Advertisement
ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಸರಕಾರದ 2020-21ನೇ 15ನೇ ಹಣಕಾಸು ಯೋಜನೆಯಡಿ ಸಾಮಾನ್ಯ ಸಹಾಯ ಧನವಾಗಿ 23 ಕೋಟಿ ರೂ. ಬಿಡು ಗಡೆಯಾಗಿದ್ದು, ಇದರಲ್ಲಿ 1.56 ಕೋಟಿ ರೂ.ವನ್ನು ಪಾರ್ಕ್ ಅಭಿವೃದ್ಧಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಇದಕ್ಕೆಂದು ಈಗಾಗಲೇ ಅಂದಾಜು ವೆಚ್ಚ ತಯಾರು ಮಾಡಲಾಗಿದೆ.
Related Articles
Advertisement
ಪಾರ್ಕ್ ಅಭಿವೃದ್ಧಿಗೆ ಯೋಜನೆ :
ಪಾಲಿಕೆ ಅಭಿವೃದ್ಧಿಪಡಿಸಲು ಗುರುತಿಸಿದ ಕೆಲವೊಂದು ಪಾರ್ಕ್ ಈಗಾಗಲೇ ಪಾಳು ಬಿದ್ದಿದೆ. ಇನ್ನೂ ಕೆಲವು ಕಡೆಗಳಲ್ಲಿ ಪಾರ್ಕ್ ಕಾಮಗಾರಿ ಅರ್ಧಂಬರ್ಧ ನಡೆದಿದೆ. ಇದರಿಂದಾಗಿ ಸಾರ್ವಜನಿಕರ ಸಮರ್ಪಕ ಬಳಕೆಗೆ ಅನಾನುಕೂಲವಾಗುತ್ತಿತ್ತು. ಭಗವತಿ ದೇಗುಲದ ಬಳಿಯ ಪಾರ್ಕ್ ಪಾಳೂ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಆಟಕ್ಕೆ ಜಾರು ಬಂಡಿ, ವಾಕಿಂಗ್ ಟ್ರಾಕ್ ನಿರ್ಮಾಣವಾಗಲಿದೆ. ಅದೇ ರೀತಿ ಕೋಡಿಕಲ್ ಬಳಿಯ ಕಲ್ಲಕಂಡದಲ್ಲಿರುವ ಬೃಹತ್ ಪಾರ್ಕ್ ಅಭಿವೃದ್ಧಿಗೆ ಈ ಹಿಂದೆ ಸುಮಾರು 70 ಲಕ್ಷ ರೂ. ಬಿಡುಗಡೆಗೊಂಡಿದ್ದರೂ ಅಭಿವೃದ್ಧಿಹೊಂದಿಲ್ಲ. ಇದೀಗ 63 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಸದ್ಯದಲ್ಲೇ ಡಿಪಿಆರ್ ಆಗಲಿದೆ. ಅದೇ ರೀತಿ ಪದವು ಪಶ್ಚಿಮ ವಾರ್ಡ್‌ನ ಪೊಲೀಸ್ ಕ್ವಾಟ್ರìಸ್ ಬಳಿಯ ಕೆಬಿಎಚ್ ಪಾರ್ಕ್ ಅಭಿವೃದ್ಧಿಯಾಗಲಿದ್ದು, ಆವರಣಗೋಡೆ, ವಾಕಿಂಗ್ ಟ್ರಾಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಅದೇರೀತಿ, ಉಳಿದ ಕಡೆಗಳಲ್ಲಿಯೂ ಪಾರ್ಕ್ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ.
ಪಾರ್ಕ್‌ಗಳ ಅಭಿವೃದ್ಧಿಗೆ ಯೋಜಿಸಲಾದ ಅನುದಾನ :
ಪಾರ್ಕ್ : ಅಂದಾಜು ಮೊತ್ತ :
ಬಂಗ್ರಕೂಳೂರು ವಾರ್ಡ್ 63 ಲಕ್ಷ ರೂ.
ಕಂಬ್ಳ ವಾರ್ಡ್ 15 ಲಕ್ಷ ರೂ.
ಮಂಗಳಾನಗರ, ಜೆಪ್ಪು ಪಾರ್ಕ್ 30 ಲಕ್ಷರೂ.
ಪದವು (ಪಶ್ಚಿಮ) ವಾರ್ಡ್ 18 ಲಕ್ಷ ರೂ.
ಕದ್ರಿ (ಉತ್ತರ) ವಾರ್ಡ್ 10.30 ಲಕ್ಷ ರೂ.
ಮೇಯರ್ ಬಂಗ್ಲೆ ಬಳಿ ಪಾರ್ಕ್ 20 ಲಕ್ಷರೂ.
ಒಟ್ಟು 1,56,30,000 ಕೋಟಿ
ನಗರದಲ್ಲಿ ಉದ್ಯಾನವನ ಮತ್ತು ಹಸುರು ಜಾಗ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಪ್ರಾಶಸ್ತÂ ನೀಡುತ್ತಿದೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಅದರಂತೆಯೇ ಹಸುರು ಉಳಿಸುವ ಕಾರ್ಯ ಕೂಡ ಸಾಗಬೇಕು. ಈ ಉದ್ದೇಶದಿಂದ ಮೊದಲ ಹಂತದಲ್ಲಿ ಪಾರ್ಕ್ ಅಭಿವೃದ್ಧಿ ಮಾಡುತ್ತಿದ್ದೇವೆ. ಅಭಿವೃದ್ಧಿಯ ಜತೆಗೆ ನಿರ್ವಹಣೆ ಕಡೆಗೂ ಗಮನ ನೀಡಲಾಗುತ್ತದೆ. -ಅಕ್ಷಯ್ ಶ್ರೀಧರ್,ಮನಪಾ ಆಯುಕ್ತ
-ನವೀನ್ ಭಟ್ ಇಳಂತಿಲ