ಮುಳಬಾಗಿಲು: ಸರ್ಕಾರ ತಾಲೂಕಿನ ಜಲಮೂಲಗಳ ಸಂರಕ್ಷಣೆ ಮಾಡಿದಾಗಲೇ ಜನಸಾಮಾನ್ಯರ ಅಭಿವೃದ್ಧಿ ಸಾಧ್ಯ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದರು.
ತಾಲೂಕಿನ ಮುದಿಗೆರೆ ಮ.ಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿಕ್ಕಗೊಲ್ಲಹಳ್ಳಿಯ ಸಿಂಗಮಾನ್ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಹಲವು ಗ್ರಾಮಗಳ ಕೆರೆಗಳಲ್ಲಿ ಹೂಳು ಎತ್ತುವ ಕಾಮಗಾರಿಗಳನ್ನು ನಡೆಸಲು ಯುವಜನರು, ಮಹಿಳೆಯರು ಹಾಗೂ ಕೂಲಿಕಾರರನ್ನು ಸಂಘಟಿಸಲಾಗುತ್ತಿದೆ. ಇದರಿಂದ ಗ್ರಾಮಗಳ ಜಲಮೂಲಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಸಮರ್ಪಕ ಜಾರಿ ಅಗತ್ಯ: ಅಲ್ಲದೇ, ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಗಾರರಿಗೆ ದಿನಕ್ಕೆ 259 ರೂ. ಹಣ ಸಿಗಲಿದೆ. ಇದರಿಂದ ಗ್ರಾಮಗಳಲ್ಲಿ ಜನರು ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದ ರಿಂದ ಗ್ರಾಪಂ ಅಧಿಕಾರಿಗಳು ಈ ಯೋಜನೆ ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ಕೂಲಿ ಮಾಡಿದ ಕೂಲಿಕಾರರಿಗೆ ನಿಗದಿತ ಸಮಯದೊಳಗೆ ಹಣ ಪಾವತಿ ಮಾಡಬೇಕು ಎಂದು ವಿವರಿಸಿದರು.
ಸಂಕಷ್ಟ: ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ತೀವ್ರ ಬರಗಾಲ ಪೀಡಿತವಾಗಿದ್ದು, ಕುಡಿಯಲು ಮತ್ತು ಕೃಷಿಗೆ ನೀರಿನ ಅಭಾವ ಉಂಟಾಗಿದೆ, ಇದರಿಂದಾಗಿ ಜಿಲ್ಲೆಯಲ್ಲಿ ರೈತರು, ಗ್ರಾಮೀಣ ಕೂಲಿಕಾರರು, ನಿರುದ್ಯೋಗಿ ಯುವಕರು ಉದ್ಯೋಗವಿಲ್ಲದೆ ತೀವ್ರ ಆರ್ಥಿಕ ಸಂಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದರು. ಸ್ಥಳೀಯ ಜಲ ಮೂಲಗಳಾದ ಕೆರೆ ಕಾಲುವೆಗಳ ಉಳಿಸಲು ಸಾಧ್ಯ, ಕೆರೆಗಳಲ್ಲಿ ಈ ರೀತಿ ಹೂಳೆತ್ತುವುದರಿಂದ ನೀರಿನ ಸಂಗ್ರಹ ಪ್ರಮಾಣ ಜಾಸ್ತಿಯಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಅಲ್ಲದೇ, ವಿಷಕಾರಿಯಾದ ಫ್ಲೋರೈಡ್‌ಗಳಿಂದ ಕೂಡಿದ ರಾಸಾಯನಿಕ ನೀರನ್ನು ಕುಡಿಯುವುದು ತಪ್ಪುತ್ತದೆ ಮತ್ತು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗಾಗಿ ಹೋರಾಡುವುದರ ಜೊತೆಗೆ ಸ್ಥಳೀಯ ಜಲ ಮೂಲಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು. ನರೇಗಾ ಉಪ ನಿರ್ದೇಶಕ ಆನಂದ್, ಪಿಡಿಒ ವಿಜಯಮ್ಮ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಚಿಕ್ಕ ಗೊಲ್ಲಹಳ್ಳಿ ಗ್ರಾಮ ಡಿವೈಎಫ್ಐ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಹೇಮಂತ್, ಉಪಾ ಧ್ಯಕ್ಷ ಗಂಗಾಧರ್, ಉಪೇಂದ್ರ, ಜನವಾದಿ ಮಹಿಳಾ ಸಂಘದ ಪದ್ಮಾ, ಗಿರಿಜಾ ಇದ್ದರು.