Advertisement

HIV vaccine; ಎಚ್‌ಐವಿ ತಡೆಗೆ 2 ಡೋಸ್‌ ಲಸಿಕೆ ಅಭಿವೃದ್ಧಿ: ಎಂಐಟಿ

10:39 AM Sep 22, 2024 | Team Udayavani |

ನವದೆಹಲಿ: ಎಚ್‌ಐವಿ ತಡೆಗಟ್ಟಲು ಮೆಸ್ಸಾಚ್ಯೂಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ) ಅವರು 2 ಡೋಸ್‌ ಲಸಿಕೆ ತಯಾರು ಮಾಡಿದ್ದು, ಇದು ರೋಗಿಗಳ ಪ್ರತಿಕಾಯಗಳನ್ನು ವೃದ್ಧಿಸುತ್ತದೆ ಎಂದು ಸಂಸ್ಥೆ ಹೇಳಿದೆ.

Advertisement

ಎಚ್‌ಐವಿಗೆ ಲಸಿಕೆ ತಯಾರು ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ವರ್ಷಗಳಿಂದ ಶ್ರಮಿಸುತ್ತಿರುವ ಎಂಐಟಿ ಇದೀಗ 2 ಡೋಸ್‌ನ ಲಸಿಕೆ ತಯಾರಿ ಮಾಡಿರುವ ಮಾಹಿತಿ ನೀಡಿದೆ. 1 ವಾರದ ಅಂತರದಲ್ಲಿ 2 ಡೋಸ್‌ ನೀಡಲಾಗುತ್ತದೆ.

ಮೊದಲ ಡೋಸ್‌ನಲ್ಲಿ ಶೇ.20ರಷ್ಟು ಲಸಿಕೆ ನೀಡಿದರೆ, 2ನೇ ಡೋಸ್‌ನಲ್ಲಿ ಶೇ.80ರಷ್ಟು ಲಸಿಕೆ ನೀಡಲಾಗುತ್ತದೆ. ಇದು ಸೋಂಕಿತನ ದೇಹದಲ್ಲಿ ರೋಗದ ವಿರುದ್ಧ ಹೋರಾಡಲು ಬೇಕಾದ ಪ್ರತಿಕಾಯಗಳನ್ನು ವೃದ್ಧಿಸುತ್ತದೆ ಎಂದು ಎಂಐಟಿಯ ತಜ್ಞರು ಹೇಳಿದ್ದಾರೆ.

10 ಲಕ್ಷ ಜನಕ್ಕೆ ಸೋಂಕು: ಪ್ರತಿ ವರ್ಷ ಸುಮಾರು 10 ಲಕ್ಷ ಮಂದಿ ಎಚ್‌ಐವಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಲಸಿಕೆ ಇಲ್ಲದಿರುವುದು ಸಹ ಇದಕ್ಕೆ ಪ್ರಮುಖ ಕಾರಣ, ಈಗ ಲಸಿಕೆ ಅಭಿವೃದ್ಧಿಯಾಗಿರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next