Advertisement

ಚಿತ್ತಾಪುರ ಪಟ್ಟಣಕ್ಕೆ ಅಭಿವೃದ್ಧಿ ಭಾಗ್ಯ

02:42 PM Jul 23, 2018 | |

ಚಿತ್ತಾಪುರ: ರಸ್ತೆ, ಚರಂಡಿ, ಶೌಚಾಲಯ, ದೀಪಗಳಿಲ್ಲದೆ ನಲುಗುತ್ತಿದ್ದ ಪಟ್ಟಣದ ಆಸರ್‌ ಮೋಹಲ್ಲಾ, ಬಶೀರ್‌ ಗಂಜ್‌, ಪೊಲೀಸ್‌ ಸ್ಟೇಷನ್‌ ರಸ್ತೆ, ಬಸವನಗರ, ದಾವಲ್‌ ಮಲೀಕ್‌ ದರ್ಗಾ ಏರಿಯಾ ಸೇರಿದಂತೆ ಇತರ ವಾರ್ಡ್‌ಗಳಿಗೆ ಕೊನೆಗೂ ಸ್ವತ್ಛತೆ, ರಸ್ತೆ, ದೀಪಗಳ ಭಾಗ್ಯ ಒದಗಿಬಂದಿದೆ.

Advertisement

ಶನಿವಾರ ಬೆಳಗ್ಗೆ 10 ಗಂಟೆಗೆ ವಿವಿಧ ವಾರ್ಡ್‌ಗಳಿಗೆ ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಸೂಲ್‌ ಮುಸ್ತಫಾ, ವಾರ್ಡ್‌ ಸದಸ್ಯ ಸೈಯದ್‌ ಜಫರುಲ್‌ ಹಸನ್‌, ಮುಖ್ಯಾಧಿ ಕಾರಿ ವೆಂಕಟೇಶ ತೆಲಂಗ, ಅಧಿಕಾರಿ ಸೋಮು ರಾಠೊಡ್‌ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಿಗೆ ಹೋಗಿ ಹದಗೆಟ್ಟ ರಸ್ತೆ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ದಾರಿ ದೀಪ, ಸ್ವತ್ಛತೆ, ಶೌಚಾಲಯ, ನಾಲೆಗಳ ಕುರಿತು ಮುಖಂಡ ಭೀಮರಾಯ ಹೋತಿನಮಡಿ ಮಾಹಿತಿ ಕಲೆ ಹಾಕಿದರು. 

ಪುರಸಭೆ ಜೆಸಿಬಿಯನ್ನು ವಾರ್ಡ್‌ ಸಂಖ್ಯೆ 9, 10, 11ರ ಆಸರ್‌ ಮೋಹಲ್ಲಾ, ಜನತಾ ಚೌಕ್‌, ಪೊಲೀಸ್‌ ಸ್ಟೇಷನ್‌ಗೆ
ಹೋಗುವ ರಸ್ತೆಗೆ ತಂದು ಕೂಡಲೇ ರಸ್ತೆ, ಚರಂಡಿ, ನಾಲೆಯ ತೊಂದರೆ ಆಗದಂತೆ ಎಲ್ಲಿ ಸಮಸ್ಯೆ ಇದೆಯೋ ಅದನ್ನು ಕೂಡಲೇ ಸರಿಪಡಿಸಲಾಗುವುದು ಎಂದು ಹೇಳಿದರು. ಸ್ವತ್ಛತೆ, ಶೌಚಾಲಯ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಿತು.

ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ನಗರೋತ್ಥಾನ
3ನೇ ಹಂತದಲ್ಲಿ 2.88 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದಾರೆ. 

Advertisement

ಅದರ ಒಂದು ಭಾಗವಾದ 45 ಲಕ್ಷ ರೂ. ವೆಚ್ಚದಲ್ಲಿ ಜನತಾ ಚೌಕ್‌ನಿಂದ ಪೊಲೀಸ್‌ ಸ್ಟೇಷನ್‌ವರೆಗೂ ರಸ್ತೆ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಈ ವೇಳೆ ನಾಲೆ ಹಾಗೂ ಕಾಲೋನಿಯಲ್ಲಿ ಬೆಳೆದಿದ್ದ ಮುಳ್ಳು ಕಂಟಿಗಳನ್ನು ಕಡಿದು ಸ್ವತ್ಛಗೊಳಿಸಲಾಗುತ್ತಿದೆ.

9, 10, 11, 12, 13, 14, 15, 16 ವಾರ್ಡ್‌ಗಳಲ್ಲಿನ ಒಳಚರಂಡಿಯಲ್ಲಿ ವಿಪರೀತ ಹೂಳು ತುಂಬಿದ್ದರಿಂದ ಕೊಳೆ ಹಾಗೆಯೇ ಉಳಿದುಕೊಂಡಿದೆ. ಈ ಕುರಿತು ಕೆಲವೇ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಉಪಾಧ್ಯಕ್ಷರು ಹಾಗೂ ಮುಖಂಡರು ತಿಳಿಸಿದರು.

“ಚಿತ್ತಾಪುರ ಪಟ್ಟಣದಲ್ಲಿ ಸ್ವತ್ಛತೆ ಮಾಯ-ಎಲ್ಲೆಡೆ ಗಲೀಜು’ ಎನ್ನುವ ಶೀರ್ಷಿಕೆಯಡಿ 15 ಜುಲೈ 2018ರ “ಉದಯವಾಣಿ” ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ, ಪುರಸಭೆ ಅಧ್ಯಕ್ಷರು, ವಾರ್ಡ್‌ಗಳ ಸದಸ್ಯರು, ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next