ಗಂಗಾವತಿ: ಮನುಷ್ಯನ ಮೌಡ್ಯ ಕಳೆದು ಹೊಸ ಜೀವನಕ್ಕಾಗಿ ಶಿಕ್ಷಣ ಅಗತ್ಯವಾಗಿದೆ. ವಿಧಾನಸಭೆ ಕ್ಷೇತ್ರವಾರು ಎರಡು ಅಥವಾ ಮೂರು ಶಾಲೆಗಳನ್ನು ಶಾಸಕರು ದತ್ತು ಪಡೆದು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ದತ್ತು ಸ್ವೀಕಾರ ಯೋಜನೆ ಅತ್ಯುತ್ತಮವಾಗಿದೆ.
ಈ ಯೋಜನೆಯಡಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಗಂಗಾವತಿಯ ಸರಕಾರಿ ಮಾದರಿಯಹಿರಿಯ ಪ್ರಾಥಮಿಕ(ಪ್ರಾಪರ್) ಶಾಲೆಹಾಗೂ ಇತಿಹಾಸ ಪ್ರಸಿದ್ಧ ಆನೆಗೊಂದಿಯಸರಕಾರಿ ಪ್ರೌಢಶಾಲೆ ದತ್ತು ಪಡೆದಿದ್ದಾರೆ. ಈ ಎರಡು ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಜತೆಗೆ ಶೈಕ್ಷಣಿಕ ಪ್ರಗತಿಗಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದಾರೆ.
ಗಂಗಾವತಿ ನಗರದ ಮಧ್ಯೆ ಭಾಗದಲ್ಲಿರುವ ಪ್ರಾಪರ್ ಶಾಲೆ 1906ರಲ್ಲಿ ನಿರ್ಮಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲೇಪುರಾತನ ಶಾಲೆಯಾಗಿದೆ. ಈ ಶಾಲೆಯಲ್ಲಿಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಮಾಡಿ ದೇಶ, ವಿದೇಶಗಳಲ್ಲಿ ಉನ್ನತಹುದ್ದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2006ರಲ್ಲಿ ಈ ಶಾಲೆಶತಮಾನೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕೊಠಡಿಗಳು ಮತ್ತು ರಂಗವೇದಿಕೆ ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಸಣ್ಣಪುಟ್ಟ ಸಾಮಗ್ರಿ ಖರೀದಿ ಮಾಡಲಾಗಿದೆ.ಪ್ರಾಪರ್ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಶಾಲೆಯಲ್ಲಿ 2500ಕ್ಕೂಹೆಚ್ಚು ಪುಸ್ತಕಗಳಿದ್ದು, ಗ್ರಂಥಾಲಯಕ್ಕೆ ಪ್ರತೇಕ ಕೋಣೆ ಅಗತ್ಯವಿದೆ. ಶೌಚಾಲಯ ಕಟ್ಟಡ ಶಿಥಿಲಗೊಂಡಿದೆ. ಬಿಸಿಯೂಟ ಕೋಣೆ ಸರಿಯಿಲ್ಲ. ಶಾಲೆ ನಗರದ ಮಧ್ಯೆಇರುವುದರಿಂದ ಜನರು ಶಾಲೆಯಆವರಣದಲ್ಲಿ ಹೊಲಸು ಮಾಡುತ್ತಿದ್ದಾರೆ.ಗೇಟ್, ಕಾಂಪೌಂಡ್ ನಿರ್ಮಾಣ, ಕಾವಲುಗಾರನ ನೇಮಕ ಅಗತ್ಯವಾಗಿದೆ. ಸದ್ಯ 206 ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಲು ಕ್ರಮ ವಹಿಸಬೇಕಿದೆ.
ಆನೆಗೊಂದಿ ಸರಕಾರಿ ಪ್ರೌಢಶಾಲೆ: 1984ರಲ್ಲಿ ತಾಲೂಕಿನ ಆನೆಗೊಂದಿಯಲ್ಲಿ ಸರಕಾರಿ ಪ್ರೌಢಶಾಲೆ ಆರಂಭ ಮಾಡಿದ್ದು, ಸಂಗಾಪೂರದಿಂದ ಹಿಟ್ನಾಳ ಭಾಗದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿದ್ದಾರೆ. ಈ ಶಾಲೆಯಲ್ಲೂ ಮೂಲ ಸೌಕರ್ಯದ ಕೊರತೆ ಇದೆ. ಪ್ರತೇಕ ಗ್ರಂಥಾಲಯ, ಊಟದ ಹಾಲ್, ಕ್ರೀಡಾಂಗಣ ಅಭಿವೃದ್ಧಿ, ಬಿಸಿಯೂಟದ ಕೋಣೆಯ ನಿರ್ಮಾಣದ ಅಗತ್ಯವಿದೆ.
ಕ್ಷೇತ್ರದ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿಮೂಲ ಸೌಕರ್ಯದ ಅಗತ್ಯವಿದೆ. ಸದ್ಯ ಪ್ರಾಪರ್ ಶಾಲೆ ಮತ್ತುಆನೆಗೊಂದಿ ಸರಕಾರಿ ಪ್ರೌಢಶಾಲೆ ದತ್ತು ಸ್ವೀಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಾಪರ್ ಶಾಲೆ 114 ವರ್ಷಗಳ ಇತಿಹಾಸ ಹೊಂದಿದೆ.ಶಾಲೆಗೆ ಭೇಟಿ ನೀಡಿ ಅಗತ್ಯ ಸೌಕರ್ಯಗಳ ಕುರಿತು ಮುಖ್ಯಗುರುಗಳು ಮತ್ತು ವಿದ್ಯಾರ್ಥಿ ಪಾಲಕರ ಜತೆ ಚರ್ಚೆ ನಡೆಸಲಾಗಿದೆ. ಮೂರು ವರ್ಷಗಳಲ್ಲಿ ಎರಡು ಶಾಲೆಗಳಿಗೆ ಪ್ರತಿವರ್ಷ 10 ಲಕ್ಷದಂತೆ 60 ಲಕ್ಷ ರೂ. ವೆಚ್ಚದಲ್ಲಿಯೋಜನೆ ರೂಪಿಸಿ ಗ್ರಂಥಾಲಯ, ಡೈನಿಂಗ್ ಹಾಲ್, ಶೌಚಾಲಯ, ಶುದ್ಧ ಕುಡಿಯುವನೀರಿನ ಘಟಕ, ಕಾಂಪೌಂಡ್ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಇಡೀ ಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳಿಗೂ ಅನುದಾನ ಮಂಜೂರಿ ಮಾಡಲಾಗುತ್ತದೆ. ಗಂಗಾವತಿ ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆದರ್ಶ ಶಾಲೆಗಳಿಲ್ಲ. ಈ ಶಾಲೆಗಳನ್ನು ಮಂಜೂರಿ ಮಾಡುವಂತೆ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.-
ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕರು
ಪ್ರಾಪರ್ ಶಾಲೆ ದತ್ತು ಯೋಜನೆಯಲ್ಲಿ ಆಯ್ಕೆಯಾಗಿರುವುದಕ್ಕೆ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ವಿದ್ಯಾರ್ಥಿ, ಪಾಲಕರು ಸೇರಿ ಶಿಕ್ಷಕ ವೃಂದದ ಪರವಾಗಿ ಅಭಿನಂದನೆಗಳು. ಶಾಲೆಗೆ ಈಗಾಗಲೇ ಭೇಟಿ ನೀಡಿ ಅಗತ್ಯವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ ಕೋಣೆ, ಶೌಚಾಲಯ ಬಿಸಿಯೂಟದ ಕೋಣೆ, ಕಟ್ಟಡ ಪುನರ್ ನಿರ್ಮಾಣಕ್ಕೆ ಈಗಾಗಲೇ ಬಿಇಒ ಮೂಲಕ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಜಯಲಕ್ಷ್ಮೀ ಮುಖ್ಯ ಶಿಕ್ಷಕಿ, ಪ್ರಾಪರ್ ಶಾಲೆ
– ಕೆ. ನಿಂಗಜ್ಜ