Advertisement

ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ: ಪಾಟೀಲ

06:14 PM May 18, 2020 | Naveen |

ದೇವರಹಿಪ್ಪರಗಿ: ಕ್ವಾರಂಟೈನ್‌ ಕೇಂದ್ರ ಗಳಲ್ಲಿರುವ ಕಾರ್ಮಿಕರಿಗೆ ಊಟ, ಉಪಹಾರ, ಕುಡಿಯುವ ನೀರು ಸಮರ್ಪಕವಾಗಿ ದೊರೆಯುವಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೂಚಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ವಾರಂಟೈನ್‌ ಕೇಂದ್ರಗಳಲ್ಲಿ ತಂಗಿರುವ ಕಾರ್ಮಿಕರಿಗೆ ಊಟ ಉಪಹಾರದಲ್ಲಿ ತೊಂದರೆ ಕಂಡು ಬಂದರೆ ಅಂತಹ ಕೇಂದ್ರಕ್ಕೆ ಬೇಕಾದ ದವಸ ಧಾನ್ಯಗಳನ್ನು ನಾನೆ ಸ್ವತಹ ಕೊಡುತ್ತೇನೆ. ಕಾರ್ಮಿಕರಿಗೆ ಯಾವುದೆ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿ, ಮೇ 19 ರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಕೊರೊನಾ ವಾರಿಯರ್ಗಳಿಗೆ ದಿನಸಿ ಕಿಟ್‌ ವಿತರಿಸಿ ನಂತರ ಕ್ವಾರಂಟೈನ್‌ ಕೇಂದ್ರಗಳಿಗೆ ಭೇಟಿ ನೀಡಲಾಗುವುದೆಂದು ಹೇಳಿದರು. ತಹಶೀಲ್ದಾರ್‌ ವೈ.ಬಿ. ನಾಗಠಾಣ ಮಾಹಿತಿ ನೀಡಿ, ದೇವರಹಿಪ್ಪರಗಿ ತಾಲೂಕಿನ 35 ಕೇಂದ್ರಗಳಲ್ಲಿ ಮಹಾರಾಷ್ಟ್ರದಿಂದ ಮರಳಿರುವ 1148 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಎಲ್ಲ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ತಾಳಿಕೋಟೆ ತಹಶೀಲ್ದಾರ್‌ ಅನೀಲಕುಮಾರ ಢವಳಗಿ, ಸಿಂದಗಿ ತಾಲೂಕು ಪಂಚಾಯಿತಿ ಇಒ ಸುನೀಲ ಮದ್ದಿನ್‌, ಸಿಂದಗಿ ಸಿಪಿಐ ಸತೀಶ ಕಾಂಬ್ಳೆ, ಪಿಎಸ್‌ಐಗಳಾದ ಸುರೇಶ ಗಡ್ಡಿ, ರೇಣುಕಾ ಹಳ್ಳಿ, ಪಶು ಸಂಗೋಪನೆ ಇಲಾಖೆಯ ಡಾ| ಎಸ್‌.ಸಿ.ಚೌಧರಿ, ಕೃಷಿ ಇಲಾಖೆಯ ಸೋಮನಗೌಡ ಬಿರಾದಾರ, ಟಿಎಚ್‌ಒ ಡಾ| ಶಂಕರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್‌.ಡಿ.ಮುಲ್ಲಾ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ಬಿ.ಎಸ್‌.ಡಿಗ್ಗಿ, ಎಸ್‌.ಎಸ್‌. ಯಡಹಳ್ಳಿ, ಬಸಯ್ಯ ಗೋಲಮಠ, ಮಲ್ಲು ಮಸಳಿ, ಶಿವಾನಂದ ಮೂಲಿಮನಿ, ಕೆ.ಎಸ್‌.ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಿಜೆಪಿ ಧುರೀಣ ಸಿದ್ದು ಬುಳ್ಳಾ, ಪ್ರಭುಗೌಡ ಬಿರಾದಾರ (ಅಸ್ಕಿ) ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next