ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಜೀರ್ಣೋದಾರಕ್ಕಾಗಿ 1.50 ಕೋಟಿ ರೂ. ಹಣವನ್ನು ನಾಗರತ್ನಮ್ಮ ನಾಗೇಂದ್ರ ದಂಪತಿ ಗಳು ದಾನ ನೀಡಿ ಭೂಮಿ ಪೂಜೆ ನೆರವೇರಿಸಿದರು.
ನಾಗರತ್ನ ನಾಗೇಂದ್ರ ಮಾತನಾಡಿ, ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿ ದೇವಾ ಲಯದ ಭಕ್ತರಾಗಿ ಅನೇಕ ವರ್ಷ ದಿಂದ ದೇಗುಲಕ್ಕೆ ಆಗಮಿಸುತ್ತಿದ್ದೆವು. ಮಳೆಯಿಂದ ದೇಗಿಲದ ಮೇಲ್ಛಾವಣಿ ಸೋರುತ್ತಿದೆ. ಇದರಿಂದ ಭಕ್ತರಿಗೆ ಸಾಕಷ್ಟು ತೊಂದ ರೆ ಆಗುವುದಲ್ಲದೇ, ನಮ್ಮನ್ನು ಕಾಪಾಡುವ ದೇವರು ನೆಲೆಸಿದ ಸ್ಥಾನ ಈ ರೀತಿ ಆಗಿರುವುದು ನೋಡಿ ನನಗೆ ಬೇಸರವಾಗಿಯಿತು. ಹಾಗಾಗಿ ಇದನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದೇವೆ ಎಂದರು.
ಪುರಾತತ್ವ, ಮುಜರಾಯಿ ಇಲಾಖೆ ನಿರ್ಲಕ್ಷ್ಯ: ಪುರಾತತ್ವ ಇಲಾಖೆ ಅಧೀನದಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸೇರಿದ ದೇವಾಲಯಗಳ ಪರಿಸ್ಥಿತಿ ಈ ರೀತಿಯಾದರೆ ಇದಕ್ಕೆ ಯಾರನ್ನು ಹೊಣೆ ಮಾಡಬೇಕು. ದೇವಾಲಯದಲ್ಲಿ ಹುಂಡಿಯಲ್ಲಿನ ಹಣ ಧಾರ್ಮಿಕ ದತ್ತಿ ಇಲಾಖೆಗೆ ಸೇರುತ್ತಿದೆ. ಇನ್ನೂ ದೇವಾಲಯ ಶಿಥಿಲವಾದರೆ ರಿಪೇರಿ ಮಾಡಿಸಬೇಕು ಎಂಬ ಕನಿಷ್ಠ ಸೌಜನ್ಯ ಅಧಿಕಾರಿಗಳು ಹೊಂದಿಲ್ಲದೆ ಇರುವುದು ವಿಷಾದಕರ ಸಂಗತಿ ಎಂದರು.
ಗ್ರಾಮಸ್ಥರು ಹೆಚ್ಚಿನ ಸಹಕಾರ ಕೊಡಿ: ಈ ಹಿಂದೆ ವೈಯಕ್ತಿಕ ಕಾರಣಕ್ಕಾಗಿ ದೇವರಿಗೆ ಹರಕೆ ಮಾಡಿದ್ದು, ಅದು ಈಡೇರಿದ್ದರಿಂದ ದೇಗುಲದ ಜೀ ರ್ಣೋದ್ಧಾರಕ್ಕೆ ಏನಾದರೂ ಸಹಾಯ ಮಾಡಬೇಕೆಂದು ತಿಳಿದು 1.50 ಕೋಟಿ ದೇಣಿಗೆಯನ್ನು ಪುರಾತತ್ವ ಇಲಾಖೆಗೆ ನೀಡಿ ಇಲಾಖೆಯ ಸಹಯೋಗದಲ್ಲಿ ದೇವಾಲಯದ ಜೀರ್ಣೋದ್ಧಾರದ ಕೆಲಸ ನಡೆಯಲಿದೆ. ಕ್ಷೇತ್ರದ ಶಾಸ ಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಹಕಾರ ಕೊಡುವಂತೆ ಕೋರಲಾಗಿದೆ ಎಂದರು.
ದೇಗುಲದ ಅಭಿವೃದ್ಧಿಗೆ ನೆರವು ನೀಡಿ: ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದಾನಿಗಳಾದ ನಾಗರತ್ನಮ್ಮ ನಾಗೇಂದ್ರ ದಂಪತಿಗಳು ದೇವಾಲ ಯದ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ತಾಲೂಕು ಆಡಳಿತ ದಂಪತಿಗಳಿಗೆ ಅಭಾರಿಯಾಗಿದೆ. ಶಿಥಿಲಾವಸ್ಥೆಯಲ್ಲಿನ ದೇವಾಲಯ ಅಭಿವೃದ್ಧಿಗೆ ಆರ್ಥಿಕವಾಗಿ ಸ್ಥಿತಿವಂತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಪುರಾತತ್ವ ಇಲಾಖೆ ಹಿರಿಯ ಅಧಿಕಾರಿ ಬಿಪಿನ್ ಚಂದ್ರ, ಪುರಾತತ್ವ ಇಲಾಖೆ ಎಂಜಿನಿಯರ್ ಗೌತಮ್, ತಾಲೂಕು ದಂಡಾಧಿಕಾರಿ ಗೋವಿಂದ್ ರಾಜ್, ಲಕ್ಷ್ಮೀ ನರಸಿಂಹ ಸ್ವಾಮಿ ಸೇವಾ ಸಮಿತಿ ಖಜಾಂಚಿ ನಾರಾಯಣ್, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಛಾಯ ಮಣಿ, ಉಪಾಧ್ಯಕ್ಷ ಎನ್ .ಸಿ.ವಿಶ್ವನಾಥ್, ನಿರ್ದೇಶಕ ಜಿತೇಂದ್ರ ಕುಮಾರ್, ಗ್ರಾಪಂ ಉಪಾಧ್ಯಕ್ಷ ವಿಠ್ಠಲ್ ಕುಮಾರ, ಸದಸ್ಯರಾದ ಹೊನ್ನೇಗೌಡ, ಮಂಜುನಾಥ, ಶಿವಕುಮಾರ, ನಾಗರಿಕ ವೇದಿಕೆ ಅಧ್ಯಕ್ಷ ನಾಗರಾಜು, ಕೃಷಿ ಸಂಘದ ಅಧ್ಯಕ್ಷ ದೊರೆಸ್ವಾಮಿ, ನಿರ್ದೇಶಕರಾದ ಪಟೇಲ್ ಕುಮಾರ, ಎಚ್.ಬಿ.ರಂಗಸ್ವಾಮಿ, ಸಂಪತ್ ಕುಮಾರ, ಪ್ರಮುಖರಾದ ಮುರಳಿ, ನಾರಾಯಣ್, ಗಿರೀಶ, ಜಾವಿದ್, ಪ್ರಸನ್ನ ಕೇಶವಾಚಾರ್ಯ, ಜಗನಾಥ್ ಉಪಸ್ಥಿತರಿದ್ದರು.