Advertisement

ಪ್ರಾದೇಶಿಕ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯ: ನಾಯಕ

02:51 PM Aug 15, 2021 | Team Udayavani |

ರಾಯಚೂರು: ಅಭಿವೃದ್ಧಿ ಕೇವಲ ಪ್ರಾದೇಶಿಕಪಕ್ಷಗಳಿಂದ ಸಾಧ್ಯ ಎಂಬುದಕ್ಕೆ ಅಕ್ಕಪಕ್ಕದರಾಜ್ಯಗಳೇ ನಿದರ್ಶನ. ಈ ನಿಟ್ಟಿನಲ್ಲಿ ಬರುವಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ಬೆಂಬಲಿಸುವಂತೆ ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ ಮನವಿ ಮಾಡಿದರು.

Advertisement

ನಗರದ ಅತ್ತನೂರು ಫಂಕ್ಷನ್‌ ಹಾಲ್‌ನಲ್ಲಿಶನಿವಾರ ನಡೆದ ಜಿಪಂ-ತಾಪಂ ಚುನಾವಣೆಗಳಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ದಕ್ಷಿಣ ಭಾರತ ಸೇರಿದಂತೆ ವಿವಿಧ ರಾಜ್ಯಗಳಲ್ಲಿಪ್ರಾದೇಶಿಕ ಪಕ್ಷಗಳ ಆಡಳಿತವಿದೆ. ರಾಜ್ಯದಲ್ಲೂಜೆಡಿಎಸ್‌ ಅ ಧಿಕಾರಕ್ಕೆ ಬರಬೇಕಿದ್ದು, ಆ ನಿಟ್ಟಿನಲ್ಲಿಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆಎಂದರು.

ಜಿಲ್ಲೆಯಲ್ಲಿ ಜೆಡಿಎಸ್‌ ಬಲಪಡಿಸುವ ನಿಟ್ಟಿನಲ್ಲಿಸಾಕಷ್ಟು ಒತ್ತು ನೀಡಲಾಗಿದೆ. ರಾಷ್ಟ್ರೀಯಪಕ್ಷಗಳಿಗೆ ಸಮನಾಗಿ ನಮ್ಮ ಶಕ್ತಿ ಪ್ರದರ್ಶನಮಾಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿಸಾಬೀತಾಗಿದೆ. ಕಾರ್ಯಕರ್ತರು ಹೆಚ್ಚಿನಮಟ್ಟದಲ್ಲಿ ಶ್ರಮಿಸಿದರೆ ಜಿಪಂ-ತಾಪಂಚುನಾವಣೆಗಳಲ್ಲೂ ನಾವು ಹೆಚ್ಚು ಸ್ಥಾನಗೆಲ್ಲಬಹುದು ಎಂದರು.ದೇವದುರ್ಗದ ಮುಖಂಡೆ ಕರೆಮ್ಮ ನಾಯಕಮಾತನಾಡಿ, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಫಲಿತಾಂಶ ಬರುವ ವಿಧಾನಸಭೆ ಚುನಾವಣೆಗೆದಿಕ್ಸೂಚಿಯಾಗಬೇಕು.

ಸಾಕಷ್ಟು ಜನ ಪಕ್ಷತೊರೆದಿದ್ದು, ಅವರಿಗೆ ಈ ಚುನಾವಣೆಯಲ್ಲಿಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕು.ಕಾಂಗ್ರೆಸ್‌, ಬಿಜೆಪಿ ಆಡಳಿತ ನೋಡಿ ಜನಬೇಸತ್ತಿದ್ದಾರೆ. ಜನ ಕಾಂಗ್ರೆಸ್‌ ನೋಡಿಬಿಜೆಪಿಗೆ, ಬಿಜೆಪಿ ನೋಡಿ ಕಾಂಗ್ರೆಸ್‌ಗೆ ಮತಹಾಕುತ್ತಾರೆಂಬ ಭ್ರಮೆಯಲ್ಲಿದ್ದಾರೆ. ಆದರೆ, ಈಬಾರಿ ಜೆಡಿಎಸ್‌ಗೆ ಹೆಚ್ಚಿನ ಮತ ಪಡೆಯುವಮೂಲಕ ಆ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕುಎಂದರು.

ಮುಖಂಡರಾದ ರವಿ ಪಾಟೀಲ್‌, ಜಿಲ್ಲಾಧ್ಯಕ್ಷಎಂ. ವಿರೂಪಾಕ್ಷಿ, ಸಿದ್ಧು ಬಂಡಿ, ಮಹಾಂತೇಶಪಾಟೀಲ್‌ ಅತ್ತನೂರು ಮಾತನಾಡಿದರು.ಈ ವೇಳೆ ಕಾರ್ಯಾಧ್ಯಕ್ಷ ಎನ್‌. ಶಿವಶಂಕರ್‌,ನಗರಾಧ್ಯಕ್ಷ ಬಿ.ತಿಮ್ಮಾರೆಡ್ಡಿ, ಲಕೀÒ$¾ಪತಿಗಾಣಧಾಳ, ಪಿ. ಯಲ್ಲಪ್ಪ, ಪವನಕುಮಾರ್‌,ಬುಡ್ಡನಗೌಡ, ನಿಜಾಮುದ್ದೀನ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next