Advertisement

ಸೂಳೆಕೆರೆ ಪ್ರವಾಸೋದ್ಯಮ ತಾಣವಾಗಿ ಅಭಿವೃದಿ: ತಮ್ಮಣ್ಣ

02:43 PM Sep 26, 2021 | Team Udayavani |

ಭಾರತೀನಗರ: ಸೂಳೆಕೆರೆಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಅಧಿಕಾರಿಗಳೊಂದಿಗೆ ಶಾಸಕ ಡಿ.ಸಿ.ತಮ್ಮಣ್ಣ ಕೆರೆಯಂಳಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹೊರವಲಯದ ಸೂಳೆಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.

ಅಭಿವೃದ್ಧಿ: ಸುಮಾರು 950 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯನ್ನು 130 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಕೆರೆ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ. 80 ಕೋಟಿ ರೂ. ವೆಚ್ಚದಲ್ಲಿ ಕೆರೆಅಭಿವೃದ್ಧಿ ಮಾಡುವುದು, ಇನ್ನು ನೀರುಸಮರ್ಪಕವಾಗಿ ತಲುಪದ ಕಾರಣ 40 ಕೋಟಿ ರೂ. ವೆಚ್ಚದಲ್ಲಿ ಕೆರೆಯಡಿ ಬರುವ ಉತ್ತರ ಮತ್ತು ದಕ್ಷಿಣ ನಾಲೆಗಳಿಗೆ ಸುಮಾರು 6630 ಎಕರೆ ಅಚ್ಚು ಪ್ರದೇಶಕ್ಕೆ ನೀರೊದಗಿಸುವ ನಾಲೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಏರಿ ನಿರ್ಮಾಣ: ಸೂಳೆಕೆರೆ ನಾಲೆಗಳು ಶಿಥಿಲಗೊಂಡಿರುವುದರಿಂದ ನಾಲೆಗಳಿಗೆ ಕಾಂಕ್ರೀಟ್‌ ಲೈನಿಂಗ್‌ ಮಾಡುವುದು, ನಾಲೆಗಳ ಸೇವಾ ರಸ್ತೆ ಅಭಿವೃದ್ಧಿ, ಜತೆಗೆ ಕೆರೆ ಸುತ್ತಳತೆಯಲ್ಲಿ ಮತ್ತೆ ಒತ್ತುವರಿ ಮಾಡದಂತೆ ಏರಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು ಎಂದರು.

ಈ ಸೂಳೆಕೆರೆ ನಾಲೆ ಸ್ವತಂತ್ರ ಪೂರ್ವದಲ್ಲಿ ಕಟ್ಟಿರುವಂತಹದ್ದು. ಸೂಳಕೆರೆ ಮತ್ತು ನಾಲೆ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ರೈತರನ್ನು ಉಳಿಸಬೇಕಾದರೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

Advertisement

ಪ್ರಸ್ತಾವನೆ: ಮದ್ದೂರು ಕೆಮ್ಮಣ್ಣು ಕೆರೆ ಮತ್ತು ಸೂಳೆಕೆರೆ ಈ ಭಾಗದ ರೈತರಿಗೆ ಮಿನಿ ಅಣೆಕಟ್ಟೆ ಇದ್ದಂತೆ. ಕೆಆರ್‌ ಎಸ್‌ ಅಣೆಕಟ್ಟೆ ಬಿಟ್ಟರೆ ಇದು ರೈತರಿಗೆ 2ನೇ ಅಣೆಕಟ್ಟೆ ಇದ್ದಂತೆ. ಈ ಎರಡು ಕೆರೆ ಅಭಿವೃದ್ಧಿ ಮತ್ತು ನಾಲೆ ಅಭಿವೃದ್ಧಿಗೆ ಕನಿಷ್ಠ 250 ಕೋಟಿ ರೂ. ಬಿಡುಗಡೆಗೊಳಿ ಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರ್ಕಾರ ಈಗಲಾದರೂ ಕಣ್ತೆರೆದು ಮಂಜೂರು ಮಾಡ  ಬೇಕೆಂದು ಒತ್ತಾಯಿಸಿದ್ದೇನೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರೂ ಮಂಡ್ಯ ಜಿಲ್ಲೆಯಲ್ಲೇ ದೊಡ್ಡಕೆರೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಈ ಎರಡು ಕೆರೆ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆಂದರು.

ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಅಧೀಕ್ಷಕ ಎಂಜಿನಿಯರ್‌ ಕೆ.ಜೆ.

ವಿಜಯ್‌ಕುಮಾರ್‌, ಕಾರ್ಯಪಾಲಕ ಎಂಜಿನಿಯರ್‌ ಡಿ.ಅಶೋಕ್‌, ಸಹಾಯಕ ಕಾರ್ಯಪಾಲಕ ಎಂಜಿನಿ ಯರ್‌ಗಳಾದ ಎಚ್‌.ಎಸ್‌.ನಾಗರಾಜು, ಎಲ್‌. ಪ್ರಶಾಂತ್‌, ಸುರೇಶ್‌, ಸಹಾಯಕ ಎಂಜಿನಿಯರ್‌ ಗಳಾದ ಡಿ.ಸಿ.ಚಂದ್ರೇಗೌಡ, ಅವಿನಾಶ್‌, ಶಿವಕುಮಾರ್‌, ಮುಟ್ಟನಹಳ್ಳಿ, ಮಾದರಹಳ್ಳಿ, ಅಂಬರಹಳ್ಳಿ ಗ್ರಾಮದ ಮುಖಂಡರು ಇದ್ದರು.

ಕೆರೆಯಲ್ಲಿ ದೋಣಿ ವ್ಯವಸ್ಥೆ, ಈಜುಕೊಳ ನಿರ್ಮಾಣ: ಪ್ರವಾಸಿಗಳಿಗೆ ಅನುಕೂಲವಾಗುವಂತೆ ಕೆರೆಯಲ್ಲಿ ದೋಣಿ ವ್ಯವಸ್ಥೆ, ಈಜುಕೊಳ, ವಾಕಿಂಗ್‌ ಪಾರ್ಕ್‌, ದೀಪದ ವ್ಯವಸ್ಥೆ ಮಾಡಲಾಗುವುದು. ಜತೆಗೆ ಈ ಕೆರೆಯ ಮುಂಭಾಗದ ಸುಮಾರು 10 ಎಕರೆ ವಿಸ್ತೀರ್ಣವನ್ನು ಭೂಸ್ವಾಧೀನ ಪಡಿಸಿಕೊಂಡು ಕನ್ನಲಿ, ಮುಟ್ಟನಹಳ್ಳಿ ರಸ್ತೆಯನ್ನು ವಿಸ್ತೀರ್ಣ ಪಡಿಸುವುದರೊಂದಿಗೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next