Advertisement

ಅಭಿವೃದ್ಧಿ ಸಾಧಿಸಿ ನಿವೃತ್ತಿ: ಸಿದ್ದೇಶ್ವರ್‌

07:31 AM Mar 15, 2019 | Team Udayavani |

ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸು ತಮಗಿದ್ದು, ಈ ಬಾರಿಯದ್ದು ನನ್ನ ಕೊನೆಯ ಚುನಾವಣೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ನನ್ನ ಕನಸನ್ನು ನನಸು ಮಾಡಿ ನಿವೃತ್ತಿಯಾಗುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

Advertisement

ಹಿರೇಕಲ್ಮಠದಲ್ಲಿ ಗುರುವಾರ ಬಿಜೆಪಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ತಂದೆ 2ಬಾರಿ ಹಾಗೂ ನಾನು ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಸಿದ್ದೇವೆ. ನನ್ನ ಮೂರು ಬಾರಿಯ ಗೆಲುವು ಕಡಿಮೆ ಮತಗಳಿಂದಾಗಿದ್ದು ಈ ಬಾರಿ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ದೇಶದ ಹಿತ ಕಾಪಾಡುವ ಹಾಗೂ ದಿನಕ್ಕೆ 18 ಗಂಟೆ ದುಡಿಯುವ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಭಾರತಕ್ಕೆ ಅವಶ್ಯಕವಾಗಿದೆ. 55 ವರ್ಷಗಳ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಮಾಡದಂತಹ ಸಾಧನೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇವಲ 55 ತಿಂಗಳಲ್ಲಿ ಮಾಡಿ ದೇಶದ ಪ್ರಜೆಗಳಲ್ಲದೆ ವಿದೇಶಿಗರು ಕೂಡ ಮೆಚ್ಚಿಕೊಳ್ಳುವಂತಾಗಿದೆ.
ಇದೊಂದು ಹೆಮ್ಮೆಯ ವಿಷಯ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರ ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ಚಿಂತನೆ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ಎಂದ ಅವರು, ಸೈನಿಕರಿಗೆ ಗುಂಡು ನಿರೋಧಕ ಜಾಕೆಟ್‌ ಪ್ರಥಮ ಬಾರಿಗೆ ನರೇಂದ್ರ ಮೋದಿಯವರು ವಿತರಿಸುವ ಕಾರ್ಯ
ಮಾಡಿದರು ಎಂದು ಹೇಳಿದರು.

Advertisement

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ಕೊಟ್ಟು ಕೇಂದ್ರ ಸರ್ಕಾರದ ಸಾಧನೆ ಹಾಗೂ ಜಿ.ಎಂ. ಸಿದ್ದೇಶ್ವರ ಅವರ ಕೊಡುಗೆಗಳನ್ನು ಮನೆ ಮನೆಗೆ
ತಲುಪಿಸಲಾಗಿದೆ ಎಂದು ಹೇಳಿದರು.

ಇತರ ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಬಂದಾಗ ಮಾತ್ರ ಮತದಾರರ ಮನೆ ಬಾಗಿಲಿಗೆ ಬರುತ್ತಾರೆ ಸಂಸದ ಜಿ.ಎಂ.ಸಿದ್ದೇಶ್ವರರು ಗೆಲುವು ಸಾಧಿಸಿದ ದಿನದಿಂದ ಹಳ್ಳಿಗಳಿಗೆ ತೆರಳಿ ಮತದಾರರ ಕೆಲಸ ಮಾಡಿ ಕೊಟ್ಟಿದ್ದಾರೆ. ಮತ್ತೂಮ್ಮೆ ಸಿದ್ದೇಶ್ವರ
ಅವರನ್ನು ಲೋಕಸಭೆಗೆ ಕಳಿಸಿ ನರೇಂದ್ರ ಮೋದಿಯವರು ಪ್ರಧಾನಿಯಾಗಲು ಮತದಾರ ಮುಂದಾಗಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿ
ಎಸ್‌.ಎಸ್‌.ಮಲ್ಲಿಕಾರ್ಜುನ 5ಲಕ್ಷಕ್ಕೂ ಹೆಚ್ಚು ಮತಗಳಿಸಿದ್ದರು. ಸೋತ ನಂತರ ಒಬ್ಬ ಮತದಾರನ ಮನೆಗೆ ತೆರಳಿ ಧನ್ಯವಾದ ಹೇಳಲಿಲ್ಲ. ನಾನು ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಇದು ಬಿಜೆಪಿ ಮತ್ತು
ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ ಎಂದು ನುಡಿದರು.

ಬಿಜೆಪಿಯವರು ಸೋತಾಗ ಅಳದೆ, ಗೆದ್ದಾಗ ನಗದೇ ಸದಾ ದುಡಿಯುವ ವ್ಯಕ್ತಿಗಳಾಗಿರುತ್ತಾರೆ. ಇದನ್ನು ಗಮನಿಸಿ ಮತದಾರ ಲೋಕಸಭಾ ಚುನಾವಣೆಯಲ್ಲಿ ಸಿದ್ದೇಶ್ವರ ಅವರನ್ನು ಹೆಚ್ಚಿನ ಮತಗಳಿಂದ ಆರಿಸಿ ಕಳಿಸಬೇಕು ಎಂದು ಮನವಿ ಮಾಡಿದರು. 
ಜಿ.ಪಂ ಸದಸ್ಯ ಎಂ.ಆರ್‌,ಮಹೇಶ್‌, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್‌, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್‌ ಪಾಟೀಲ್‌, ಪೇಜ್‌ ಪ್ರಮುಖ್‌ ಉಮೇಶ್‌ ಮಾತನಾಡಿದರು. ಜಿ.ಪಂ ಸದಸ್ಯರಾದ ವೀರಶೇಖರಪ್ಪ, ಉಮಾ
ಎಂ.ಪಿ. ರಮೇಶ್‌, ಸುರೇಂದ್ರ ನಾಯ್ಕ, ತಾ.ಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌, ಸದಸ್ಯ ಹನುಮಂತಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಹನುಮಂತಪ್ಪ, ಹೊನ್ನಾಳಿ ಕಸಬಾ ಸೊಸೆ„ಟಿ ಅಧ್ಯಕ್ಷ ಎಚ್‌.ಬಿ.ಮೋಹನ್‌, ಮುಖಂಡರಾದ ಚಂದಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್‌ ಇತರರು ಉಪಸ್ಥಿತರಿದ್ದರು. ನೆಲಹೊನ್ನೆ ಮಂಜುನಾಥ್‌ ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next