Advertisement

ಬಿಎಸ್‌ವೈಗೆ ದೇವೇಗೌಡ ಪತ್ರ

11:30 PM Aug 13, 2019 | Lakshmi GovindaRaj |

ಬೆಂಗಳೂರು: ಪ್ರವಾಹ ನಿರ್ವಹಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ರಾಜ್ಯ ಮತ್ತು ಜಿಲ್ಲಾಡಳಿತ ಚುರುಕುಗೊಳಿಸಿ ನುರಿತ, ಅನುಭವಿ ಮತ್ತು ಕ್ರಿಯಾಶೀಲ ಅಧಿಕಾರಿಗಳನ್ನು ಪರಿಹಾರ ಕಾರ್ಯಗಳಿಗೆ ನಿಯೋಜಿಸಿ ಎಂದು ಸಲಹೆ ನೀಡಿದ್ದಾರೆ. ದಾನಿಗಳಿಂದ ಹಾಗೂ ಸೇವಾ ಸಂಸ್ಥೆಗಳಿಂದ ಬರುವ ಸಾಮಗ್ರಿಗಳನ್ನು ಮತ್ತು ಇತರೆ ರೀತಿಯ ಸಹಾಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಮಯೋಚಿತವಾಗಿ ವಿತರಿಸಲು ನೇಮಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

ನೊಂದ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ, ಸಾಂತ್ವನ ನೀಡುವಲ್ಲಿ ಮತ್ತು ನೊಂದ ಕುಟುಂಬಗಳು ಮತ್ತೂಮ್ಮೆ ತಮ್ಮ ಜೀವನವನ್ನು ಪುನಃ ರೂಪಿಸುವಲ್ಲಿ ನನ್ನ ಮತ್ತು ನಮ್ಮ ಪಕ್ಷದ ಪೂರ್ಣ ಸಹಕಾರ ಮತ್ತು ಬೆಂಬಲ ಇದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರವೊಂದೇ ಪರಿಹಾರ ಕಾರ್ಯ ನಿಭಾಯಿಸುವುದು ಕಷ್ಟ. ಹೀಗಾಗಿ, ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಐದು ಸಾವಿರ ಕೋಟಿ ರೂ. ತುರ್ತು ಪರಿಹಾರ ಕಾಮ ಗಾರಿಗಳಿಗೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆಂದು ದೇವೇಗೌಡರು ಪತ್ರದಲ್ಲಿ ಹೇಳಿದ್ದಾರೆ.

ನೊಂದ ಸಂತಸ್ತರನ್ನು ಸಕಾಲದಲ್ಲಿ ಕಾಪಾಡುವುದು ಅವರ ನೆರವಿಗೆ ಧಾವಿಸುವುದು ಮತ್ತು ಪರಿಹಾರ ನೀಡುವುದು ಸರ್ಕಾರದ ಪ್ರಥಮ ಕರ್ತವ್ಯ. ಆದರೆ, ದುರಂತ ನಿಭಾಯಿಸುವುದು ಕಷ್ಟ ಸಾಧ್ಯ. ಇದರಲ್ಲಿ ಕೆಲವೊಮ್ಮೆ ಲೋಪ-ದೋಷಗಳು ಮತ್ತು ನೂನ್ಯತೆಗಳು ಬರುತ್ತವೆ. ಆದರೆ, ಇಂತಹ ವಿಷಯದಲ್ಲಿ ರಾಜಕಾರಣ ಬೆರೆಸದೆ ಸಂತ್ರಸ್ತರ ನೆರವಿಗೆ ಧಾವಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next