Advertisement
2008ರ ಜುಲೈ 25ರಂದು ಮಧ್ಯಾಹ್ನ ಕೇವಲ 1 ಗಂಟೆಗೆ ನಗರದ ವಿವಿಧ 9 ಭಾಗಗಳಲ್ಲಿ ಸರಣಿ ಬಾಂಬ್‌ಗಳನ್ನು ಸ್ಫೋಟಿಸಿದ್ದ ಪ್ರಕರಣದ ಆರೋಪಿ ಕೇರಳದ ಸಲೀಂ ಬಳಿಕ ನಗರ ಅಪರಾಧ ದಳ (ಸಿಸಿಬಿ) ಘಟಕದ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Related Articles
Advertisement
ಇದಲ್ಲದೆ ಬಹುತೇಕ ಹತ್ತು ವರ್ಷಗಳೇ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವ ಸಾಧ್ಯತೆಗಳಿವೆ. ಹೀಗಾಗಿ, ಈ ನಿರ್ದಿಷ್ಟ ಕೇಸ್‌ಗೆ ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ಕಲೆಹಾಕುವಸವಾಲು ಸಿಸಿಬಿ ಮೇಲಿದೆ. ಕಾರ್ಖಾನೆಯಲ್ಲಿ ಬಾಂಬ್ ತಯಾರಿ!
ಸರಣಿ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಅಬ್ದುಲ್ ಬಬ್ಟಾರ್ ಅಲಿಯಾಸ್ ಅನೂಪ್, ಫ್ಯಾನ್ ಸರ್ಕ್ನೂಟ್ ತಯಾರು ಮಾಡುವ ಕಾರ್ಖಾನೆ ನಡೆಸುತ್ತಿದ್ದು. ಆತನ ಸಂಬಂಧಿಯಾದ ಸಲೀಂ ಕೂಡ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಅಬ್ದುಲ್ ಜಬ್ಟಾರ್‌ಗೆ ಇಂಡಿನ್ ಮುಜಾಹಿದ್ದೀನ್ ಸಂಘಟನೆಯ ರೂವಾರಿ ರಿಯಾಜ್ ಭಟ್ಕಳ್ ಸಂಪರ್ಕವಿತ್ತು. ಹೀಗಾಗಿ ರಿಯಾಜ್ ಭಟ್ಕಳ್ ಸೂಚನೆ ಮೇರೆಗೆ, ಫ್ಯಾನ್ ಸರ್ಕ್ಯೂಟ್ ಕಾರ್ಖಾನೆಯಲ್ಲಿ ಐಇಡಿ ಬಾಂಬ್ ತಯಾರಿಕೆಯಲ್ಲಿ ಸಲೀಂ ಸಹಕಾರ ನೀಡಿದ್ದ. ಜತೆಗೆ, ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಬಾಂಬ್ ಇಡುವ ತಂಡದಲ್ಲಿದ್ದ. ಜತೆಗೆ, ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳಿಗೂ ಬಾಂಬ್ ಪೂರೈಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಸ್ಫೋಟಕ ಮುನ್ನ ಸರಣಿ ಸಭೆಗಳು! ಎಲ್‌ಇಟಿ ಕಮಾಂಡರ್ ವಲೀ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳನ್ನು ನಡೆಸಿ ಜನರ ಪ್ರಾಣಹಾನಿ ಉಂಟು ಮಾಡುವುದು ಉಗ್ರರ ಗುರಿಯಾಗಿತ್ತು. ಹೀಗಾಗಿ, ಸ್ಫೋಟ ನಡೆಸುವ ಮುನ್ನ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆರೋಪಿಗಳೆಲ್ಲರೂ ಸರಣಿ ಸಭೆಗಳನ್ನು ನಡೆಸಿದ್ದಾರೆ. ಬಳಿಕ, ಕೇರಳದಿಂದ ನ್ಪೋಟಕ ಬಾಂಬ್‌ಗಳನ್ನು ತಂದು ಒಂದೊಂದು ವಿಭಾಗದಲ್ಲಿ ಬಾಂಬ್ ಇಡುವ ಉಸ್ತುವಾರಿಯನ್ನು ವಹಿಸಿಕೊಂಡು ತಂಡ ತಂಡಗಳಾಗಿ ಬಾಂಬ್‌ಗಳನ್ನು ಇಟ್ಟಿದ್ದರು ಎಂದು ಅಧಿಕಾರಿ ತಿಳಿಸಿದರು. ಸ್ಫೋಟದಲ್ಲಿಮಹಿಳೆ ಸಾವು!
ಮಡಿವಾಳ ಬಸ್ ನಿಲ್ದಾಣದಲ್ಲಿ ಜುಲೈ 25ರಂದು ಮಧ್ಯಾಹ್ನ 1:20ರ ಸುಮಾರಿಗೆ ಐಇಡಿ ಸ್ಫೋಟದ ಪರಿಣಾಮ ಸ್ಥಳದಲ್ಲಿದ್ದ ಸುಧಾ ಎಂಬುವವರು ಮೃತಪಟ್ಟಿದ್ದರು. ಆಕೆಯ ಪತಿ ರವಿ ಗಂಭೀರವಾಗಿ ಗಾಯ ಗೊಂಡಿದ್ದರು. ಜತೆಗೆ ಚೇತನ್ ಹಾಗೂ ಗುಳ್ಳಮ್ಮ ಅವರು ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರಾಗಿರುವವರು ಅಬ್ದುಲ್ ರಹೀಂ, ಮಹಮದ್ ಫಯಾಜ್, ಫಾಯೀಸ್, ಮಹಮದ್ ಯಾಸೀನ್ ಬಂಧನ ಅಗಬೇಕಿರುವ ಆರೋಪಿಗಳು! ಅಯೂಬ್, ರಿಯಾಜ್ ಭಟ್ಕಳ್, ವಲೀ (ಎಲ್‌ಇಟಿ ಕಮಾಂಡರ್ ಪಾಕ್), ಅಲೀ
(ಮಸ್ಕಟ್ ), ಸಲೀಂ (ಢಾಕಾ ಬಾಂಗ್ಲಾ), ಜಾಹೀದ್, ಶೋಹೆಬ್ ಜೈಲಿನಲ್ಲಿರುವ ಆರೋಪಿಗಳು ಯಾರ್ಯಾರು?
ಅಬ್ದುಲ್ ನಾಜೀರ್ ಮದನಿ (ಷರತ್ತು ಬದ್ಧ ಜಾಮೀನು ಸಿಕ್ಕಿದೆ) ಟಿ. ನಜೀರ್, ಇ.ಟಿ ಜೈನುದ್ದೀನ್, ಸರ್ಪರಾಜ್ ನವಾಜ್, ಇ.ಟಿ ಶರಾಫುದ್ದೀನ್, ಅಬ್ದುಲ್ ಜಬ್ಟಾರ್, ಎ.ಇ ಮನಾಫ್, ಮುಜೀಬ್ , ಮಹಮದ್ ಸಕಾರಿಯಾ, ಬದ್ರುದ್ದೀನ್,
ಫೈಸಲ್, ಅಬ್ದುಲ್ ಜಲೀಲ್, ಉಮರ್ ಫಾರೂಕ್, ಇಬ್ರಾಹಿಂ ಮೌಲ್ವಿ, ಸಫಾಜ್, ಸಮೀರ್, ಸಫುದ್ದೀನ್, ತಾಜುದ್ದೀನ್,
ಅಬ್ದುಲ್ ಖಾದರ್, ಪಿ.ಬಿ ಸಾಬೀರ್ ಮಂಜುನಾಥ್ ಲಘುಮೇನಹಳ್ಳಿ