ಸ್ಟೇಟ್‌ಬ್ಯಾಂಕ್: ನಗರದ ಸೆಂಟ್ರಲ್ ಮಾರುಕಟ್ಟೆ ಸುತ್ತಮುತ್ತ ಮೂರು ರಸ್ತೆಗಳನ್ನು ಒಟ್ಟು 630 ಮೀ. ಉದ್ದಕ್ಕೆ ಸ್ಮಾರ್ಟ್‌ಸಿಟಿ ಮುಖೇನ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಪ್ರಸ್ತಾವಿತ ರಸ್ತೆಯು 15ರಿಂದ 12 ಮೀ. ಅಗಲವಿರುತ್ತದೆ.
ನಗರದ 41ನೇ ಸೆಂಟ್ರಲ್ ಮಾರ್ಕೆಟ್‌ನ ಸುತ್ತಮುತ್ತ ರಸ್ತೆಯು ನಗರದ ಪ್ರಮುಖ ವಾಣಿಜ್ಯ ವಲಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿವೆ. ಹಾಗೂ ಪ್ರಮುಖ ದೇವ ಸ್ಥಾನಗಳನ್ನು ಸಂಪರ್ಕಿ ಸುವ ರಸ್ತೆಯಾಗಿದೆ. ಇದೀಗ ಇಲ್ಲಿನ ರಸ್ತೆಗಳನ್ನು 12ರಿಂದ 15 ಮೀ. ಅಗಲಕ್ಕೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಈ ರಸ್ತೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು ರಸ್ತೆಯು ತೀರ ಹದ ಗೆಟ್ಟಿದೆ. ಹೀಗಾಗಿ ಈ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ.
ಈ ರಸ್ತೆಯಲ್ಲಿ 3 ಮೀ.ಅಗಲದ 3 ಲೇನ್ ಕಾಂಕ್ರೀಟ್ ಲೇನ್ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ 1.5 ಮೀ. ಅಗಲದ ಇಂಟರ್‌ಲಾಕ್ ಅಳವಡಿಸಲಾಗುತ್ತದೆ. ರಸ್ತೆಯ ಎರಡು ಇಕ್ಕೆಲಗಳಲ್ಲಿ ಮಳೆ ನೀರು ಚರಂಡಿ, ಯುಟಿಲಿಟಿ ಡಕ್ಟ್, ಪಾದಚಾರಿಗಳ ಮಾರ್ಗವನ್ನು ಮತ್ತು ಬೀದಿದೀಪಗಳೊಂದಿಗೆ ನಿರ್ಮಿಸಲಾಗುತ್ತದೆ. ಒಟ್ಟು 6 ಕೋ.ರೂ ವೆಚ್ಚದಲ್ಲಿ ಇಲ್ಲಿನ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ.
ಮೂರು ರಸ್ತೆಗೆ ಶಿಲಾನ್ಯಾಸ :
ಸ್ಟೇಟ್‌ಬ್ಯಾಂಕ್ ವ್ಯಾಪ್ತಿಯಲ್ಲಿ ವಾಣಿಜ್ಯ ವಲಯಗಳಿಗೆ ಸಂಪರ್ಕ ಕಲ್ಪಿಸುವ ನೆಲೆಯಲ್ಲಿ 630 ಮೀ. ಉದ್ದದಲ್ಲಿ ಮೂರು ರಸ್ತೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಇತ್ತೀಚೆಗೆ ಶಿಲಾನ್ಯಾಸ ಮಾಡಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅವರ ವಿಶೇಷ ಒತ್ತಾಸೆಯಂತೆ ಈ ಯೋಜನೆಗಳು ಸಾಕಾರವಾಗುತ್ತಿದೆ. – ಪ್ರೇಮಾನಂದ ಶೆಟ್ಟಿ, ಮೇಯರ್