ತಿಪಟೂರು: ನಗರದ ಖಾಸಗಿ ಬಸ್ ನಿಲ್ದಾಣ ದಲ್ಲಿರುವ ಆಟೋ ನಿಲ್ದಾಣ ಮಳೆ ಬಂದರೆ ಸಾಕು ಕೆಸರು ಗದ್ದೆಯಾಗಿ ಬದಲಾಗುತ್ತದೆ. ಪ್ರತಿವರ್ಷ ಮಳೆ ಗಾಲ ಶುರುವಾದರೆ ಇದೇ ಗೋಳಾಗಿದೆ.ಸುಸಜ್ಜಿತ ಆಟೋ ನಿಲ್ದಾಣ ನಿರ್ಮಿಸುವಂತೆ ನಗರಸಭೆ, ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿ ಕೊಂಡರೂ ಪ್ರಯೋಜನವಾಗಿಲ್ಲ. ಆಟೋ ಚಾಲಕರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ ಹಾಗೂ ಹೆದ್ದಾರಿ ರಸ್ತೆ ಪಕ್ಕ ದಲ್ಲಿರುವ ಆಟೋ ನಿಲ್ದಾಣದಲ್ಲಿ ಮಳೆ ಬಂದರೆ ಸಾಕು ಕೆಸರು ಗದ್ದೆಯಾಗುತ್ತದೆ. ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಸಂಚರಿಸುವ ನೂರಾರು ಆಟೋಗಳು ಕೆಸರಲ್ಲೇ ನಿಂತುಕೊಳ್ಳು ವಂತಾಗಿದೆ. ಅಲ್ಲದೆ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಗಳ ಕಸ, ತ್ಯಾಜ್ಯ ಇಲ್ಲೇ ಬಿಸಾಡುವುದರಿಂದ ದುರ್ವಾಸನೆಯೂ ಹೆಚ್ಚಾಗಿದೆ.
ಕೆಸರಿನ ಮೇಲೆ ಓಡಾಟ: ಬೀಡಾಡಿ ಹಸುಗಳು, ಹಂದಿ, ನಾಯಿಗಳು ತ್ಯಾಜ್ಯ ವಸ್ತುಗಳಿಗೆ ಮುತ್ತಿಕೊಳ್ಳು ವುದಲ್ಲದೆ ಕೆಸರಲ್ಲಿಯೇ ಬಿದ್ದ ಒದ್ದಾಡುತ್ತಿರುತ್ತವೆ. ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಪ್ರಯಾಣಿಕರಿಗೆ ಆಟೋಗಳೇ ಆಸರೆಯಾಗಿವೆ. ಸ್ವಲ್ಪ ಮಳೆ ಬಂದರೂ ಸಾಕು ನಿಲ್ದಾಣ ಕೊಚ್ಚೆಗುಂಡಿಯಾ ಗುವುದರಿಂದ ಪ್ರಯಾಣಿಕರು ಕೆಸರಿನಲ್ಲಿ ಜಾರಿಬಿದ್ದಿ ರುವುದೂ ಇದೆ. ಆಟೋಗೆ ಹತ್ತಲು ಪ್ರಯಾಣಿಕರು ಈ ಕೆಸರಿನ ಮೇಲೆಯೇ ಓಡಾಡುವ ದುಃಸ್ಥಿತಿ ನಿರ್ಮಾಣವಾಗಿದ್ದು, ಆಟೋ ಹತ್ತಲು ಪ್ರಯಾಣಿಕರು ಹರಸಾಹಸಪಡಬೇಕಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕೆಂದು ಆಟೋ ಚಾಲಕರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಆಟೋ ಚಾಲಕ ಆನಂದ್ ಮಾತನಾಡಿ, ಇಲ್ಲಿ ಸುಮಾರು ವರ್ಷಗಳಿಂದಲೂ ಇದೇ ಸಮಸ್ಯೆಯಾಗಿದೆ. ಆಟೋ ನಿಲ್ದಾಣ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇರುವ ನಿಲ್ದಾಣವಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇದರ ನಿರ್ವಹಣೆಗೆ ತಲೆ ಕೆಡಿಸಿಕೊಂಡಿಲ್ಲ. ದಿನಕ್ಕೆ ನೂರಾರು ಜನ ನಗರಕ್ಕೆ ಬರುತ್ತಾರೆ. ಆದರೆ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ದಿನನಿತ್ಯದ ಜೀವನಕ್ಕಾಗಿ ಆಟೋ ಆಧಾರವಾಗಿಟ್ಟು ಕೊಂಡು ದುಡಿಯುತ್ತಿದ್ದೇವೆ.
ಕೆಲ ಚಾಲಕರು ಗೂಡ್ಸ್ ವಾಹನ ಇದೇ ನಿಲ್ದಾಣ ದಲ್ಲಿ ನಿಲ್ಲಿಸುತ್ತಾರೆ. ಮಳೆ ಬಂದಾಗ ಚಾಲಕರು ವಾಹನದಿಂದ ಕೆಳಕ್ಕೆ ಕಾಲಿಡು ವುದು ಕಷ್ಟವಾಗುತ್ತದೆ. ಪ್ರಯಾಣಿಕರು ನಿಲ್ದಾಣ ದಲ್ಲಿರುವ ಕೆಸರು ನೋಡಿ ಆಟೋ ಹತ್ತು ವುದಕ್ಕೆ ಬರುವುದಿಲ್ಲ. ಇದರಿಂದ ಚಾಲಕರಿಗೂ ಬಾಡಿಗೆಯೂ ಕಡಿಮೆಯಾಗುವು ದರಿಂದ ಜೀವನ ಮಾಡುವುದು ಕಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ನಿಲ್ದಾಣದಲ್ಲಿರುವ ಗುಂಡಿ ಮುಚ್ಚಿಸಿ ಮಳೆ ನೀರು ನಿಲ್ಲದಂತೆ ಮಾಡಿದರೆ ಎಲ್ಲರಿಗೂ ಅನುಕೂಲ ವಾಗುತ್ತದೆ ಎಂದು ಮನವಿ ಮಾಡಿದರು.