Advertisement
ಹೌದು, ಪಾಂಡವಪುರ ತಾಲೂಕಿನ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆ(ಫ್ರೆಂಚ್ ರಾಕ್ಸ್), ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಶಾಲೆಯನ್ನು ಅಭಿವೃದ್ಧಿಪಡಿಸಲು ಶಾಸಕ ಸಿ.ಎಸ್.ಪುಟ್ಟರಾಜು ಅವರು 2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ದತ್ತು ಪಡೆದಿದ್ದು, ಸರ್ಕಾರದ ಅನುದಾನದ ಜೊತೆಗೆ ದಾನಿಗಳಿಂದ ಅಭಿವೃದ್ಧಿಪಡಿಸಲು ಮುಂದಡಿ ಇಟ್ಟಿದ್ದಾರೆ. ಮೂರು ಶಾಲೆಗಳು ಅಕ್ಕಪಕ್ಕದಲ್ಲಿಯೇ ಇದ್ದು, ಒಂದಾದ ಮೇಲೊಂದರಂತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಅದಕ್ಕಾಗಿ ಈಗಾಗಲೇ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
Related Articles
Advertisement
ಶಿಕ್ಷಕರ ಕೊರತೆ ಇಲ್ಲ: ಕಾಲೇಜು ಹಾಗೂ ಎರಡು ಶಾಲೆಗೆ ಯಾವುದೇ ಶಿಕ್ಷಕರ ಕೊರತೆ ಇಲ್ಲ.ಕಾಲೇಜಿಗೆ10 ಉಪನ್ಯಾಸಕರಿದ್ದರೆ, ಪ್ರೌಢಶಾಲೆಯಲ್ಲಿ 14 ಶಿಕ್ಷಕರಿದ್ದಾರೆ. ಇನ್ನೂ ಫ್ರೆಂಚ್ ರಾಕ್ಸ್ ಶಾಲೆಯಲ್ಲಿ 6 ಶಿಕ್ಷಕರಿದ್ದಾರೆ. ಇದರ ಜೊತೆಗೆ ಕಾಲೇಜಿಗೆ ಅತಿಥಿ ಉಪನ್ಯಾಸಕರು, ಎಲ್‌ಕೆಜಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಗುಣಮಟ್ಟದ ಶಿಕ್ಷಣ: ಕಾಲೇಜು ಹಾಗೂ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ದಾಖಲಾತಿ ಹೆಚ್ಚಳಗೊಂಡಿದ್ದು, ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರೌಢಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ.
ಕ್ರೀಡಾಂಗಣ ಅಭಿವೃದ್ಧಿ ಅಗತ್ಯ: ಕಾಲೇಜು ಹಾಗೂ ಪ್ರೌಢಶಾಲೆಗೆ
ಕ್ರೀಡಾಂಗಣವಿದೆ. ಆದರೆ, ಫ್ರೆಂಚ್ ರಾಕ್ಸ್ ಶಾಲೆಗೆ ಕ್ರೀಡಾಂಗಣ ಚಿಕ್ಕದಾಗಿದೆ. ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕಿದೆ. ಎಲ್ಲ ಶಾಲೆಯಲ್ಲೂ ದೈಹಿಕ ಶಿಕ್ಷಕರಿದ್ದು, ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆಉತ್ತಮವಾಗಿದೆ. ಕಾಲೇಜು ಹಾಗೂ ಪ್ರೌಢಶಾಲೆಗೆ ಗ್ರಂಥಾಲಯವಿದೆ. ಆದರೆ, ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ದುರಸ್ತಿ ಮಾಡ ಬೇಕಾಗಿದೆ. ಫ್ರೆಂಚ್ ರಾಕ್ಸ್ ಶಾಲೆಗೆ ಯಾವುದೇ ಗ್ರಂಥಾಲಯವಿಲ್ಲ.
ಎಸ್‌ಡಿಎಂಸಿ ಸಕ್ರಿಯ: ಕಾಲೇಜು ಮತ್ತು ಪ್ರೌಢಶಾಲೆಗೆ ಎಸ್‌ಡಿಎಂಸಿ ಇದೆ. ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ರಚಿಸಿಕೊಂಡು ದಾನಿಗಳಿಂದ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಾಲೆ ಹಾಗೂ ಕಾಲೇಜುಗಳ ಶಿಕ್ಷಣ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಸ್‌ಡಿಎಂಸಿ ಹಾಗೂ ಸಮಿತಿಗಳು ತೊಡಗಿಸಿಕೊಂಡಿವೆ.
ಬಿಸಿಯೂಟಕ್ಕೆ ಕೊಠಡಿ ಅಗತ್ಯ: ಪ್ರೌಢಶಾಲೆ ಹಾಗೂ ಫ್ರೆಂಚ್ ರಾಕ್ಸ್‌ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಉತ್ತಮವಾಗಿದೆ. ಅದಕ್ಕಾಗಿಪ್ರತ್ಯೇಕ ಅಡುಗೆ ಕೊಠಡಿಗಳಿದ್ದು, ಪ್ರತಿ ದಿನ ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ.
ಪುಂಡರ ಹಾವಳಿಗೆ ಕಡಿವಾಣ ಅಗತ್ಯ : ಫ್ರೆಂಚ್ ರಾಕ್ಸ್ ಶಾಲೆ ಹಾಗೂ ಕಾಲೇಜಿಗೆ ಕಾಂಪೌಂಡ್ ಇದೆ. ಆದರೆ, ರಾತ್ರಿ ವೇಳೆ ಪುಂಡರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕಕಾಂಪೌಂಡ್ ಅಗತ್ಯವಿದೆ. ರಾತ್ರಿ ವೇಳೆ ಪುಂಡರು ಅನೈತಿಕ ಚಟುವಟಿಕೆ ನಡೆಸಲು ಫ್ರೆಂಚ್ ರಾಕ್ಸ್ ಶಾಲೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಜತೆಗೆಶಾಲೆಯಲ್ಲಿರುವ ಪೈಪ್‌ಲೈನ್, ನಲ್ಲಿಗಳನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಂದು ಕಾಲೇಜು ಹಾಗೂ ಎರಡು ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಸರ್ಕಾರದ ಅನುದಾನ, ಸ್ನೇಹಿತರ ಸಹಕಾರ ಹಾಗೂ ದಾನಿ ಗಳಿಂದಲೂ ಅಭಿವೃದ್ಧಿಗೆ ಮುಂದಾಗಿ ದ್ದೇವೆ. ಈಗಾಗಲೇಕಾಮಗಾರಿ ಆರಂಭಿಸಲಾಗಿದ್ದು, ಎಲ್ಲ ರೀತಿಯ ಮೂಲಭೂತ ಸೌಕರ್ಯ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆಕ್ರಮ ವಹಿಸಲಾಗಿದೆ. – ಸಿ.ಎಸ್.ಪುಟ್ಟರಾಜು, ಶಾಸಕರು, ಪಾಂಡವಪುರ ವಿಧಾನಸಭಾ ಕ್ಷೇತ್ರ
– ಎಚ್.ಶಿವರಾಜು