Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ಬಿಜೆಪಿಗೆ ಕೇಳಿದರೆ ಮೋದಿ ಎಂಬ ಸ್ಪಷ್ಟ ಉತ್ತರ ನಮ್ಮಲ್ಲಿದೆ. ಆದರೆ, ಮಹಾಘಟಬಂಧನ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇಂದಿಗೂ ಯಾವ ಪಕ್ಷದವರೂ ಉತ್ತರಿಸುತ್ತಿಲ್ಲ. ಮಹಾಘಟಬಂಧನ್ ಮೂರಾಬಟ್ಟೆಯಾಗಿದೆ ಎಂದರು.
ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್‌ಗೆ ಸಿಕ್ಕಿರುವ 8 ಸ್ಥಾನಗಳ ಪೈಕಿ ಕೆಲವು ಕಡೆ ಅಭ್ಯರ್ಥಿಗಳು ಸಿಕ್ಕಿಲ್ಲ. ತಮ್ಮಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ನವರನ್ನು ಕರೆದು ತಂದು ಟಿಕೆಟ್ ನೀಡಿದ್ದಾರೆ. ಮಂಡ್ಯ, ಹಾಸನ ಸೇರಿ ಹಲವು ಕ್ಷೇತ್ರಗಳಲ್ಲಿ ಅವರವರ ಪಕ್ಷಗಳಲ್ಲಿ ಮೈತ್ರಿ ಮುರಿದು ಗೊಂದಲ ಸೃಷ್ಟಿಯಾಗಿದೆ ಎಂದರು. ರಾಹುಲ್ ಗಾಂಧಿ ಮೂರ್ಖ: ಉಗ್ರಗಾಮಿಗಳಿಗೆ ಸೌಮ್ಯ ರೀತಿಯಲ್ಲಿ ನಡೆದುಕೊಳ್ಳುವ ಕಾಂಗ್ರೆಸ್,ಉಗ್ರಗಾಮಿಗಳಿಗೆ ಬೈದರೆ, ಪಾಕಿಸ್ತಾನಕ್ಕೆ ಬೈದರೆ ಮತ ಬರುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಮೂರ್ಖರಿದ್ದಾರೆ ಎಂದರು.
Related Articles
Advertisement
ಕಾಂಗ್ರೆಸ್ ಪಕ್ಷ ದೇಶದ್ರೋಹದ ವಿರುದ್ಧ ಇರುವ ಕಾನೂನು ತಿದ್ದುಪಡಿ ಮಾಡುವುದಾಗಿ ತಮ್ಮ ಘೋಷಣಾ ಪತ್ರದಲ್ಲಿ ಸೇರಿಸಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ರಾಹುಲ್ ಅವರು ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ ಸೇರಿದಂತೆ ವರ್ಷಕ್ಕೆ 72,000 ಸಾವಿರ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಡವರ ನೆನಪಾಗುತ್ತದೆ. ಸುಳ್ಳು ಭರವಸೆ ನೀಡಿ ಮತ ಪಡೆಯಬೇಕೆಂಬ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದ್ದು, ಈ ಯೋಜನೆ ಅನುಷ್ಠಾನಗೊಳ್ಳುವುದು ಅಸಾಧ್ಯ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಉಗ್ರವಾದಿಗಳನ್ನು ಗೌರವದಿಂದ ಕರೆಯುವ ಮೂಲಕ ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಫುಲ್ ಫೇಮಸ್ ಆಗಿದ್ದಾರೆ ಎಂದರು.