Advertisement

ಕಾಂಗ್ರೆಸ್ಸಿಗೆ ದಲಿತರ ಮತ ಬೇಕು-ಅಭಿವೃದ್ಧಿ ಬೇಡ

01:11 PM Apr 15, 2017 | |

ದಾವಣಗೆರೆ: ದೇಶಕ್ಕೆ ಸ್ವಾತಂತ್ರ ಬಂದಾಗನಿಂದಲೂ ಕಾಂಗ್ರೆಸ್‌ ದಲಿತ ಸಮುದಾಯವನ್ನು ಮತಕ್ಕೆ ಮಾತ್ರವೇ ಬಳಸಿಕೊಂಡಿದೆಯೇ ಹೊರತು ಆ ಸಮುದಾಯದ ಅಭಿವೃದ್ಧಿಗೆ ಗಮನ ನೀಡಲಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ದೂರಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿದರು.

Advertisement

ಭಾರತಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಅಂಬೇಡ್ಕರ್‌ರ ಹೆಸರನ್ನು ನಶಿಸುವ ಕೆಲಸ ಮಾಡುತ್ತಿದೆ ಎಂದರು. ದೇಶಕ್ಕೆ ಸ್ವಾತಂತ್ರ ದೊರೆತ 70 ವರ್ಷಗಳಲ್ಲಿ 50 ರಿಂದ 55 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ ದಲಿತ ಸಮುದಾಯವನ್ನು ಮತಗಳಿಗೆ ಮಾತ್ರವೇ ಬಳಸಿಕೊಂಡಿತು. ಕಾಂಗ್ರೆಸ್‌ನವರೇ ಆಗಿದ್ದ ಅಂಬೇಡ್ಕರ್‌  ಅವರನ್ನು 2 ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲಿಲ್ಲ. 

ಈಗಿನ ಮುಂಬೈನಲ್ಲಿರುವ ಅವರ ಸಮಾಧಿ ಅಭಿವೃದ್ಧಿಗೆ ಗಮನ ನೀಡಲಿಲ್ಲ ಎಂದು ತಿಳಿಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರು ಅಂಬೇಡ್ಕರ್‌ರವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಅನಾವರಣ ಮಾಡಿಸಿದರು ಮಾತ್ರವಲ್ಲ ಮರಣೋತ್ತರವಾಗಿ ಭಾರತರತ್ನ ಕೊಡ ಮಾಡಿಸಿದರು.

ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸುವ ಮುನ್ನ ಅಂಬೇಡ್ಕರ್‌ರವರನ್ನ ನೆನೆಪಿಸಿಕೊಂಡು ಸಂಸತ್‌ ಬಾಗಿಲಿಗೆ ಪಾದ ನಮಸ್ಕರಿಸಿ, ಅಂಬೇಡ್ಕರ್‌ರಿಗೆ ಗೌರವ ಸಲ್ಲಿಸಿದರು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೀನ ದಲಿತರು, ಹಿಂದುಳಿದವರ ಅಭಿವೃದ್ಧಿಗಾಗಿ ಅಟಲ್‌ ಪೆನÒನ್‌ ಯೋಜನೆ, ಜನಧನ್‌,  ಪ್ರಧಾನಿ ಸುರಕ್ಷಾ ಬಿಮಾ ಯೋಜನೆ, ಮುದ್ರಾ ಯೋಜನೆ ಜಾರಿಗೆ ತಂದಿದೆ.

ಮುದ್ರಾ ಯೋಜನೆಯಲ್ಲಿ 3 ಕೋಟಿ ಜನಕ್ಕೆ ಸಾಲ ಸೌಲಭ್ಯ ಒದಗಿಸಲಾಗಿದೆ. ಸ್ಯಾrಂಡ್‌ ಅಪ್‌ ಯೋಜನೆಯ ಮೂಲಕ ಪ್ರತಿ ಬ್ಯಾಂಕ್‌ ಶಾಖೆಯಲ್ಲಿ ಕನಿಷ್ಟ ಪಕ್ಷ 10 ಜನರಿಗೆ ಸಾಲ ಸೌಲಭ್ಯ ಒದಗಿಸಲು ಕಾನೂನು ಜಾರಿಗೆ ತರಲಾಗಿದೆ. ಅವರ ಹೆಸರಲ್ಲಿ ಅಂ.ಚೆಚೀಟಿ ಹೊರ ತರಲಾಗಿದೆ. ಎನ್‌ಡಿಎ ಸರ್ಕಾರ ಅಂಬೇಡ್ಕರ್‌ ಆಶಯಕ್ಕೆ ನಡೆಯುತ್ತಿದೆ. ಇಷ್ಟೊಂದು ಕೊಡುಗೆ ಯಾವುದೇ ಸರ್ಕಾರ ನೀಡಿಲ್ಲ ಎಂದು  ತಿಳಿಸಿದರು. 

Advertisement

ಅಂಬೇಡ್ಕರ್‌ರವರ 125ನೇ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರ ವರ್ಷವಿಡೀ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ದೆಹಲಿಯಲ್ಲಿ 198 ಕೋಟಿ ಅನುದಾನದಲ್ಲಿ ಅಂತಾರಾಷ್ಟ್ರೀಯ ಸಭಾಭವನ, 200 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್‌ ಸಮಾಧಿ ಅಭಿವೃದ್ಧಿ, ಲಂಡನ್‌ನಲ್ಲಿ ಅವರು ವಾಸವಿದ್ದ ಮನೆಯನ್ನು 40 ಕೋಟಿಗೆ ಖರೀದಿಸಿ, ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುತ್ತಿದೆ. 

ಕೊಲಂಬಿಯಾ ವಿಶ್ವ ವಿದ್ಯಾಲಯವೇ ಅವರಿಗೆ ಗೌರವ ಸಲ್ಲಿಸುತ್ತಿದೆ. ಬೇಡ್ಕರ್‌ ಭಾರತದ  ಹೆಮ್ಮೆಯ ಪುತ್ರ. ಅವರು ಭಾರತದಲ್ಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್‌  ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ಸಹನಾ ರವಿ, ತಾಲೂಕು ಪಂಚಾಯತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಎಚ್‌.ಎನ್‌. ಶಿವಕುಮಾರ್‌,  

ಕೆ.ಎಚ್‌. ಬಸವರಾಜ್‌, ಪ್ರೊ| ಎನ್‌. ಲಿಂಗಣ್ಣ,ಕೆ. ಹೇಮಂತ್‌ಕುಮಾರ್‌, ಕೆ.ನ್‌. ಓಂಕಾರಪ್ಪ, ಜಿ.ಎಂ. ರುದ್ರೇಗೌಡ, ನಗರಪಾಲಿಕೆ ಬಿಜೆಪಿ ಸದಸ್ಯ ಡಿ.ಎನ್‌. ಕುಮಾರ್‌ ಇತರರು ಇದ್ದರು. ನಾಗರತ್ನನಾಯಕ್‌ ಪ್ರಾರ್ಥಿಸಿದರು. ತಾಲೂಕು ಪಂಚಾಯತ್‌ ಸದಸ್ಯ ಆಲೂರು ನಿಂಗರಾಜ್‌ ಸ್ವಾಗತಿಸಿದರು. ಬಾಲರಾಜ್‌ ಎರಿಸೀಮೆ ನಿರೂಪಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next