುಡಿದರು.
ಕಾರ್ಮಿಕರ ಸೌಲಭ್ಯ ಮಾಹಿತಿ ಒದಗಿಸಿ: ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಇರುವ ಗಾರೆಕೆಲಸ, ಮರಕೆಲಸ ಹಾಗೂ ಇತರ ಕೂಲಿ ಕಾರ್ಮಿಕರ ಪತ್ತೆ ಹಚ್ಚಿ ಅವರಿಗೂ ಸವಲತ್ತು ದೊರೆಯುವಂತೆ ಮಾಡ ಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ಸೌಲಭ್ಯಗಳ ಮಾಹಿತಿ ನೀಡುವ ಕೆಲಸ ಮಾಡಬೇಕು. ಸರ್ಕಾರಿ ಸೌಲಭ್ಯ ಸಮರ್ಪಕ ವಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಂಘಟಿತ ಹಾಗೂ ಅಸಂಘಟಿತ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಯೋಜನೆ ಗಳನ್ನು ಅಧಿಕಾರಿ ವರ್ಗ ಸಕಾಲಕ್ಕೆ ಮಾಹಿತಿ ನೀಡಬೇಕು. ವಾರದಲ್ಲಿ 2 ದಿನ ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಬೇಕು. ಕಾರ್ಮಿಕರು ಆರೋಗ್ಯದಿಂದ ಇದ್ದರೆ ದೇಶ ಉತ್ತಮ ಸ್ಥಿತಿಯಲ್ಲಿ ಇರುತ್ತದೆ ಎಂದು ನುಡಿದರು.
ಆಯ್ದ ಕಾರ್ಮಿಕರಿಗೆ ಕೆಲಸ ಮಾಡಲು ಅಗತ್ಯ ಇರುವ ಕಾರ್ಮಿಕರ ಕಿಟ್ ವಿತರಣೆ ಮಾಡಲಾ ಯಿತು. ತಹಶೀಲ್ದಾರ್ ಗ್ರೇಡ್-2 ಮರಿಯಯ್ಯ, ವಕೀಲ ಸಂಘದ ಕಾರ್ಯದರ್ಶಿ ನಂಜೇಗೌಡ, ವಕೀಲೆ ಚಂದನ, ಕಾರ್ಮಿಕ ನಿರೀಕ್ಷಕ ಪುರುಷೋತ್ತಮ್ ಮೊದಲಾದವರು ಉಪಸ್ಥಿತರಿದ್ದರು.