Advertisement

ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ: ಆರೋಗ್ಯ ಸಚಿವೆಗೆ ಮನವಿ

11:14 PM Jul 22, 2019 | Team Udayavani |

ಕುಂಬಳೆ: ಕುಂಬಳೆ ,ಮಂಜೇಶ್ವರ ಮತ್ತು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಗೊಳಿಸಬೇಕು ಮತ್ತು ಒಳರೋಗಿ ಚಿಕಿತ್ಸಾ ವಿಭಾಗವನ್ನು ಕಾರ್ಯಕ್ಷಮತೆಗೊಳಿಸಬೇಕೆಂಬುದಾಗಿ ರಾಜ್ಯ ಆರೋಗ್ಯ ಸಚಿವೆ ಶೈಲಜಾಟೀಚರ್‌ ಅವರಿಗೆ ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಸದಸ್ಯ ಕೆ.ಆರ್‌.ಜಯಾನಂದ ಮತ್ತು ಕಾಸರಗೋಡು ಮಾಜಿ ಲೋಕಸಭಾ ಸದಸ್ಯಪಿ.ಕರುಣಾಕರನ್‌ ಮನವಿ ಸಲ್ಲಿಸಿದರು.

Advertisement

ಮಂಗಲ್ಪಾಡಿ ಸಿ.ಎಚ್‌.ಸಿ.ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದ ರ್ಜೆಗೇರಿಸುವುದಾಗಿಯೂ,ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯದ ವ್ಯವಸ್ಥೆ ಮಾಡುವುದಾಗಿಯೂ,ಮಂಜೇಶ್ವರ ಸರಕಾರಿ ಆಸ್ಪ‌ತ್ರೆಯಲ್ಲಿ ಒಳರೋಗಿ ವಿಭಾಗ ಮತ್ತು ಹೆರಿಗೆ ವಿಭಾಗ ತೆರೆಯುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದರು.

ಮುಂದಿನ ತಿಂಗಳಲ್ಲಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡುವುದಾಗಿಯೂ ತಾಲೂಕು ಆಸ್ಪತ್ರೆಗೆ 20 ಕೋಟಿ ವೆಚ್ಚದ ನೀಲಿ ನಕಾಶೆ ಸಿದ್ಧ ಪಡಿಸಲು ಆದೇಶ ನೀಡುವುದಾಗಿ ಹೇಳಿದರು.

ಕುಂಬಳೆ ,ಮಂಜೇಶ್ವರ ಮತ್ತು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗಳ ಸಿಬಂಧಿ ಕೊರತೆ ನಿವಾರಣೆ, ಹೆಚ್ಚಿನ ಉಪಕರಣಗಳ ವಿತರಣೆ ಮಾಡಲಾಗುವುದು.ಪೈವಳಿಕೆ ಪಂಚಾಯತಿನ ಬಾಯಾರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸರಕಾರದ ಮುಂಗಡಪತ್ರದಲ್ಲಿ ಒಂದು ಕೋಟಿ ಮೀಸಲಿರಿಸಲಾಗಿದೆ. ಇದರ ಯೋಜನೆಯನ್ನು ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿರುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next