Advertisement

ಕಿಲೆಂಜೂರು ಬಲವಿನಗುಡ್ದೆ ಸಂಪರ್ಕ ರಸ್ತೆ  ಅಭಿವೃದ್ದಿ

10:27 AM Apr 01, 2022 | Team Udayavani |

ಕಿನ್ನಿಗೋಳಿ: ಬಹು ಬೇಡಿಕೆಯ ಕೊಡೆತ್ತೂರು ಮಲ್ಲಿಗೆ ಯಂಗಡಿ ಮೂಲಕವಾಗಿ ಕಿಲೆಂಜೂರು ಬಲವಿನಗುಡ್ಡೆ ವರೆಗಿನ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ ವೇಗ ಪಡೆದುಕೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಂಚಾ ರಕ್ಕೆ ಉಪಯೋಗವಾಗಲಿದೆ.

Advertisement

ಸುಮಾರು 1.15 ಕೋ.ರೂ. ವೆಚ್ಚದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣವಾಗಲಿದೆ. ಸುಮಾರು 1.5 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಎರಡು ಬದಿಯ ಗದ್ದೆಗಳಿಗೆ ಮಣ್ಣು ತುಂಬಿಸಲಾಗಿದೆ. ಈಗ ಡಾಮರು ಹಾಗೂ ಕಾಂಕ್ರೀಟ್‌ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. ಈ ರಸ್ತೆ ನಿರ್ಮಾಣದಿಂದ ಶಿಬರೂರು ಬಲವಿನಗುಡ್ಡೆ ವಿದ್ಯಾರ್ಥಿಗಳಿಗೆ ಶಾಲೆ- ಕಾಲೇಜು ಹಾಗೂ ಜನರಿಗೆ ಕಟೀಲಿಗೆ ಹೋಗಲು ಹತ್ತಿರವಾಗುತ್ತದೆ. ಇದರಿಂದ ಸಮಯ ಉಳಿತಾಯವಾಗಲಿದೆ.

ಬಸ್‌ ಸಂಚಾರ ಆರಂಭವಾಗಲಿ

ಈ ರಸ್ತೆಯಲ್ಲಿ ಬಸ್‌ ಸಂಚಾರ ಆರಂಭಿಸಬೇಕಿದೆ. ಇಲ್ಲಿನ ಜನರಿಗೆ ಕಟೀಲು- ಮಂಗಳೂರು ಸುರತ್ಕಲ್‌ ಸಂಪರ್ಕಿಸಲು ಇದೇ ಹತ್ತಿರದ ರಸ್ತೆಯಾಗಿದೆ. ಕೂಡಲೇ ಬಸ್‌ ಸಂಚಾರ ಆಗಬೇಕಾಗಿದೆ ಎಂದು ಕಟೀಲು ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಜನಾರ್ದನ ಕಿಲೆಂಜೂರು ಅವರು ಆಗ್ರಹಿಸಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಅನುದಾನ

Advertisement

ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಕೊಂಡಿ ರಸ್ತೆಗಳು ಹಾಗೂ ನನೆಗುದಿಗೆ ಬಿದ್ದ ಹೆಚ್ಚಿನ ರಸ್ತೆಗಳನ್ನು ಕಾಂಕ್ರೀಟ್‌ ಮಾಡಲಾಗಿದೆ. ಮುಂದಕ್ಕೆ ಇನ್ನು ಕೆಲವು ರಸ್ತೆಗಳು ಅಭಿವೃದ್ಧಿ ಮಾಡಲಾಗುವುದು. ಇಲ್ಲಿನ ನಾಗರಿಕರ ಬಹುದಿನದ ಕನಸು ಈ ರಸ್ತೆ ನಿರ್ಮಾಣ ಈ ರಸ್ತೆಗೆ ಸರಕಾರದಿಂದ ಅನುದಾನ ನೀಡಲಾಗಿದೆ. – ಉಮಾನಾಥ ಕೋಟ್ಯಾನ್‌, ಶಾಸಕರು, ಮೂಲ್ಕಿ-ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next