Advertisement
ಯರಗಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆ, ಬೆಲ್ಲದಬಾಗೇವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಬಾಡದ ಸರಕಾರಿ ಹಿರಿಯಪ್ರಾಥಮಿಕ ಶಾಲೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಯೋಜನೆಯಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಂದಾಜು 290.65 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.
Related Articles
Advertisement
ಎಲ್‌ಕೆಜಿಯಿಂದ ಹಿಡಿದು 12ನೇ ತರಗತಿವರೆಗೆ ಈಗ ಮಕ್ಕಳ ಸಂಖ್ಯೆ 1000ಕ್ಕೆ ತಲುಪಿದೆ. ಅದಕ್ಕೆ ತಕ್ಕಂತೆ ಕೊಠಡಿಗಳಿಲ್ಲ. ಹೀಗಾಗಿ 14 ಕೊಠಡಿಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇದರ ಜತೆಗೆ ಶಾಲೆಗೆ ಅಡುಗೆ ಸಾಮಗ್ರಿಗಳ ಅಗತ್ಯತೆ ಇದೆ. ಮಕ್ಕಳಿಗೆ ಹೈಟೆಕ್‌ಶೌಚಾಲಯ, ಏಳು ಸ್ಮಾರ್ಟ್ ಕ್ಲಾಸ್ ಕೊಠಡಿಗಳ ಬೇಡಿಕೆ ಸಲ್ಲಿಸಲಾಗಿದೆ. –ಎಸ್.ಎ. ಸರಿಕರ, ಮುಖ್ಯಾಧ್ಯಾಪಕ
ಹಿರಿಯ ಪ್ರಾಥಮಿಕ ಶಾಲೆ ಬಾಡ : 321 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಲ್ಲಿ1ರಿಂದ 7 ತರಗತಿಗಳಿವೆ. 21 ಲಕ್ಷ ರೂ. ವೆಚ್ಚದಲ್ಲಿಎರಡು ಹೊಸ ಕೊಠಡಿಗಳ ನಿರ್ಮಾಣಮಾಡಲಾಗುತ್ತಿದೆ. ವಿಜ್ಞಾನ ಪ್ರಯೋಗಾಲಯ ಕಟ್ಟಡಮತ್ತು ಸಾಮಗ್ರಿಗಳಿಗೆ 25 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧವಾಗಿದೆ. ಇದಲ್ಲದೆ 17 ಲಕ್ಷ ರೂ. ವೆಚ್ಚದಲ್ಲಿಗ್ರಂಥಾಲಯ ಕೊಠಡಿ ಮತ್ತು ಪುಸ್ತಕಗಳನ್ನು ಒದಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಶಾಲೆಯ ಅಭಿವೃದ್ಧಿಗೆ ಸುಮಾರು 60 ಲಕ್ಷಕ್ಕೂ ಹೆಚ್ಚು ಯೋಜನಾ ವೆಚ್ಚದ ಕ್ರಿಯಾಯೋಜನೆಯನ್ನು ಶಾಸಕರು ಹಾಗೂ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ. ಅದರಲ್ಲಿ ತುರ್ತಾಗಿ ಹೈಟೆಕ್ ಶೌಚಾಲಯ, ಗ್ರಂಥಾಲಯ, ಆಟದ ಮೈದಾನ ಹಾಗೂ ಹೊಸ ಕೊಠಡಿಗಳ ನಿರ್ಮಾಣಮಾಡಿಕೊಡುವಂತೆ ಮನವಿ ಮಾಡಲಾಗಿದೆ. –ವರುಣ ಪಾಟೀಲ, ಮುಖ್ಯಾಧ್ಯಾಪಕ
ಹಿ.ಪ್ರಾ.ಗಂ. ಶಾಲೆ ಬೆಲ್ಲದ ಬಾಗೇವಾಡಿ :
ಒಂದರಿಂದ 7ನೇ ತರಗತಿಗಳನ್ನು ಹೊಂದಿರುವ ಶಾಲೆಯಲ್ಲಿ 156 ಮಕ್ಕಳಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 95.25 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಪಡಿಸಿಸರ್ಕಾರಕ್ಕೆ ಕಳಿಸಲಾಗಿದೆ. ಇದರಲ್ಲಿ ನಾಲ್ಕು ಹೊಸ ಕೊಠಡಿಗಳ ಅಗತ್ಯತೆಇದ್ದು, ಇದಕ್ಕಾಗಿ 44 ಲಕ್ಷ ರೂ. ಕ್ರಿಯಾಯೋಜನೆ, ಇದಲ್ಲದೆ 4 ಲಕ್ಷರೂ. ದಲ್ಲಿ 10 ಗಣಕಯಂತ್ರ, 3 ಲಕ್ಷದಲ್ಲಿ ಶುದ್ಧ ಕುಡಿಯುವ ನೀರಿನಘಟಕ, 11.50 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ ಹಾಗೂ ವಿದ್ಯುತ್‌ಸೌಲಭ್ಯ, 11 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ವಿಜ್ಞಾನ ಪ್ರಯೋಗಾಲಯ ಮಾಡಲು ಉದ್ದೇಶಿಸಲಾಗಿದೆ.
ಶಾಲೆಯ ಕೊಠಡಿಗಳು ಬಹಳ ಹಳೆಯದಾಗಿರುವುದರಿಂದ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಚಿಂತನೆಯನ್ನು ಶಾಸಕರು ನಡೆಸಿದ್ದಾರೆ. ಮುಖ್ಯವಾಗಿ ಈಗ ಕೊಠಡಿಗಳ ದುರಸ್ತಿ ಆಗಬೇಕು. ಶಾಲಾ ಗೋಡೆ ನಿರ್ಮಾಣ,ಸಭಾಭವನ ಹಾಗೂ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮನವಿ ಮಾಡಿದ್ದೇವೆ. –ಪ್ರದೀಪ ಕುಮಾರ ರಾಯ್ಕರ, ಮುಖ್ಯಾಧ್ಯಾಪಕ
ಸರ್ಕಾರದ ಯೋಜನೆ ಹಾಗೂ ಅನುದಾನವನ್ನು ಶಿಕ್ಷಣ ಸೇರಿದಂತೆವಿವಿಧ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿಶಾಲೆಗಳ ಅಭಿವೃದ್ಧಿಗೆ ವಿಶೇಷಗಮನ ಹರಿಸಲಾಗಿದೆ. ಬೇಡಿಕೆಗಳಿಗೆ ಅನುಗುಣವಾಗಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರದ ಅನುದಾನದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. –ಉಮೇಶ ಕತ್ತಿ, ಹುಕ್ಕೇರಿ ಶಾಸಕ
-ಕೇಶವ ಆದಿ