Advertisement
ತಾಲೂಕಿನ ಮಸರಕಲ್ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಗೊಂಡ ನೋಡಗರಗಮನ ಸೆಳೆಯುತ್ತಿದೆ. ಈ ಹಿಂದೆ ಅವ್ಯವಸ್ಥೆಯಲ್ಲಿರುವ ಶಾಲೆ ಮಳೆ ಬಂದಾಗ ಅಘೋಷಿತ ರಜೆ ನೀಡಲಾಗುತ್ತಿತು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾಕಾಶಿಮಾಡಬೇಕು ಎನ್ನುವ ಸಂಕಲ್ಪ ಹೊಂದಿಗೆ ಶಾಸಕರು ಹೆಚ್ಚಿನ ಆಸಕ್ತಿ ವಹಿಸುವ ಜತೆ ಅವರ ಅನುದಾನದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ 16 ಕೋಣೆಗಳ ನಿರ್ಮಾಣಕ್ಕೆ ಮುಂದಾದರೂ. ಗ್ರಂಥಾಲಯ, ನಲಿ ಕಲಿ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆ ಶೌಚಾಲಯ ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಉತ್ತಮ ಪರಿಸರ ವಾತಾವರಣ ಹೊಂದುವ ಹಿನ್ನೆಲೆ ಆವರಣದಲ್ಲಿ 50 ಸಸಿಗಳು ಹಾಕಲಾಗಿದೆ. ಶಾಲಾ ಮುಂಭಾಗದ ಕೋಣೆಗಳಿಗೆ ಗೋಡೆ ಬರಹ ಬರೆಸಲಾಗಿದೆ.
Related Articles
Advertisement
ಶೈಕ್ಷಣಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ತೊಲಗಿಸಲು ವಿದ್ಯಾಕಾಶಿ ಶಿಕ್ಷಣ ಮಾದರಿಯಲ್ಲೇ ಶಿಕ್ಷಣಕ್ಕೆ ಹೆಚ್ಚಿನ ಗಮನಹರಿಸಿದ್ದಾರೆ.
ಶಿಥಿಲ ಶಾಲೆ ಅಭಿವೃದ್ಧಿಗೆ ಆಗ್ರಹ: ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಮಾದರಿಯಲ್ಲೇಶಿಥಿಲಗೊಂಡಿರುವ ತಾಲೂಕಿನ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಆಸಕ್ತಿ ವಹಿಸುವಜತೆ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ತರಗತಿಯ ಶಾಲೆಗಳ ಅಭಿವೃದ್ಧಿ ಬಲಪಡಿಸಲು ಮುಂದಾಗಬೇಕು ಎನ್ನುವ ಮಾತು ಶಿಕ್ಷಣ ಪ್ರೇಮಿಗಳಿಂದ ಕೇಳಿಬರುತ್ತಿದೆ. ಕ.ಕ ಅಭಿವೃದ್ಧಿ ಮಂಡಳಿ ಯೋಜನೆ ಅನುದಾನದಲ್ಲಿ ಶಿಥಿಲ ಗೊಂಡಿರುವ ಶಾಲೆಗಳ ಅಭಿವೃದ್ಧಿಗೆ ಶಾಸಕರು ಗಮನ ನೀಡಬೇಕು ಎಂದು ಎಸ್‌ಎಫ್‌ಐ ಮುಖಂಡ ಲಿಂಗಣ್ಣ ಆಗ್ರಹಿಸಿದರು.
ಕ್ಷೇತ್ರದಲ್ಲಿ ಮೂರು ಶಾಲೆಗಳು ದತ್ತು ಪಡೆದಿದ್ದೇನೆ. ಗಾಣಧಾಳ, ವಂದಲಿ, ಕೊಪ್ಪರ ಶಾಲೆಗಳು ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ.ಶಿಕ್ಷಣ ಅಭಿವೃದ್ಧಿಗೆಬೇಕಾಗುವ ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ.-ಕೆ.ಶಿವನಗೌಡ ನಾಯಕ, ಶಾಸಕರು, ದೇವದುರ್ಗ.
-ನಾಗರಾಜ ತೇಲ್ಕರ್