ರಾಯಬಾಗ: ಪಟ್ಟಣದ ರೈಲ್ವೆ ಸ್ಟೇಷನ್‌ದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಿಕ್ಕೋಡಿ ಮತ್ತು ರಾಯಬಾಗ ನಡುವೆ ನಿರ್ಮಿಸಿದ ಜೋಡಿ ರೈಲು ಮಾರ್ಗ ಹಾಗೂ ರಾಯಬಾಗ ರೈಲು ನಿಲ್ದಾಣದ ನೂತನ ಕಟ್ಟಡವನ್ನು ರವಿವಾರದಂದು ವಿಡಿಯೋ ಲಿಂಕ್ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಲೋಂಡಾ-ಮಿರಜ್ ನಡುವಿನ 186 ಕಿ.ಮೀಉದ್ದದ ಜೋಡಿ ರೈಲು ಮಾರ್ಗವನ್ನು ಮಾರ್ಚ್2023ರಲ್ಲಿ ಪೂರ್ಣಗೊಳಿಸಲಾಗುವುದು. ಜೋಡಿ ಮಾರ್ಗ ನಿರ್ಮಾಣದ ನಂತರ ಈ ಭಾಗ ಹೆಚ್ಚು ಅಭಿವೃದ್ಧಿಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿದ ನಂತರ ಕರ್ನಾಟಕದಲ್ಲಿ 6 ವರ್ಷಗಳಲ್ಲಿ 331 ಕಿ.ಮೀ ಹೊಸ ಮಾರ್ಗವನ್ನುನಿರ್ಮಿಸಲಾಗಿದೆ. ಭಾರತೀಯ ರೈಲ್ವೆಯುಬರುವ ಎರಡೂವರೆ ವರ್ಷದಲ್ಲಿ ಕರ್ನಾಟಕದ ಎಲ್ಲ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡಲು ಯೋಜನೆ ರೂಪಿಸಿದೆ ಎಂದರು.
ಇದೇಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶಅಂಗಡಿ ಅವರನ್ನು ನೆನಪಿಸಿಕೊಂಡು, ಅವರು ಕರ್ನಾಟಕದಲ್ಲಿ ಜಾರಿಗೆ ತಂದ ರೈಲ್ವೆ ಯೋಜನೆಗಳ ಬಗ್ಗೆ ಮೆಲುಕು ಹಾಕಿದರು. ಕೇಂದ್ರ ರೈಲ್ವೆ ಸಚಿವರು ವಿಡಿಯೋ ಮೂಲಕ ಮಾತನಾಡುವ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯಲುಪ್ರಾರಂಭಗೊಂಡಿದ್ದರಿಂದ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸುಮಾರು 750 ಕಿ,ಮೀ ಉದ್ದದಬೆಂಗಳೂರು-ಮಿರಜ್ ಜೋಡಿ ಮಾರ್ಗವನ್ನುತ್ವರಿತಗತಿಯಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದಕೇಂದ್ರ ರೈಲ್ವೆ ಸಚಿವರಿಗೆ ಅಭಿನಂದಿಸುವುದಾಗಿತಿಳಿಸಿದರು. ರಾಯಬಾಗ, ಅಥಣಿ, ಗೋಕಾಕ ಮತ್ತು ಬೆಳಗಾವಿ ರೈತರು ಬೆಳೆಯುವ ಬೆಳೆಗಳನ್ನುಗೋವಾ ರಾಜ್ಯಕ್ಕೆ ರವಾನಿಸಲು ಈ ಜೋಡಿ ರೈಲ್ವೆ ಮಾರ್ಗ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇಬೆಳಗಾವಿ, ಬಾಗಲಕೋಟೆ, ವಿಜಯಪುರ ಸಕ್ಕರೆಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆಯನ್ನುವಿದೇಶಗಳಿಗೆ ಸಾಗಿಸಲು ಹಾಗೂ ವಿವಿಧರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಕಡಿಮೆ ಸಮಯದಲ್ಲಿ ಹೆಚ್ಚು ಸ್ಥಳಗಳನ್ನುತಲುಪಲು ಇದರಿಂದ ಅನುಕೂಲವಾಗಲಿದೆ ಎಂದರು.
ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ರಾಯಬಾಗ ರೈಲ್ವೆ ಸ್ಟೇಷನದಲ್ಲಿನಿಲುಗಡೆ ಮಾಡಲು ವಿನಂತಿಸಿಕೊಂಡಿರುವ ಶಾಸಕರ ಮನವಿಗೆ ಪೂರಕವಾಗಿ ಕೇಂದ್ರ ಸಚಿವರು ಸ್ಪಂದಿಸಿದ್ದಾರೆಂದರು.
ಶಾಸಕ ಡಿ.ಎಮ್.ಐಹೊಳೆ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ರೈಲ್ವೆ ಅಧಿಕಾರಿಗಳಾದಜೋಗೆಂದ್ರ ಯದವೆಂದು, ವಿಷ್ಣು ಭೂಷಣ, ಜೈದೀಪ ಪವಾರ, ಅರವಿಂದ ಎಚ್.ಜಿ. ವೇದಿಕೆಹಂಚಿಕೊಂಡಿದ್ದರು. ವಸಂತ ಹೊಸಮನಿ, ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಸುರೇಶ ಕುಂಬಾರ, ಅಣ್ಣಾಸಾಹೇಬಹೊನಕುಪ್ಪೆ ಇತರರಿದ್ದರು. ದಾದರ-ಪುದಚರಿ,ದಾದರ-ತಿರುನೆಲ್ವೆಲಿ ಹಾಗೂ ದಾದರ-ಮೈಸೂರರೈಲ್ವೆಗಳನ್ನು ರಾಯಬಾಗ ಸ್ಟೇಷನ್‌ದಲ್ಲಿ ನಿಲುಗಡೆಗೆ ಜನರು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.