Advertisement

ವಿಜ್ಞಾನ-ತಂತ್ರಜ್ಞಾನ ಆಸಕ್ತಿ ಬೆಳೆಸಿಕೊಳ್ಳಿ: ನಳಿನಿ

06:07 PM Sep 16, 2021 | Team Udayavani |

ಕಲಬುರಗಿ: ಇದು ತಂತ್ರಜ್ಞಾನದ ಯುಗ ವಾಗಿದ್ದರಿಂದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಹೆಚ್ಚುವರಿ ಆಯುಕ್ತ ನಳಿನಿ ಅತುಲ್‌ ತಿಳಿಸಿದರು.

Advertisement

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಸರ್‌| ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ನಿಮಿತ್ತ ಇಂಜಿನಿಯರ್‌ ಗಳ ದಿನ ಮತ್ತು ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದಲ್ಲಿ “ಕಿರಣ ಯು-809′ ಯುದ್ಧ ತರಬೇತಿ ವಿಮಾನವನ್ನು ಜನರ ವೀಕ್ಷಣೆಗೆ ಅರ್ಪಿಸಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಹೊಸತನದ ಕಲಿಕೆ ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರು ದೇಶಾಭಿಮಾನದೊಂದಿಗೆ ಅವಿರತ ಶ್ರಮ ವಹಿಸಿದರೆ, ದೇಶ ಅಮೂಲಾಗ್ರ ಬದಲಾವಣೆ ಕಾಣಲಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತ
ಲೋಖಂಡೆ ಸ್ನೇಹಲ್‌ ಸುಧಾಕರ್‌ ಮಾತನಾಡಿ, ವಿಶ್ವೇಶ್ವರಯ್ಯ ತತ್ವಾದರ್ಶಗಳನ್ನು ಪಾಲಿಸಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಲಿ ಎಂದು ಹೇಳಿದರು.

ವಾಯು ಸೇನೆ ನಿವೃತ್ತ ಅಧಿಕಾರಿ ಹನುಮಂತರಾಯ ಗೋಗಾಂವ ಮಾತನಾಡಿ, ಏರ್‌ಪೋರ್ಸ್‌ನಲ್ಲಿ ಇರುವಾಗ ಈಗ ಹೊರಗಡೆ ತಂದಿರಿಸಿದ ಯುದ್ಧ ವಿಮಾನದಲ್ಲಿ ಮತ್ತು ಸೇನೆ ಸಂಪರ್ಕ ವ್ಯವಸ್ಥೆ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಅನುಭವ ಹಂಚಿಕೊಂಡರು. ಇದೇ ವೇಳೆ ಬೆಂಗಳೂರಿನ ಸರ್‌| ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ನಿರ್ದೇಶಕಿ ಸಾಧನಾ ಅತ್ತಾವರ್‌ ಆನ್‌ಲೈನ್‌ ಮೂಲಕ ಉಪನ್ಯಾಸ ನೀಡಿದರು.

ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರರಾವ್‌, ಎನ್‌ಸಿಸಿ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ಎಸ್‌.ಕೆ.ತಿವಾರಿ, ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್‌. ಲಕ್ಷ್ಮೀನಾರಾಯಣ, ಶಿಕ್ಷಣ ಸಹಾಯಕ ಎನ್‌.ಪೊನ್ನರಸನ್‌ ಹಾಗೂ ಮತ್ತಿತರರು ಇದ್ದರು.

Advertisement

ವಿಜ್ಞಾನ ಕೇಂದ್ರದ ಆಕರ್ಷಣೆ “ವಿಮಾನ’
ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದಲ್ಲಿ ಇದೀಗ “ಕಿರಣ ಯು-809′ ಯುದ್ಧ ತರಬೇತಿ ವಿಮಾನಯು ಆಕರ್ಷಣೆ ಕೇಂದ್ರ ಬಿಂದು ಆಗಿದೆ. ಸಿಕಿಂದರಾಬಾದ್‌ನಿಂದ ಈ ವಿಮಾನವನ್ನು ತಂದು ಇಲ್ಲಿ ಸ್ಥಾಪನೆ ಮಾಡಲಾಗಿದೆ. ಇದು ಎರಡು ಸೀಟು ಹೊಂದಿರುವ ಯುದ್ಧ ತರಬೇತಿ ವಿಮಾನವಾಗಿದೆ. ಇದರ ಒಟ್ಟು ತೂಕ 3600 ಕೆ.ಜಿ., ಇಂಧನ ಸಾಮರ್ಥ್ಯ 250 ಇಂಪಿರಿಯಲ್‌ ಗ್ಯಾಲನ್‌ ಆಗಿದೆ. ಯುದ್ಧ ವಿಮಾನಗಳ ಬಗ್ಗೆ ಜ್ಞಾನ ಬಳಸಿಕೊಳ್ಳಲು ಸಾರ್ವಜನಿಕರಿಗೆ
ಅನುಕೂಲವಾಗಲಿದೆ ಎಂದು ವಿಜ್ಞಾನ ಕೇಂದ್ರದ ಅಧಿಕಾರಿ ಲಕ್ಷ್ಮೀನಾರಾಯಣ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next