Advertisement

ಸಹಕಾರಿ ಸಂಘಗಳಿಂದ ಅಭಿವೃದ್ಧಿ

12:50 PM Jul 01, 2019 | Team Udayavani |

ಮುಧೋಳ: ಸಹಕಾರಿ ಕ್ಷೇತ್ರಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ ಪರಸ್ಪರರಲ್ಲಿ ಸಹಾಯ, ಸಹಕಾರ, ನಂಬಿಕೆ, ಸಂಪರ್ಕ, ಸಂಬಂಧ ಹಾಗೂ ವ್ಯವಹಾರಗಳು ಹೆಚ್ಚುತ್ತವೆ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಧೋಳ ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ಅರಳಿಕಟ್ಟಿ ಫೌಂಡೇಶನ್‌ ಅವಳಿ ಸಂಸ್ಥೆಗಳ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರವನ್ನು ಹುಟ್ಟುಹಾಕಿದ ಕೀರ್ತಿ ಧಾರವಾಡ ಜಿಲ್ಲೆಯ ಕಣಗಿಹಾಳದ ಸಿದ್ದನಗೌಡ ಪಾಟೀಲ ಅವರಿಗೆ ಸಲ್ಲುತ್ತದೆ. ದೇಶದಲ್ಲಿ ಪ್ರಥಮ ಬಾರಿಗೆ ಸಾಲ ಮತ್ತು ಬಡ್ಡಿ ಮನ್ನಾ ಮಾಡಿರುವ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ| ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಪಡೆದ ಸಾಲಕ್ಕೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶೂನ್ಯ ಹಾಗೂ ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರುವ ಮೂಲಕ ರೈತರಿಗೆ ಆರ್ಥಿಕ ಸಹಾಯ ನೀಡಿದೆ ಎಂದರು.

ಬೀಳಗಿ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಅನೇಕ ಸಹಕಾರಿ ಸಂಸ್ಥೆಗಳು ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ನೂರಾರು ಶಾಖೆ ಆರಂಭಿಸಿ ಸಾವಿರಾರು ಕೋಟಿ ಹಣ ಠೇವಣಿ ಸಂಗ್ರಹಿಸಿವೆ. ಇದರಿಂದ ಜನಸಾಮಾನ್ಯರಿಗೆ ಸರಳವಾಗಿ ಸಾಲ ಹಾಗೂ ಆರ್ಥಿಕ ಭದ್ರತೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

Advertisement

ಸಿ.ವಿ. ಲೋಕೇಶಗೌಡ್ರ ಮಾತನಾಡಿದರು. ರನ್ನ ಶುಗರ್ಸ್‌ ಮಾಜಿ ಅಧ್ಯಕ್ಷ ಲಕ್ಷ್ಮಣ ತಳೇವಾಡ ಅಧ್ಯಕ್ಷತೆ ವಹಿಸಿದ್ದರು. ತಿಮ್ಮಣ್ಣ ಅರಳಿಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಬಾಜಂಬಗಿ ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಯುವ ಉದ್ಯಮಿ ಸತೀಶ ಬಂಡಿವಡ್ಡರ, ವೀರಶೈವ ಸಮಾಜದ ಅಧ್ಯಕ್ಷ ರಾಚಪ್ಪಣ್ಣ ಕರೆಹೊನ್ನ, ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಗಿರೀಶಗೌಡ ಪಾಂ.ಪಾಟೀಲ,ಉಪಾಧ್ಯಕ್ಷ ಅನಂತರಾವ್‌ ಘೋರ್ಪಡೆ, ಅರಳಿಕಟ್ಟಿ ಫೌಂಡೇಶನ್‌ ಅಧ್ಯಕ್ಷೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ ಉಪಸ್ಥಿತರಿದ್ದರು. ಕುಳಲಿ ಪಿಕೆಪಿಎಸ್‌ ಕಾರ್ಯದರ್ಶಿ ನಿಂಗರಾಜ ಗುಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next