Advertisement
ನಗರದ ಗುಲ್ಬರ್ಗ ವಿವಿಯಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ದೇಶಕ್ಕೆ ಕಳೆದ ವರ್ಷ ಅಮೃತ ಕಾಲ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ನಮ್ಮ ಕಲ್ಯಾಣ ಕರ್ನಾಟಕ ಕ್ಕೆ ಈಗ ಅಮೃತ ಕಾಲ ಎದುರಾಗಿದೆ ಎಂದರು.
Related Articles
Advertisement
ಕೆಕೆಆರ್ ಡಿಬಿಯಿಂದ ಈಗಂತು ಅಭಿವೃದ್ಧಿ ನಿರೀಕ್ಷೆ ಮೀರಿ ನಡೆಯುತ್ತಿದೆ. ಈ ವರ್ಷ ಕಕ ಭಾಗದಲ್ಲಿ 1100 ಶಾಲೆಗಳ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ವರ್ಷವೂ ಸಾವಿರ ಶಾಲೆಗಳ ಕೋಣೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಈ ಭಾಗ ಸಂಪದ್ಭರಿತ ವಾಗಿದೆ. ಯುವಕರಲ್ಲಿ ಬದಲಾವಣೆ ಮಾಡಿ ತೋರಿಸುವ ಶಕ್ತಿ ಇದೆ. ರೈತರಿಗೆ ಬಂಗಾರದ ಬೆಳೆಯುವ ಶಕ್ತಿ ವಿದೆ. ಕಾರ್ಮಿಕರಲ್ಲಿ ಶರಣರ ಕಾಯಕ ಶೃದ್ದೆಯಿದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಕ ಭಾಗದ ಬಗ್ಗೆ ವಿಶೇಷ ಮೂರು ತಿಂಗಳಿನಿಂದ ಸತತ ಹಗಲಿರಳು ರಾಜ್ಯದಾದ್ಯಂತ ಸುತ್ತು ಹಾಕುತ್ತಿದ್ದಾರೆ.
ಹಿಂದುಳಿದ ಹಣೆಪಟ್ಟಿ ಹೋಗಲಾಡಿಸಲು ಎಲ್ಲರೂ ಕೈ ಜೋಡಿಸಬೇಕು. ಮುಂದಿನ ವರ್ಷವೂ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಮಾಡೋಣ ಎಂದು ಹೇಳಿದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಆಶಯ ನುಡಿಗಳನ್ನಾಡಿ, ಕಲಬುರಗಿಯಲ್ಲಿ ಮತ್ತೆ ಕಲ್ಯಾಣ ಕರ್ನಾಟಕ ಉತ್ಸವ ಆಗಬೇಕೆಂದರೆ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆದರೆ ಮಾತ್ರ ಸಾಧ್ಯ. ಹೀಗಾಗಿ ಸೇರಿದ ಜನರೆಲ್ಲರೂ ಜೈ ಘೋಷಣೆ ಮಾಡುವ ಮೂಲಕ ಬೆಂಬಲಿಸೋಣ ಎಂದರು.
ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಕಲ್ಯಾಣ ಕರ್ನಾಟಕ ಇತಿಹಾಸ ಕುರಿತು ಹೊರ ತಂದ ಕೃತಿಯನ್ನು ಬಿಡುಗಡೆಗೊಳಿಸಿದರು.
ಶಾಸಕರಾದ ಎಂ.ವೈ ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ್ ಜಿ. ನಮೋಶಿ, ಬಾಬುರಾವ ಚಿಂಚನಸೂರ, ಮಾಜಿ ಸಚಿವ ಮಾಲೀಕಯ್ಯ ಗುತ್ಯೇದಾರ, ಕುಡಾ ಅಧ್ಯಕ್ಷ ಅವಿನಾಶ ಕುಲಕರ್ಣಿ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿದ್ಯಾ ಸಾಗರ ಶಾಬಾದಿ, ಮುಖಂಡರಾದ ಶಿವಕಾಂತ ಮಹಾಜನ್, ಡಾ. ವಿಕ್ರಮ ಪಾಟೀಲ್, ಜಿಲ್ಲಾಧಿಕಾರಿ ಯಶವಂತ ಗುರುಕರ್ ಸೇರಿದಂತೆ ಮುಂತಾದವರಿದ್ದರು. ಕೆಕೆಆರ್ ಡಿಬಿ ಕಾರ್ಯದರ್ಶಿ ಅನಿರುದ್ದ ಶ್ರವಣ ಸ್ವಾಗತಿಸಿದರು. ಶ್ರೀ ಕಾಂತ ಪುಲಾರೆ ನಿರೂಪಿಸಿದರು.