Advertisement

ಹಿಂದುಳಿದ ವರ್ಗಗಳ ಧ್ವನಿಯಾಗಿದ್ದ ಅರಸು

12:50 PM Aug 25, 2020 | Suhan S |

ದೇವನಹಳ್ಳಿ: ದೇವರಾಜು ಅರಸು ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು ಎಂದು ದಿವ್ಯ ಜ್ಯೋತಿ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎನ್‌.ಚಂದ್ರಶೇಖರ್‌ ತಿಳಿಸಿದರು.

Advertisement

ನಗರದ ಮರಳುಬಾಗಿಲಿನ ದಿವ್ಯ ಜ್ಯೋತಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಕಚೇರಿಯಲ್ಲಿ ಶ್ರೀ ಕೃಷ್ಣ ಪಾಂಡವ ತಿಗಳ ಕ್ಷತ್ರಿಯ ಸಂಘ, ದಿವ್ಯ ಜ್ಯೋತಿ ಕ್ರೆಡಿಟ್‌ಕೋ-ಆಪರೇಟಿವ್‌ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ  ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮದಿನಾ ಚರಣೆಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಲಹೊರುವ ಪದ್ಧತಿ, ಜೀತ ಪದ್ಧತಿಗಳಂತಹ ಅನಿಷ್ಠಗಳನ್ನು ಹೋಗಲಾಡಿಸಿ, ಉಳುವವನೇ ಭೂ ಒಡೆಯ ಕಾನೂನು ಜಾರಿಗೆ ತಂದು ಭೂ ಸುಧಾರಣೆಗೆ ಕಾರಣರಾದ ದೇವರಾಜ ಅರಸು ಸಮಾನತೆಗಾಗಿ ಶ್ರಮಿಸಿದರು. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಇಂದಿನ ಯುವ ಪೀಳಿಗೆ ಸಾಗಬೇಕೆಂದರು.

ಸಂಘದ ಕಾರ್ಯದರ್ಶಿ ಡಾ.ಆರ್‌.ವೆಂಕಟರಾಜು, ದೇವರಾಜು ಅರಸು ಅವರು ಬಹಳ ಅಪರೂಪದ ರಾಜ ಕಾರಣಿ. ಅವರು ಬಹಳ ಓದಿನಲ್ಲಿ ಮುಂಚೂಣಿಯಾಗಿದ್ದು, ಹಲವು ವಿಷಯವನ್ನು ತಿಳಿದುಕೊಂಡಿದ್ದರು. ಸಾಮಾಜಿಕ ನ್ಯಾಯಕ್ಕೆ ತಮ್ಮ ಜೀವನ ಮೀಸಲಿಟ್ಟಿದ್ದರು. ಎಲ್ಲರನ್ನೂ ಸಮಾನತೆಯಲ್ಲಿ ಕಾಣುತ್ತಿದ್ದರು. ಹಿಂದುಳಿದ ವರ್ಗಗಳನ್ನು ಗುರ್ತಿಸಿ ಸೌಲಭ್ಯ ಕಲ್ಪಿಸಿದ್ದರು. ದೇವರಾಜು ಅರಸು ಆಡಳಿತ ಇಂದಿನವರೆಗೂ ಮಾದಿರಿ ಎಂದು ಹೇಳಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಮುನಿರಾಜು (ಅಪ್ಪಯ್ಯ), ಹಿರಿಯ ಸಲಹೆಗಾರ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಎನ್‌.ಕೃಷ್ಣಪ್ಪ, ಚಂದ್ರು, ನಾಗರಾಜ್‌, ಪುರುಷೋತ್ತಮ್‌, ಮುರಳಿ, ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next