Advertisement

ಶಿಕ್ಷಣದ ಜತೆ ಬದುಕುವ ಕೌಶಲ್ಯ ಬೆಳೆಸಿಕೊಳ್ಳಿ; ಡಾ|ಫಕೀರಪ್ಪ

06:24 PM Mar 30, 2022 | Team Udayavani |

ಕುಕನೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಬದುಕುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಡಾ| ಫಕೀರಪ್ಪ ವಜ್ರಬಂಡಿ ಹೇಳಿದರು. ಪಟ್ಟಣದ ಗುದೆಪ್ಪನ ಮಠದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಸ್ವಾಗತ-ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Advertisement

ನಾಗಲೋಟದಲ್ಲಿ ಮುನ್ನುಗ್ಗುತ್ತಿರುವ ಇಂದಿನ ಜಗತ್ತಿನಲ್ಲಿ ಬರೀ ಜ್ಞಾನಕ್ಕಾಗಿ ಶಿಕ್ಷಣ ಪಡೆದರೆ ಸಾಲದು, ಗ್ರಾಮೀಣ ಭಾಗದ ಆರ್ಥಿಕತೆ ಸುಧಾರಣೆ ನಿಟ್ಟಿನಲ್ಲಿ ಬದುಕುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಪರಿಶ್ರಮದ ಅಧ್ಯಯನ ವಿದ್ಯಾರ್ಥಿ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು. ಪ್ರಾಚಾರ್ಯ ಎಸ್‌.ಸಿ. ಪಾಟೀಲ್‌ ಮಾತನಾಡಿ, 2021ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಬಿಡಿಎಸ್‌ ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿನಿ ಪವಿತ್ರಾ ಕಟ್ಟಿಮನಿ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು.

ಯಂಕಣ್ಣ ಯರಾಶಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ಉತ್ತಮ ಸಾಧನೆಯಯಲ್ಲಿ ಸಾಗುತ್ತಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯು ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದಕ್ಕೆ ಕಾರಣಿಕರ್ತರಾದ ಉಪನ್ಯಾಸಕ ಪಾತ್ರ ಹಿರಿದು ಎಂದರು.

ಇದೇ ಸಂದರ್ಭದಲ್ಲಿ 2021-22ನೇ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಉಪನ್ಯಾಸಕರಾದ ಎಸ್‌.ಎಸ್‌. ರಾಜೂರು, ಪ್ರಕಾಶ ಗಡ್ಡದ, ಶರಣಪ್ಪ ಉಮಚಗಿ, ನೇತ್ರಾವತಿ ಉಳ್ಳಾಗಡ್ಡಿ, ಬೀರಪ್ಪ ಬಿಸರಳ್ಳಿ, ಪುರುಷೋತ್ತಮ ಪೂಜಾರ, ಶರಣಪ್ಪ ರಡ್ಡೆರ, ಶೈಲಶ್ರೀ ಹಿರೇಮಠ ಹಾಗೂ ಇತರರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next