Advertisement
ಗಡಿ ಭಾಗದಲ್ಲಿ ಸಾಹಿತ್ಯ ಪರಸ್ಪರ ವಿನಿಮಯಗೊಳ್ಳುವುದರ ಮೂಲಕ ಭಾವನೆಗಳನ್ನು ಬೆಸೆಯುವ ಕಾರ್ಯವಾಗಬೇಕು. ಅನ್ಯ ಭಾಷೆ ವ್ಯಾಮೋಹದಲ್ಲಿ ಮಾತೃಭಾಷೆ ಕೊಚ್ಚಿ ಹೋಗದಂತೆ ಮಕ್ಕಳಲ್ಲಿ ಸ್ವಾಭಿಮಾನ ಬೆಳೆಸಬೇಕು. ತಾಲೂಕಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಕುರಿತು ಕಳವಳ ವ್ಯಕ್ತಪಡಿಸಿದರಲ್ಲದೆ ಇದಕ್ಕೆ ಕ್ರಿಯಾಯೋಜನೆ ಜಾರಿಗೊಳ್ಳ ಬೇಕು ಎಂದು ಆಗ್ರಹಿಸಿದರು. ತಾಲೂಕು ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಿರಿ ಹೊಂದಿರುವವಿಶಿಷ್ಟ ಭೂ ಪ್ರದೇಶವಾಗಿದ್ದು ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರವನ್ನು ಉದ್ಯೋಗವಾಗಿ ಪರಿಗಣಿಸ ಬೇಕು.
Related Articles
Advertisement
ವೇದಿಕೆ ಮೇಲೆ ಬಿಜೆಪಿ ಧುರೀಣ ವಿಠಲ ಹಲಗೇಕರ, ಧನಶ್ರೀ ಸರದೇಸಾಯಿ, ಆರ್.ಡಿ.ಹಂಜಿ, ಮೇಘಾ ಕುಂದರಗಿ, ಪ್ರಾಚಾರ್ಯ ದಿಲೀಪ ಜವಳಕರ, ದಶರಥ ಬನೋಶಿ, ರೇವಣಸಿದ್ದಯ್ನಾ ಹಿರೇಮಠ, ರವಿಂದ್ರ ಕಾಡಗಿ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಬಸವಪ್ರಭು ಹಿರೇಮಠ ಸ್ವಾಗತಿಸಿದರು.
ವಿವೇಕ ಕುರಗುಂದ ಮತ್ತು ಅಪ್ಪಯ್ನಾ ಕೊಡೋಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಭುದೇವ ಹಿರೇಮಠ ವಂದಿಸಿದರು. ಸಮ್ಮೇಳನ ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಧ್ವಜಾರೋಹಣ, ಬಸವೇಶ್ವರ ವೃತ್ತದಿಂದ ವೇದಿಕೆವರೆಗೆ ಸಮ್ಮೇಳನ ಸರ್ವಾಧ್ಯಕ್ಷ ಈಶ್ವರ ಸಂಪಗಾವಿ ದಂಪತಿಗಳ ಮೆರವಣಿಗೆ ನಡೆಯಿತು.