Advertisement

ಅಭಿವೃದ್ಧಿ ಸ್ಪಷ್ಟತೆ ಇಲ್ಲದ ಭೂ ಭರ್ತಿ ಅನುದಾನ!

02:50 PM Apr 21, 2020 | mahesh |

ಬೆಂಗಳೂರು: ನಗರದ ಕಸ ಸುರಿಯಲು ಪಾಲಿಕೆ ಆಯ್ಕೆ ಮಾಡಿಕೊಂಡಿದ್ದ ಭೂ ಭರ್ತಿ ಕೇಂದ್ರಗಳ ಸುತ್ತಲಿನ ಪ್ರದೇಶ ಅಭಿವೃದ್ಧಿಗೆ ಪಾಲಿಕೆ ಈ ವರ್ಷದ ಬಜೆಟ್‌ನಲ್ಲಿ ದೊಡ್ಡ ಮೊತ್ತ ಮೀಸಲಿರಿಸಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಕ್ಷಣ ಸನಿಹದಲ್ಲಿರುವಂತೆ ಕಂಡರೂ, ಈ ಪ್ರದೇಶಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಲಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ರಾಜಕೀಯ ಪಕ್ಷಗಳು ಭೂಭರ್ತಿ ಪ್ರದೇಶಗಳ ಸುತ್ತಲಿನ ಹಳ್ಳಿಗಳಲ್ಲಿನ ಜನರನ್ನು ಎತ್ತಿಕಟ್ಟಿ ಕಸ ಸುರಿಯದಂತೆ ತಡೆದ ಪ್ರಯತ್ನ ಆಗಾಗ್ಗೆ ವರದಿಯಾಗಿವೆ.

Advertisement

ಅಭಿವೃದ್ಧಿಗೆ ಹಣ ಮೀಸಲಿಟ್ಟರೆ ಮಾತ್ರ ಕಸ ಸುರಿಯಿರಿ ಎಂಬ ಧಿಕ್ಕಾರಗಳ ಕೂಗು ಕೇಳಿಬಂದಿತ್ತು. ಈಗ ರಾಜಕೀಯ ಇಚ್ಛಾಶಕ್ತಿ ಮೇಲುಗೈ ಸಾಧಿಸಿದೆ. ಸಾಮಾನ್ಯವಾಗಿ ಒಂದು ಪಕ್ಷ ಆಡಳಿತಕ್ಕೆ ಬಂದರೆ ವಿರೋಧ ಪಕ್ಷದ ಸದಸ್ಯರು ಆಡಳಿತದಲ್ಲಿರುವ ವ್ಯಾಪ್ತಿಯ ಭೂಭರ್ತಿ ಸುತ್ತಲಿನ ಪ್ರದೇಶದ ಅಭಿವೃದ್ಧಿ ತಾರತಮ್ಯ ಮಾಡಲಾಗುತ್ತದೆ. ಆದರೆ, ಈ ಬಾರಿ ಕೆಲ ಭೂಭರ್ತಿ
ಪ್ರದೇಶಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಮೀಸಲಿಡಲಾಗಿದೆ. ಇದರಲ್ಲಿ ಜನರ ಹಿತಾಸಕ್ತಿ ನಡುವೆ ಇಲ್ಲಿ ರಾಜಕೀಯ ಹಿತಾಸಕ್ತಿಯೂ ಕೆಲಸ ಮಾಡಿದೆ.

ಪಾಲಿಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಭೂಭರ್ತಿ ಸುತ್ತಲಿನ ಪ್ರದೇಶಗಳಲ್ಲಿ ಆಡಳಿತ ಪಕ್ಷದ ನಾಯಕರೇ ಇದ್ದಾರೆ. ಅಲ್ಲದೆ, ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಹಣ ಮೀಸಲಿಡಲಾಗಿದೆ. ಈ ವರ್ಷಾಂತ್ಯದಲ್ಲಿ ಪಾಲಿಕೆ ಚುನಾವಣೆಯೂ ಇದ್ದು ಇಲ್ಲಿನ ಸ್ಥಳೀಯರನ್ನು ಮನವೊಲಿಸಿಕೊಳ್ಳಲು ಜನಪ್ರತಿನಿಧಿಗಳು ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.

ಭೂ ಭರ್ತಿ ಪ್ರದೇಶದಲ್ಲಿ ಹಣ ವಿನಿಯೋಗಿಸುವುದಾದರೆ ಜಲಮೂಲ, ವಾಯುಮಾಲಿನ್ಯ ತಡೆಗೆ ಕ್ರಮ  ತೆಗೆದುಕೊಳ್ಳಬೇಕು. ಅಲ್ಲದೆ, ಆರೋಗ್ಯ ತಪಾಸಣೆ, ಶುದ್ಧ ಕುಡಿವ ನೀರು ನೀಡಬೇಕು. ಈ ಭಾಗಗಳಲ್ಲಿ ಲಾರಿಗಳು ಹೆಚ್ಚು ಸಂಚರಿಸುವುದರಿಂದ ಪ್ರತ್ಯೇಕ ರಸ್ತೆ ಅಭಿವೃದ್ಧಿ ಮಾಡಬೇಕು ಇಂತಹ ಯಾವುದೇ ನಿರ್ದಿಷ್ಟ ಯೋಜನೆಯನ್ನು ಪಾಲಿಕೆ ನೀಡಿಲ್ಲ. ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮ ಅಭಿವೃದ್ಧಿ, ಮಂಡೂರು ಭೂ ಭರ್ತಿ, ಬೆಳ್ಳಳ್ಳಿ ಸುತ್ತಮುತ್ತ ಪ್ರದೇಶಾಭಿವೃದ್ಧಿಗೆ ತಲಾ 15 ಕೋಟಿ ರೂ. ಅನುದಾನ., ಮಾವಳ್ಳಿಪುರ, ದೊಡ್ಡಬಿದರ ಕಲ್ಲು ಸುತ್ತಲಿನ
ಪ್ರದೇಶಾಭಿವೃದ್ಧಿಗೆ ತಲಾ 10 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನು ಸುಬ್ಬರಾಯನಪಾಳ್ಯ, ಲಿಂಗದೀರನಹಳ್ಳಿ, ಕನ್ನಹಳ್ಳಿ ಮತ್ತು ಸೀಗೇಹಳ್ಳಿ ಸುತ್ತಮುತ್ತಲಿನ ಪ್ರದೇಶಾಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ.

ಕುಸಿದ ಘಟಕ ಅಭಿವೃದ್ಧಿಗೆ 15 ಕೋಟಿ ರೂ.
ಬಿಬಿಎಂಪಿ ಕಸ ಸಂಸ್ಕರಣಾ ಘಟಕಗಳ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಬಿಬಿಎಂಪಿ 7 ಕಸ ಸಂಸ್ಕರಣಾ ಘಟಕಗಳಲ್ಲಿ ಹಲವು ಸಾಧನ ಕಳಪೆಯಾಗಿದ್ದು,
ಇದನ್ನು ಬದಲಾಯಿಸುವ ಬಗ್ಗೆ ಚರ್ಚೆಯಾಗಿತ್ತು. ಇದರಲ್ಲೂ ಕ್ರಿಯಾಯೋಜನೆ ರೂಪಿಸಿಕೊಳ್ಳುವ ಬಗ್ಗೆ ಪಾಲಿಕೆ ಪ್ರಸ್ತಾಪ ಮಾಡಿಲ್ಲ. ಒಟ್ಟಾರೆ ಘನತ್ಯಾಜ್ಯ ನಿರ್ವಹಣೆಗೆ 757 ಕೋಟಿ ರೂ.
ಮೀಸಲಿಡಲಾಗಿದೆ.

Advertisement

● ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next