Advertisement

ಕಾಪು ಕ್ಷೇತ್ರದ ಅಭಿವೃದ್ಧಿಗೆ ಜನಬೆಂಬಲವೇ ಕಾರಣ: ಸೊರಕೆ

09:58 AM Feb 04, 2018 | Team Udayavani |

ಕಾಪು: ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ಜನರ ಬೇಡಿಕೆ ಗಳಿಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡ ಲಾಗಿದೆ. ಇದಕ್ಕೆ ಜನಶಕ್ತಿಯ ಬೆಂಬಲವೇ ಮುಖ್ಯ ಕಾರಣ ಎಂದು ಕಾಪು 
ಶಾಸಕ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಮಣಿಪುರ ಮತ್ತು ಬೆಳ್ಳೆ ಗ್ರಾಮ ಪಂಚಾಯತ್‌ಗೆ  ಒಳಪಟ್ಟ ಅಲೆವೂರು-ಮರ್ಣೆ-ನೆಲ್ಲಿಕಟ್ಟೆ ರಸ್ತೆಯ ಕೋಡಂ ಗಳ ಬಳಿ ಸುಮಾರು 2 ಕೋ.ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕೋಡಂಗಳ ಸೇತುವೆಯ ಕನಸು ಬಹಳಷ್ಟು ವರ್ಷದ ಹಿಂದಿನದ್ದಾಗಿದ್ದು, ಸುಮಾರು 625 ಮೀ. ಕಾಂಕ್ರೀಟ್‌ ರಸ್ತೆ ಯೊಂದಿಗೆ ವ್ಯವಸ್ಥಿತವಾಗಿ ಸಂಪರ್ಕ ಸೇತುವೆ ರಚನೆ ಕಾಮಗಾರಿಯು ಶೀಘ್ರ ದಲ್ಲೇ ಪ್ರಾರಂಭಗೊಳ್ಳಲಿದೆ ಎಂದರು.

 49 ಕೋಟಿ ರೂ. ಅನುದಾನ
ಗಾಂಧಿ ಪಥ – ಗ್ರಾಮ ಪಥ ಯೋಜನೆಯಡಿ ಕಾಪು ಕ್ಷೇತ್ರಕ್ಕೆ ಕರ್ನಾ ಟಕ ರಾಜ್ಯದಲ್ಲೇ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ವಿವಿಧ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ಯೋಜನೆಯಲ್ಲಿ 49 ಕೋಟಿ ರೂ. ಅನುದಾನ ಮಂಜೂರಾಗಿದೆ.  ಕಾಪು ಕ್ಷೇತ್ರದ 25 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಕಾಪುವಿನಲ್ಲಿ ಈಗಾಗಲೇ ಕೃಷಿ ಯಂತ್ರಧಾರೆ ಘಟಕ ಅಸ್ತಿತ್ವದಲ್ಲಿದ್ದು, ಮುಂದೆ ಹಿರಿಯಡಕದಲ್ಲೂ ಘಟಕ ಆರಂಭಿಸ ಲಾಗುವುದು. ಪುರಸಭೆಗೆ ನೀರು ಕೊಡುವ ಉದ್ದೇಶದಿಂದ ಮಣಿಪುರ ಹೊಳೆಯಿಂದ ನೀರು ಶುದ್ಧೀಕರಿಸಿ ನೀಡುವ ಬಗ್ಗೆ ಈಗಾಗಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಒತ್ತು ನೀಡಲಾಗುವುದು ಎಂದರು.

Advertisement

ಧರ್ಮಗುರು ವಂ| ಡೆನ್ನಿಸ್‌ ಡೇಸಾ, ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ತಾ.ಪಂ. ಸದಸ್ಯರಾದ ಸಂಧ್ಯಾ ಶೆಟ್ಟಿ, ಸುಜಾತಾ ಸುವರ್ಣ, ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ಮಣಿಪುರ ಗ್ರಾ.ಪಂ. ಉಪಾಧ್ಯಕ್ಷ ಕರುಣಾಕರ್‌, ಪ್ರಮುಖ ರಾದ ಐಡಾ ಗಿಬ್ಬ ಡಿ’ಸೋಜಾ, ಹಸನ್‌ ಸಾಹೇಬ್‌, ಗುರುದಾಸ ಭಂಡಾರಿ, ಪಿಡಬ್ಲೂಡಿ ಎಕ್ಸಿಕ್ಯೂಟಿವ್‌ ಎಂಜಿನಿ ಯರ್‌ ಡಿ.ವಿ. ಹೆಗ್ಡೆ, ಮಂಜುನಾಥ ಭಟ್‌, ರಾಘು ಪೂಜಾರಿ ಕಲ್ಮಂಜೆ, ಹೆಲೆನ್‌, ಲಕ್ಷ್ಮೀನಾರಾಯಣ ಭಟ್‌, ವಸಂತ ಮರ್ಣೆ, ವಿಠಲ ನಾೖಕ್‌, ವರದ ರಾಜ ಹೆಗ್ಡೆ, ಜಗದೀಶ್‌, ಶಿವಪ್ರಸಾದ ಹೆಗ್ಡೆ, ದಯಾನಂದ ನಾೖಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next