Advertisement

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ನ್ಯಾ|ಪ್ರೇಮಾ

11:08 AM Feb 23, 2019 | Team Udayavani |

ಹೊಳಲ್ಕೆರೆ: ರಾಷ್ಟ್ರೀಯ ಮನೋಭಾವ ಬಿತ್ತರಿಸಲು ಹಾಗೂ ನವ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿ ಹಂತದಲ್ಲೇ ದೇಶಭಕ್ತಿ, ಸಹಬಾಳ್ವೆ, ನಿಸ್ವಾರ್ಥ ಭಾವನೆ ಬೆಳೆಸಿಕೊಳ್ಳಲು ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಭಾಗವಹಿಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಪ್ರೇಮಾ ವಸಂತ ರಾವ್‌ ಪವಾರ್‌ ಹೇಳಿದರು.

Advertisement

ತಾಲೂಕು ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥಾಪಕ ಲಾರ್ಡ್‌ ಬೇಡನ್‌ ಪಾವೆಲ್‌ ಜನ್ಮದಿನಾಚರಣೆ, ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ 1907ರಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಪ್ರಾರಂಭಿಸುವ ಮೂಲಕ ಮೂರು ಸತ್ಯ ಸಂದೇಶಗಳನ್ನು ಬಿತ್ತರಿಸಿದ್ದಾರೆ. ದೇವರ ಸೇವೆ, ದೇಶಸೇವೆ, ಸಮಾಜಸೇವೆಗೆ ಆದ್ಯತೆ ನೀಡಬೇಕೆನ್ನುವ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಸೇವಾಭಾವ ಬೆಳೆಸುವುದರ ಜತೆಗೆ ಸಾಮಾಜಿಕ ಕಳಕಳಿ, ನಿಸ್ವಾರ್ಥ ಸೇವೆ, ದೇಶಕ್ಕಾಗಿ ನಾನು ಎನ್ನುವ ದೇಶಭಕ್ತಿಯನ್ನು ಸಂದೇಶವನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಪುಸ್ತಕದ ಹುಳುಗಳಾಗದೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಆವಳಡಿಸಿಕೊಂಡು ಶಿಸ್ತುಬದ್ಧ ಹಾಗೂ ಕಾನೂನುಬದ್ಧ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಪುಲ್ವಾಮಾ ಘಟನೆ ಅಮಾನವೀಯವಾಗಿದೆ. ಅಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸುವ ಮೂಲಕ ದೇಶಭಕ್ತಿ ಮೆರೆಯಬೇಕು. ವಿದ್ಯಾರ್ಥಿಗಳ ಕ್ರಿಯಾಶೀಲತೆ ಸದಾ ಕಾಲ ನಿರಂತರವಾಗಿರಬೇಕು ಎಂದರು.
 
ಅಧ್ಯಕ್ಷತೆ ವಹಿಸಿದ್ದ ಎಸ್‌.ಆರ್‌. ನಾಗರಾಜ್‌ ಮಾತನಾಡಿ, ತಾಲೂಕಿನಲ್ಲಿರುವ ಎರಡು ಸಾವಿರ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಪಿಡುಗುಗಳ ವಿರುದ್ಧ ಜನ ಜಾಗೃತಿ, ಪ್ಲಾಸ್ಟಿಕ್‌ ನಿಷೇಧ ಜಾಗೃತಿ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ಸ್ವತ್ಛತೆ, ಆಹಾರದ ಮಹತ್ವದ ಜಾಗೃತಿ ಮೂಡಿಸಿದ್ದಾರೆ. ನಿರಂತರ ಚಟುವಟಿಕೆ ನಡೆಸುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ. ನಾಗರಾಜ್‌, ನಿವೃತ್ತ ಯೋಧ ನಾಗ ನಾಯ್ಕ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಕೃಷ್ಣಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಉಪಾಧ್ಯಕ್ಷ ಎಸ್‌. ವೇದಮೂರ್ತಿ, ಕಾರ್ಯದರ್ಶಿ ಮೋಹನ್‌ಕುಮಾರ್‌,
ವಕೀಲರ ಸಂಘದ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌, ರೆಡ್‌ಕ್ರಾಸ್‌ ಕಾರ್ಯದರ್ಶಿ ಅನಿತಾ ತಿಪ್ಪೇಸ್ವಾಮಿ, ಜಿಲ್ಲಾ ಪ್ರತಿನಿಧಿ ಗಳಾದ ವಿಜಯ್‌, ರೇಖಾ, ಸೋಮಶೇಖರ್‌ ಮೊದಲಾದವರು ಭಾಗವಹಿಸಿದ್ದರು. ಸರ್ಕಾರಿ ಆಸ್ಪತ್ರೆ ರೋಗಗಳಿಗೆ ಹಾಲು, ಬ್ರೆಡ್‌ ವಿತರಿಸಲಾಯಿತು.

Advertisement

ಸತ್ಯ ಸಂದೇಶಗಳನ್ನು ನೀಡಿರುವ ಬೇಡನ್‌ ಪಾವೆಲ್‌ ಚಿಂತನೆಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಬದ್ಧವಾಗಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು. ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ನಲ್ಲಿರುವ ಮೌಲ್ಯಗಳನ್ನು ಅಳವಡಿಕೊಳ್ಳುವುದರ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.
 ವಿ. ರವಿಕುಮಾರ್‌, ಸಿವಿಲ್‌ ಕಿರಿಯ ವಿಭಾಗದ ನ್ಯಾಯಾಧೀಶರು. 

Advertisement

Udayavani is now on Telegram. Click here to join our channel and stay updated with the latest news.

Next