Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು 4 ಬಾರಿ ಶಾಸಕ ಹಾಗೂ 2 ಬಾರಿ ಮಂತ್ರಿಯಾಗಿದ್ದೇನೆ. 2002ರಲ್ಲಿ ದೇವೇಗೌಡರು ಉಪಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನಾನು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಇರುತ್ತಿದ್ದೆ. ಶ್ರೀಗಳು ಆದಿಚುಂಚನಗಿರಿಯಿಂದ ವಿಜಯನಗರಕ್ಕೆ ಬಂದರೆ ಮಠದಲ್ಲಿ ನಾನು ಇರದಿದ್ದರೆ ಅವರೂ ಇರುತ್ತಿರಲಿಲ್ಲ. ಅರ್ಧ ದಾರಿಯಲ್ಲಿರುವಾಗಲೇ ಫೋನ್ ಮಾಡಿ ನಾನು ಬರುತ್ತಿದ್ದೇನೆ ಜಮೀರ್, ಮಠಕ್ಕೆ ಬಾ ಅಂತ ಫೋನ್ ಮಾಡಿ ಕರೆಯುತ್ತಿದ್ದರು. ಬೆಳಗ್ಗಿನಿಂದ ಸಂಜೆವರೆಗೆ ನಾನು ಮಠದಲ್ಲೇ ಇರುತ್ತಿದ್ದೆ. ನಾನು ಒಕ್ಕಲಿಗರ ಮಠದಲ್ಲಿ ಬೆಳೆದಿರುವವನು. ಶ್ರೀಗಳ ಆದೇಶದ ಮೇಲೆಯೇ ನಾನು ಜನತಾದಳ ಪಕ್ಷಕ್ಕೆ ಹೋಗಿದ್ದು. ನನ್ನದು, ಸ್ವಾಮೀಜಿ ಹಾಗೂ ಒಕ್ಕಲಿಗರ ಸಂಬಂಧ ಏನು ಅಂತ ಆ ಮಠದಲ್ಲಿ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಜಾತಿಗೊಂದು ಸಿಎಂ ಮಾಡಲು ಹೊರಟಿದೆ, ಒಕ್ಕಲಿಗರ ಬಗ್ಗೆ ಹೀಗೆ ಮಾತಾಡೋದು ಸರಿಯಲ್ಲ ಎನ್ನುವ ಸಚಿವ ಆರ್.ಅಶೋಕ್ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ಎಲ್ಲ ಜಾತಿಯವರ ಪರವಾಗಿದೆ. ಒಕ್ಕಲಿಗರ ವಿರುದ್ಧ ನಾನು ಏನು ಮಾತಾಡಿದ್ದೇನೆ? ಸಿ.ಟಿ.ರವಿಗೆ ಹಿಂದೂಗಳ ಮೇಲೂ ಪ್ರೀತಿ ಇಲ್ಲ, ಮುಸಲ್ಮಾನರ ಮೇಲೂ ಇಲ್ಲ. ಅವರಿಗೆ ಕೇವಲ ಅಧಿಕಾರ ಹಾಗೂ ಕುರ್ಚಿ ಮೇಲಷ್ಟೇ ಪ್ರೀತಿ ಎಂದರು.