ಧಾರವಾಡ: ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಲಿಂಗಾಯತ ಭವನದಲ್ಲಿ ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಸಾಮಾಜಿಕ ಚಿಂತನೆಗಳ ಕುರಿತು ಉಪನ್ಯಾಸ ಹಾಗೂ ವೀರಶೈವ ಲಿಂಗಾಯತ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.
ಮನುಷ್ಯ ತನ್ನ ಸೌಂದರ್ಯವನ್ನು ಸಾಧನೆ ಮೂಲಕ ಜಗತ್ತಿಗೆ ತೋರಿಸಬೇಕು. ಆತ್ಮವಿಶ್ವಾಸವಿದ್ದರೆ ಮತ್ತು ಸಾಧಿಸುವ ಛಲ ಹಾಗೂ ಸದೃಢ ಸಂಕಲ್ಪಗಳು ಮಾತ್ರ ನಮ್ಮ ಸಾಧನೆಗೆ ಸಹಾಯಕವಾಗುತ್ತವೆ. ಮತ್ತೂಬ್ಬರಿಗೆ ಸಾಧ್ಯವಾದರೆ ಸಹಾಯ ಮಾಡಿ. ಇಲ್ಲದಿದ್ದರೆ ಸುಮ್ಮನಿರಿ. ಆದರೆ ತೊಂದರೆ, ಕೇಡು ಮಾಡಲು ಹೋಗಬೇಡಿ ಎಂದು ಕಿವಿಮಾತು ಹೇಳಿದರು.
ಐಎಎಸ್‌ನಲ್ಲಿ 17ನೇ ಸ್ಥಾನ ಪಡೆದಿರುವ ರಾಹುಲ್ ಶರಣಪ್ಪ ಸಂಕನೂರ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಸ್ಥಾನ ಪಡೆದಿರುವ ಪರಿಣಿತಾ ಹಿರೇಮಠ, ಶ್ರಾವಣಿ ಹಿರೇಮಠ, ಮೇಘಾ ಪರಪ್ಪಗೌಡರ ಹಾಗೂ ಪಿಯುಸಿಯಲ್ಲಿ ರಾಜ್ಯಕ್ಕೆ ಸ್ಥಾನ ಪಡೆದಿರುವ ಲಾವಣ್ಯ ಕುಸುಗಲ್, ಆದರ್ಶ ಕೂಬಿಹಾಳ, ಈರಣ್ಣ ಅಕ್ಕೂರ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಾಚಪ್ಪ ತಿರ್ಲಾಪುರ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಕವಿವಿಯಿಂದ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಪದವಿ ಪಡೆದ ಡಾ|ಸಂಗಯ್ಯ ಸರಗಣಾಚಾರಿ ಅವರನ್ನು ಸನ್ಮಾನಿಸಲಾಯಿತು.
ಕವಿವಿ ಬಸವ ಅಧ್ಯಯನ ಪೀಠದ ಸಂಯೋಜಕ ಡಾ| ಸಿ.ಎಂ. ಕುಂದಗೋಳ ಉಪನ್ಯಾಸ ನೀಡಿದರು. ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ತಹಶೀಲ್ದಾರ್ ಪ್ರಕಾಶ ಕುದರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಪಾಲ್ಗೊಂಡಿದ್ದರು. ಶಿವಶರಣ ಕಲಬಶೆಟ್ಟರ ಸ್ವಾಗತಿಸಿದರು. ಬಸನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಪ್ಪ ಕಂಬಾರ ನಿರೂಪಿಸಿದರು. ಶಿವಾನಂದ ಕವಳಿ ವಂದಿಸಿದರು.
Advertisement
ಸಾನ್ನಿಧ್ಯ ವಹಿಸಿದ್ದ ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜ ಒಂದು ಸಾಗರವಿದ್ದಂತೆ. ಇಲ್ಲಿ ಎಲ್ಲ ಸಮುದಾಯದ ಎಲ್ಲ ತರಹದ ಜನ, ಜೀವಿಗಳು ಇದ್ದಾರೆ. ಪರಸ್ಪರ ವಿಶ್ವಾಸ, ವ್ಯಕ್ತಿ ಗೌರವ ಮತ್ತು ಅವರವರ ಆಚಾರ, ವಿಚಾರಗಳ ಬಗ್ಗೆ ಪ್ರೀತಿ, ವಿಶ್ವಾಸ, ಸಹಿಷ್ಣುತೆ ಇರಲಿ. ಸಾಮರಸ್ಯದ ಬದುಕು ನಮ್ಮ ನಾಡಿನ ಇತಿಹಾಸದ ಭಾಗವಾಗಿದೆ. ಬೆಳೆಯುವ ಮಕ್ಕಳಲ್ಲಿ ಪರಸ್ಪರರನ್ನು ಪ್ರೀತಿಸುವ, ಗೌರವಿಸುವ ಮತ್ತು ಸ್ವಾಭಿಮಾನದಿಂದ ಬದುಕುವ ನೀತಿ ಪಾಠ ಕಲಿಸಿ ಎಂದರು.
Related Articles
Advertisement