Advertisement
ಕೋವಿಡ್ 19 ಹಾವಳಿಯ ನೇರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ ದತ್ತ ಬೀರಿದೆ. ಈ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳಿ ನಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಾವುದೇ ಚಟುವಟಿಕೆ ನಡೆಯ ಲಿಲ್ಲ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾರ್ವ ಜನಿಕ ಮತ್ತು ಖಾಸಗಿ ಸಹ ಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜಿಲ್ಲೆಯ ಎರಡು ಬೀಚ್‌ಗಳ ಅಭಿವೃದ್ಧಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ ಸೇರಿದಂತೆ ವಿದೇಶದಿಂದ ಪ್ರವಾಸಿ ಗರು ಆಗಮಿಸುತ್ತಾರೆ. ಈ ವೇಳೆ ಪ್ರವಾಸಿಗರಿಗೆ ಜಿಲ್ಲೆಯ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಕೈಪಿಡಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾ ಗಿದೆ. ಪ್ರವಾಸಿ ತಾಣಗಳ ಫೋಟೊ ಮತ್ತು ವಿಡಿಯೋ ಚಿತ್ರೀಕರಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಕೈಪಿಡಿ ಯಲ್ಲಿ ಜಿಲ್ಲೆಯ 50 ಪ್ರವಾಸಿ ತಾಣ ಗಳ ಮಾಹಿತಿ, ಫೋಟೊ ಇರಲಿದೆ. ಅಲ್ಲದೆ, ಕರಾವಳಿಯ ಸಂಸ್ಕೃತಿ, ಹಬ್ಬಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಒಳಗೊಂಡಿರಲಿದೆ.
Related Articles
Advertisement
ಸ್ಕೂಬಾ ಡೈವ್ ಆರಂಭಕ್ಕೆ ಉತ್ಸುಕಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಉದ್ದೇಶದಿಂದ ದ.ಕ. ಜಿಲ್ಲೆಗೆ ಸ್ಕೂಬಾ ಡೈವ್ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ಸೋಮೇಶ್ವರ ಬೀಚ್ ಅಥವಾ ಪಣಂಬೂರು ಬೀಚ್‌ನಲ್ಲಿ ಸ್ಕೂಬಾ ಡೈವ್ ಆರಂಭಿಸಲು ಚಿಂತಿಸಲಾಗಿದೆ. ಈ ಬಗ್ಗೆ ಈಗಾಗಲೇ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೀಚ್ ಅಭಿವೃದ್ಧಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ಜಿಲ್ಲೆಯ ಎರಡು ಬೀಚ್‌ಗಳ ಅಭಿವೃದ್ಧಿಯಾಗಲಿವೆ. ಹೊರ ರಾಜ್ಯ, ವಿದೇಶಿಗರಿಗೆ ದ.ಕ. ಜಿಲ್ಲೆಯ ಪ್ರವಾಸಿ ತಾಣಗಳು, ಇಲ್ಲಿನ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೈಪಿಡಿ ಹೊರತರಲಾಗುತ್ತದೆ.
- ಸುಧೀರ್ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು