ಕಲಬುರಗಿ: ಕೃಷಿ ಜತೆಗೆ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಸಮಗ್ರ ಯೋಜನೆ ರೂಪಿಸಲು ಮುಂದಾಗುವಂತೆ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಅಧ್ಯಕ್ಷ ಮತ್ತು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ನಿರ್ದೇಶನ ನೀಡಿದರು. ಡಿಸಿಸಿ ಬ್ಯಾಂಕ್‌ನ ಅಧಿ ಕಾರಿಗಳೊಂದಿಗೆ ಕೃಷಿ, ತೋಟಗಾರಿಕೆ, ಕಲಬುರಗಿ, ಬೀದರ, ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟ, ಸಹಕಾರಿ, ಪಶು ಸಂಗೋಪನಾ ಇಲಾಖಾ ಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಪಡಿಸಿ ಹಾಲಿನ ಉತ್ಪಾದನೆ ದ್ವಿಗುಣಗೊಳಿಸಬೇಕಿದೆ. ಬಹುಮುಖ್ಯವಾಗಿ ಆರ್ಥಿಕ ಸ್ವಾವಲಂಬನೆ ಸಾಧಿ ಸಬೇಕಿದೆ. ಹೈನುಗಾರಿಕೆ ಹೆಚ್ಚಿಸಲು ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡಿಸಲಾಗುವುದು. ಸಾಲ ನೀಡಿದರಷ್ಟೇ ಸಾಲದು. ಹೈನುಗಾರಿಕೆ ಹೆಚ್ಚಳದ ಪೂರಕವಾಗಿ ಹಾಲು ಉತ್ಪಾದಕರ ಒಕ್ಕೂಟ, ಹಾಲು ಉತ್ಪಾದಕರ ಸಂಘ ರಚನೆ ಜತೆಗೆ ಹೈನುಗಾರಿಕೆ ಅಳವಡಿಸಲು ಪೂರಕ ಸಹಾಯ ಕಲ್ಪಿಸುವುದು ಬಹುಮುಖ್ಯವಾಗಿದೆ. ಡಿಸಿಸಿ ಬ್ಯಾಂಕ್ ಜತೆ ಕೈ ಜೋಡಿಸಿದಲ್ಲಿ ಬೇರೆ ಕಡೆಯಿಂದ ಹಾಲು ತರಿಸಿಕೊಳ್ಳದೇ ಸ್ವತಂತ್ರತೆ ಕಂಡುಕೊಳ್ಳಬಹುದಾಗಿದೆಯಲ್ಲದೇ ಹಾಲಿನ ಉತ್ಪಾದನೆಯಲ್ಲಿ ಕ್ರಾಂತಿ ಮಾಡಬಹುದಾಗಿದೆ ಎಂದರು. ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಕಾರ್ಯಕ್ರಮ ರೂಪಿಸಬೇಕು. ಸಹಕಾರಿ ಇಲಾಖೆ ಸಂಘಗಳ ರಚನೆಗೆ ಹಾಲು ಉತ್ಪಾದಕರ ಒಕ್ಕೂಟದ ಜತೆಗೆ ಕೈ ಜೋಡಿಸಬೇಕು.
ತೋಟಗಾರಿಕೆ ಇಲಾಖೆಯು ತನ್ನ ಬಹಿತೇಕ ಯೋಜನೆಗಳನ್ನು ಹೈನುಗಾರಿಕೆ ಅಭಿವೃದ್ಧಿ ಪೂರಕವಾಗಿದ್ದನ್ನೇ ಅಳವಡಿಸಬೇಕೆಂದರಲ್ಲದೇ ಪಶು ಸಂಗೋಪನಾ ಇಲಾಖೆಯು ಆಕಳು, ಕರು, ಎಮ್ಮೆಗಳಿಗೆ ಸೂಕ್ತ ಕಾಲ-ಕಾಲಕ್ಕೆ ಗರ್ಭಧಾರಣೆಯಂತಹ ಚಿಕಿತ್ಸಾ ಕ್ರಮಗಳನುº ಕಡ್ಡಾಯವಾಗಿ ಕೈಗೊಳ್ಳಬೇಕು. ಹೀಗೆ ಎಲ್ಲ ಇಲಾಖೆಗಳು ಸಮನ್ವಯ ಸಾ ಧಿಸಿ ಕೈ ಜೋಡಿಸಿದಲ್ಲಿ ಬಿಸಿಲು ನಾಡಲ್ಲಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಬಹುದಾಗಿದೆ ಎಂದು ತೇಲ್ಕೂರ ಹೇಳಿದರು. ಆಯಾ ಇಲಾಖಾಧಿ ಕಾರಿಗಳು ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಯಾವ-ಯಾವ ಕಾರ್ಯಗಳನ್ನು ಕೈಗೊಳ್ಳಬಹುದೆಂಬುದನ್ನು ಡಿಸಿಸಿ ಬ್ಯಾಂಕ್‌ಗೆ ಸಲ್ಲಿಸಬೇಕು.
ಈ ಹಿಂದೆ ಹೈನುಗಾರಿಕೆ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್‌ನಿಂದ ಹೈನುಗಾರಿಕೆಗೆ ಸಾಲ ನೀಡಲಾಗಿದೆ. ಅದು ಕಾರ್ಯಕ್ಕೆ ಬಳಕೆಯಾಗಿಲ್ಲ. ಆದರೆ ಈಗ ನೀಡಲಾಗುವ ಸಾಲವು ಹೈನುಗಾರಿಕೆ ತೊಡಗಿಸುವ ವಾತಾವರಣ ಸೃಷ್ಟಿಸಲಾಗುವುದು. ನೀಡಲಾಗುವ ಸಾಲದಲ್ಲಿ ನಯಾಪೈಸೆ ಬೇರೆ ಕಡೆ ವಾಲದಂತೆ ನಿಗಾ ವಹಿಸಲಾಗುವುದು. ಸಾಲ ವಿತರಣೆ ಹಾಗೂ ವಸೂಲಾತಿಯಲ್ಲೂ ಈ ಹಿಂದಿನ ಕ್ರಮ ಅನುಸರಿಸಲಾಗುವುದು.
ಹೊಸತನ ಅಳವಡಿಸಲಾಗುವುದು. ಹೈನುಗಾರಿಕೆ ಜತೆಗೆ ಇತರ ಕೃಷಿ ಕಾಯಕದ ಆಸಕ್ತಿ ಹೆಚ್ಚಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು. ಕಲಬುರಗಿ, ಬೀದರ-ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಮಾತನಾಡಿ, ಉತ್ಪಾದಕರ ಸಂಘಗಳು ರಚನೆಗೆ ಹಾಗೂ ಸರಾಗವಾಗಿ ಹಾಲು ಸಾಗಾಣಿಕೆ ಒಕ್ಕೂಟ ಸದಾ ಬದ್ದವಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ತೇಲ್ಕೂರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಹಾಗೂ ಇಫೂRà ಅಧಿ ಕಾರಿಗಳೊಂದಿಗೆ ರಸಗೊಬ್ಬರ ಕುರಿತಾಗಿ ಮಾಹಿತಿ ಪಡೆದರು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೆಶಕ ಚಿದಾನಂದ ನಿಂಬಾಳ, ಜಂಟಿ ಕೃಷಿ ನಿರ್ದೇಶಕ ರವೀಂದ್ರನಾಥ ಸೂಗುರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಹಿರೇಮಠ, ಪಶು ಸಂಗೋಪನಾ ಇಲಾಖೆಯ ಮಾರುತಿ ನಾಯಕ ಸೇರಿದಂತೆ ಮುಂತಾದವರಿದ್ದರು.