Advertisement

Kharga; ನಿಖರ ಕಣ್ಗಾವಲು ನಡೆಸುವ ‘ಖರ್ಗ’ ಡ್ರೋನ್‌ ಅಭಿವೃದ್ಧಿ

01:47 AM Dec 10, 2024 | Team Udayavani |

ಹೊಸದಿಲ್ಲಿ: ನಿಖರವಾಗಿ ಗುಪ್ತಚರ ಮತ್ತು ಕಣ್ಗಾವಲು ಕಾರ್ಯ ನಡೆಸಬಲ್ಲ ಹೊಸ ಖರ್ಗ ಕಮಿಕೇಜ್‌ ಡ್ರೋನ್‌ ಅನ್ನು ಭಾರತೀಯ ಸೇನೆಯು ಅಭಿವೃದ್ಧಿಪಡಿಸಿದೆ. ಈ ಡ್ರೋನ್‌ ಅತೀ ವೇಗದ ಮತ್ತು ಕಡಿಮೆ ತೂಕದ ವೈಮಾನಿಕ ವಾಹನವಾಗಿದ್ದು, ಪ್ರತೀ ಸೆಕೆಂಡಿಗೆ 40 ಮೀಟರ್‌ ವೇಗ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾ­ರಿಗಳು ತಿಳಿಸಿದ್ದಾರೆ.

Advertisement

ಜಿಪಿಎಸ್‌ ವ್ಯವಸ್ಥೆಯನ್ನು ಹೊಂದಿರುವ ಈ ಡ್ರೋನ್‌ 700 ಗ್ರಾಂ ವರೆಗೂ ಸ್ಫೋಟಕವನ್ನು ಹೊತ್ತೂಯ್ಯಬಲ್ಲದು. ಹೈ ಡೆಫಿನಿಷನ್‌ ಕೆಮರಾ ಜತೆಗೆ, ವೈರಿ ರಾಷ್ಟ್ರಗಳ ಎಲೆಕ್ಟ್ರೋಮ್ಯಾಗ್ನಿಟಿಕ್‌ ಸ್ಪೆಕ್ಟ್ರಂ ಬೇಧಿ­ಸುವ ವ್ಯವಸ್ಥೆ ಕೂಡ ಹೊಂದಿದೆ. ಡ್ರೋನ್‌ ಕಾರ್ಯಾಚರಣೆಯ ವ್ಯಾಪ್ತಿ ಸುಮಾರು ಒಂದ­ರಿಂದ ಒಂದೂವರೆ ಕಿ.ಮೀ.ನಷ್ಟಿದೆ. ಸುಸೈಡ್‌ ಡ್ರೋನ್‌ ಎಂದು ಕರೆಲಾಗುವ ಈ ಸಾಧನವು ವೈರಿಗಳ ರಾಷ್ಟ್ರಗಳ ಗುರಿಯನ್ನು ಸರಳವಾಗಿ ನಾಶ ಮಾಡಬಲ್ಲದು. ವಿಶೇಷ ಎಂದರೆ ಇದು ರೇಡಾರ್‌ ವ್ಯಾಪ್ತಿಗೂ ಸಿಗುವುದಿಲ್ಲ! ಇದೀಗ ಇವು ಭಾರತದ ಬತ್ತಳಿಕೆ ಸೇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next