Advertisement

11 ಕೋಟಿ ವೆಚ್ಚದಲ್ಲಿ ಸಣ್ಣ ಕೆರೆ ಅಭಿವೃದ್ಧಿ: ಶಾಸಕ ಎಂ. ಚಂದ್ರಪ್ಪ

10:41 AM May 12, 2020 | mahesh |

ಹೊಳಲ್ಕೆರೆ: ಪಟ್ಟಣದ ಹೊಸದುರ್ಗ ರಸ್ತೆಯ ಸಣ್ಣ ಕೆರೆ ಅಭಿವೃದ್ಧಿಗೆ 11ಕೋಟಿ ರೂ. ಅನುದಾನ ಬಿಡಗಡೆಯಾಗಿದ್ದು, ಕೆರೆ ಮೇಲೆ ಷಟ್ಪಥ ನಿರ್ಮಾಣ ಮಾಡಿ ಚಿಕ್ಕ ಉದ್ಯಾನವನವನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು. ಹೊಸದುರ್ಗ ರಸ್ತೆಯಲ್ಲಿರುವ ಸಣ್ಣಕೆರೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗೆ ಸೇರಿಕೊಂಡಿರುವ ಪಟ್ಟಣದ ಗಣಪತಿ ಸರ್ಕಲ್‌, ಬಸ್‌ ನಿಲ್ದಾಣ, ಹೊಸದುರ್ಗ ರಸ್ತೆಯ ಇಕ್ಕೆಲವನ್ನು ಅಗಲೀಕರಣ ಮಾಡುವ ನಿಟ್ಟಿನಲ್ಲಿ ರಸ್ತೆ ಒತ್ತುವರಿ ಮಾಡಿದ್ದ
ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

Advertisement

ಪಟ್ಟಣದ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಬೃಹತ್‌ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು. ಸಣ್ಣ ಕೆರೆಯಿಂದ ಹೊಸದುರ್ಗ ರಸ್ತೆಯಲ್ಲಿರುವ ಸಪ್ತಪದಿ ಕಲ್ಯಾಣಮಂಟಪದ ತನಕ ಷಟ³ಥ ನಿರ್ಮಾಣ ಮಾಡಿ ಎರಡು ಬದಿಯಲ್ಲಿ ವಿದ್ಯುತ್‌ ದೀಪ ಅಳವಡಿಸಲಾಗುವುದು. ಐದಾರು ಅಡಿ ಜಾಗ ಬಿಟ್ಟು ಅಲ್ಲಿ ಸಸಿಗಳು, ಲಾನ್‌ ಹಾಕಲಾಗುತ್ತದೆ. ಇದರಿಂದ ರಸ್ತೆ ಮತ್ತು ಕೆರೆ ಸೌಂದರ್ಯ ಹೆಚ್ಚಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಸಣ್ಣ ಕೆರೆಗೆ ನೀರು ತುಂಬಿಸಲಾಗುತ್ತದೆ. ಅಲ್ಲಿ ಟ್ಯಾಂಕ್‌ ನಿರ್ಮಾಣ ಮಾಡಿ ಅಲ್ಲಿಂದ ತಾಳ್ಯ, ಎಚ್‌.ಡಿ. ಪುರ ಮತ್ತಿತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಅದಕ್ಕೆ 101 ಕೋಟಿ ರೂ. ಬಿಡುಗಡೆಯಾಗಿದ್ದು ಟೆಂಡರ್‌ ಹಂತದಲ್ಲಿದೆ. ಕೆರೆಯೊಳಗೆ ಬೃಹತ್‌ ಶಿವಲಿಂಗ ಸ್ಥಾಪಿಸಿ ನೀರಿನ ಕಾರಂಜಿ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next