Advertisement
ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಮಂಡೆ ಕೋಲು ಗ್ರಾಮ ಕೇರಳದ ರಾಜ್ಯದ ಕಾಸರಗೋಡು ಜಿಲ್ಲೆ ಹಾಗೂ ದ.ಕ. ಗಡಿ ಭಾಗದ ಗ್ರಾಮ. ಬಹುತೇಕ ಪ್ರದೇಶ ಅರಣ್ಯ ಪ್ರದೇಶದಿಂದ ಕೂಡಿದ್ದು, ಅಭಿವೃದ್ಧಿ ಹೊಂದುತ್ತಿದ್ದರೂ, ಇನ್ನಷ್ಟು ಬೇಡಿಕೆಗಳು ಗ್ರಾಮಸ್ಥರಲ್ಲಿ ಇವೆ. ಈ ಗ್ರಾಮ ಕೃಷಿ ಇಲ್ಲಿನ ಪ್ರಮುಖ ಬೆಳೆ. ಧಾರ್ಮಿಕ ಆಚರಣೆಯಲ್ಲೂ ಮಂಡೆಕೋಲು ವಿಶೇಷವಾಗಿ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಅವರ ಹುಟ್ಟೂರು ಕೂಡಾ.
Related Articles
Advertisement
ಮಂಡೆಕೋಲಿನ ಮುರೂರು ಎಂಬಲ್ಲಿ ಹಿಂದೆ ಅರಣ್ಯ ಚೆಕ್ ಪೋಸ್ಟ್ ಇದ್ದು, ಇದೀಗ ಪೊಲೀಸ್ ಚೆಕ್ ಪೋಸ್ಟ್ ಕಾರ್ಯಚರಿಸುತ್ತಿದೆ. ಮಂಡೆಕೋಲಿನ ಜನರು ಈ ರಸ್ತೆಯಲ್ಲಿ ಸಂಚಾರದಲ್ಲಿ ತಪಾಸಣೆ ನೆಪದಲ್ಲಿ ಕಿರಿಕಿರಿ ಅನುಭವಿಸಬೇಕಾಗಿದೆ ಎಂಬ ದೂರು ಗ್ರಾಮಸ್ಥರದ್ದು. ಈ ಚೆಕ್ ಪೋಸ್ಟ್ ಮಂಡೆಕೋಲಿನ ಗಡಿ ಭಾಗ ಪರಪ್ಪೆ ಎಂಬಲ್ಲಿ ಆದಲ್ಲಿ ಒಳಿತು ಎಂಬುದು ಆಗ್ರಹ. ಪರಪ್ಪೆ-ಪಂಜಿಕಲ್ಲು ತೂಗುಸೇತುವೆ ಸಂಪರ್ಕ ಅಂತರ್ ರಾಜ್ಯ ರಸ್ತೆಯಲ್ಲಿ ಅಪಘಾತ ನಡೆದಲ್ಲಿ ಸುಳ್ಯ ಠಾಣೆಯಲ್ಲಿ ದೂರು ದಾಖ ಲಾದರೂ ಆದೂರು ಠಾಣೆಗೆ ಪ್ರಕರಣ ವರ್ಗಾ ವಣೆಗೊಂಡು ಸಮಸ್ಯೆ ಯಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಇತರ ಬೇಡಿಕೆ
ಸಮರ್ಪಕ ನೆಟ್ ವರ್ಕ್, ಕಾಡು ಪ್ರಾಣಿಗಳ ಹಾವಳಿ ತಡೆ, ಸರಿಯಾದ ವಿದ್ಯುತ್, ಉಪ ಆರೋಗ್ಯ ಕೇಂದ್ರ, ಕುಡಿಯುವ ನೀರು ಸೇರಿ ವಿವಿಧ ಬೇಡಿಕೆ ಮುಂದಿಡುತ್ತಿದ್ದಾರೆ.
ರಸ್ತೆ, ಸೇತುವೆ ಬೇಡಿಕೆ
ಮಂಡೆಕೋಲು ಗ್ರಾಮದ ಮುರೂರು-ಮಂಡೆಕೋಲು ಸಂಪರ್ಕದಲ್ಲಿ ತೋಡೊಂದಕ್ಕೆ ಸೇತುವೆ ನಿರ್ಮಾಣಗೊಂಡಿದ್ದರೂ ಇಲ್ಲಿ ಸುಮಾರು 1 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದೆ. ಇದು ಕಾಸರಗೋಡು, ಜಾಲೂÕರು ಸಂಪರ್ಕ ರಸ್ತೆಯಾಗಿದೆ. ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕಿಸುವ 2 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಿದೆ. ಕಲ್ಲಡ್ಕ ಪರಪ್ಪೆ ಎಂಬಲ್ಲಿನ ಕಾಲನಿ ಸಂಪರ್ಕಿಸುವಲ್ಲಿ ಕಾಯರ್ತೋಡಿ ಎಂಬಲ್ಲಿಗೆ ಸೇತುವೆ ಬೇಡಿಕೆ ಈಡೇರದ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮಂಡೆಕೋಲು-ಮೈತಡ್ಕ ಸಂಪರ್ಕ ರಸ್ತೆ, ಪೇರಾಲು-ಮೈತಡ್ಕ ಸಂಪರ್ಕ ರಸ್ತೆ ಅಭಿವೃದ್ದಿಯಾಬೇಕಿದೆ. ಇದರ ಜತೆಗೆ ಗ್ರಾಮದ ವಿವಿಧ ಭಾಗಗಳ ರಸ್ತೆ ಅಭಿವೃದ್ಧಿಯ ಬೇಡಿಕೆ ಇದೆ. ರಸ್ತೆ ಅಭಿವೃದ್ಧಿಗೊಳಿಸುವಂತೆ ಇತ್ತೀಚೆಗೆ ಚುನಾವಣೆ ಬಹಿಷ್ಕಾರಕ್ಕೂ ಇಲ್ಲಿನವರು ಮುಂದಾಗಿದ್ದರು. ಆಗ ಅಭಿವೃದ್ಧಿ ಭರವಸೆ ನೀಡಲಾಗಿದ್ದು ಅದು ಶೀಘ್ರ ಅನುಷ್ಠಾನಕ್ಕೆ ಬರಬೇಕಾಗಿದೆ.